ವಿಮಾನ ಪ್ರಯಾಣಿಕನಿಂದ 41 ಲ.ರೂ.ಮೌಲ್ಯದ ಚಿನ್ನ ವಶ
Update: 2016-10-24 14:49 IST
ಹೈದರಾಬಾದ್,ಅ.24: ಇಲ್ಲಿಯ ರಾಜೀವ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ಬೆಳಿಗ್ಗೆ ಪ್ರಯಾಣಿಕನೋರ್ವನನ್ನು ಬಂಧಿಸಿರುವ ಕಸ್ಟಮ್ಸ್ ಅಧಿಕಾರಿಗಳು ಆತ ತನ್ನ ಗುದನಾಳದಲ್ಲಿ ಬಚ್ಚಿಟ್ಟುಕೊಂಡು ಸಾಗಿಸುತ್ತಿದ್ದ ಸುಮಾರು 41 ಲ.ರೂ. ವೌಲ್ಯದ 1.3 ಕೆ.ಜಿ.ಬಂಗಾರವನ್ನು ವಶಪಡಿಸಿಕೊಂಡಿದ್ದಾರೆ.
ಮಸ್ಕತ್‌ನಿಂದ ಹೈದರಾಬಾದ್ ಮೂಲಕ ಚೆನ್ನೈಗೆ ಪ್ರಯಾಣಿಸುತ್ತಿದ್ದ ಆರೋಪಿಯನ್ನು ವಿಮಾನದಲ್ಲಿ ತಪಾಸಣೆಗೊಳಪಡಿಸಿದಾಗ ಆತ ಕಳ್ಳ ಸಾಗಾಣಿಕೆ ಮಾಡುತ್ತಿದ್ದ 1,349 ಗ್ರಾಂ.ತೂಕದ ಏಳು ಚಿನ್ನದ ಗಟ್ಟಿಗಳು ಪತ್ತೆಯಾಗಿವೆ. ಇವುಗಳ ವೌಲ್ಯ 40,85,000 ರೂ.ಗಳಾಗಿವೆ ಎಂದು ಹಿರಿಯ ಕಸ್ಟಮ್ಸ್ ಅಧಿಕಾರಿಯೋರ್ವರು ತಿಳಿಸಿದರು.