ಉತ್ತರಪ್ರದೇಶ: ಮುಖ್ಯಮಂತ್ರಿ ಅಖಿಲೇಶ್‌ರನ್ನು ಪಾರ್ಟಿಯಿಂದ ಹೊರದಬ್ಬುವ ಸಾಧ್ಯತೆ

Update: 2016-10-24 10:48 GMT

ಲಕ್ನೊ, ಅಕ್ಟೋಬರ್ 24: ಸಮಾಜವಾದಿ ಪಾರ್ಟಿಯಿಂದ ಮುಖ್ಯಮಂತ್ರಿ ಅಖಿಲೇಶ್ ಯಾದವ್‌ರನ್ನು ಹೊರಹಾಕುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಪಾರ್ಟಿಯಲ್ಲಿ ಎದ್ದಿರುವ ಬಿಕ್ಕಟ್ಟು ಕುರಿತು ಚರ್ಚಿಸಲು ಮುಲಾಯಂ ಸಿಂಗ್ ಯಾದವ್ ಕರೆದಿರುವ ಸಭೆಯಲ್ಲಿ ಈ ವಿಷಯ ನಿರ್ಧಾರವಾಗಲಿದೆ ಎಂದು ಮೂಲಗಳು ತಿಳಿಸಿವೆ.

   ಪಾರ್ಟಿಯಲ್ಲಿ ಸೃಷ್ಟಿಯಾದ ಅಖಿಲೇಶ್ ಯಾದವ್ ಮತ್ತು ಅವರ ಚಿಕ್ಕಪ್ಪ ಹಾಗೂ ಪಾರ್ಟಿಯ ರಾಜ್ಯ ಅಧ್ಯಕ್ಷ ಶಿವಪಾಲ್ ಯಾದವ್‌ರ ನಡುವಿನ ವಿವಾದ ವಿಷಮಸ್ಥಿತಿಗೆ ತಲುಪಿದ್ದರಿಂದ ಮುಲಾಯಂ ಸಿಂಗ್ ಪಾರ್ಟಿಯ ನಾಯಕರ ತುರ್ತುಸಭೆಯನ್ನು ಕರೆದಿದ್ದಾರೆ ಎನ್ನಲಾಗಿದೆ. ಸಭೆಯಲ್ಲಿ ಅಖಿಲೇಶ್ ಯಾದವ್‌ರು ಕೂಡಾ ಭಾಗವಹಿಸುತ್ತಿದ್ದಾರೆ. ಈ ನಡುವೆ ಸಭೆ ನಡೆಯುವ ಲಕ್ನೊದ ಪಾರ್ಟಿ ಕಚೇರಿಯ ಮುಂದೆ ಅಖಿಲೇಶ್, ಶಿವಪಾಲ್ ಯಾದವ್ ಬೆಂಬಲಿಗರ ನಡುವೆ ಘರ್ಷಣೆ ಆಗಿದೆ. ಪಾರ್ಟಿ ಒಡೆಯುವುದಿಲ್ಲ ಎಂದು ಸ್ಪಷ್ಟ ಸೂಚನೆಗಳಿವೆ. ಜೊತೆಗೆ ಅಖಿಲೇಶ್ ಬೇರೆಯೇ ಪಕ್ಷ ಕಟ್ಟುತ್ತಾರೆಂಬ ಸೂಚನೆಗಳೂ ಇವೆ. ಒಂದುವೇಳೆ ಅಂತಹ ಪರಿಸ್ಥಿತಿ ನಿರ್ಮಾಣವಾದರೆ ಬಿಹಾರದಲ್ಲಿ ಬಿಜೆಪಿ ವಿರುದ್ಧ ಪ್ರಯೋಗಿಸಿದ್ದ ಮಹಾಮೈತ್ರಿಯ ಮಾದರಿಯಲ್ಲಿ ಉತ್ತರ ಪ್ರದೇಶ ಚುನಾವಣೆಯ ವೇಳೆ ಅಖಿಲೇಶ್ ವಿರುದ್ಧ ಪ್ರಯೋಗಿಸಲು ಶಿವಪಾಲ್ ಸಜ್ಜಾಗಿದ್ದಾರೆ ಎನ್ನಲಾಗಿದೆ.

 ಈಗಾಗಲೇ ಶಿವಪಾಲ್ ಆರ್‌ಎಲ್ ಡಿ ನಾಯಕ ಅಜಿತ್ ಸಿಂಗ್ ರನ್ನು ಕರೆದು ಬೆಂಬಲವನ್ನು ಯಾಚಿಸಿದ್ದಾರೆ. ಆರ್‌ಎಲ್‌ಡಿ ಜೊತೆಗೆ ಕಾಂಗ್ರೆಸ್ ಜೆಡಿಯು ಬೆಂಬಲವನ್ನು ಕೂಡಾ ಅಖಿಲೇಶ್ ವಿರುದ್ಧ ರೂಪೀಕರಿಸಲು ಶಿವಪಾಲ್ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಈ ನಡುವೆ ಅಖಿಲೇಶ್ ಯಾದವ್ ವಿಧಾನಸಭೆಯಲ್ಲಿ ಬಹುಮತವನ್ನು ಸಾಬೀತುಪಡಿಸಬೇಕೆಂದು ಬಿಜೆಪಿ ಆಗ್ರಹಿಸಿದೆ. ಮುಂದಿನ ವರ್ಷ ಮಾರ್ಚ್‌ನಲ್ಲಿ ಉತ್ತರಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಅಖಿಲೇಶ್ -ಶಿವಪಾಲ್‌ರ ನಡುವಿನ ಘರ್ಷಣೆ ಸಮಾಜವಾದಿ ಪಾರ್ಟಿಗೆ ಮತ್ತು ಮುಲಾಯಂ ಸಿಂಗ್ ಯಾದವ್‌ಗೆ ಭಾರೀ ತಲೆನೋವಾಗಿ ಪರಿಣಮಿಸಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News