×
Ad

ತಪ್ಪು ತಿದ್ದಿಕೊಳ್ಳಲು ನ್ಯಾಯಾಧೀಶರು ಸಿದ್ಧರಿರಬೇಕು: ಕಟ್ಜು

Update: 2016-10-24 16:29 IST

ಹೊಸದಿಲ್ಲಿ,ಅಕ್ಟೋಬರ್ 24: ಸೌಮ್ಯಾ ಕೊಲೆ ಪ್ರಕರಣದಲ್ಲಿ ನ್ಯಾಯಾಧೀಶರು ಎಸಗಿದ ತಪ್ಪು ತಿದ್ದಿಕೊಳ್ಳಲು ತಯಾರಾಗಬೇಕು ಎಂದು ಸುಪ್ರೀಂಕೋರ್ಟಿನ ಮಾಜಿ ನ್ಯಾಯಾಧೀಶ ಮಾರ್ಕಂಡೇಯ ಕಟ್ಜು ಫೇಸ್ ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. ‘ತಪ್ಪು ಸಂಭವಿಸದವರಾಗಿ ಜಡ್ಜ್‌ಗಳು ಹುಟ್ಟಿಬರುವುದಿಲ್ಲ’ ಎಂದ ಜಗತ್ಪ್ರಸಿದ್ಧ ಬ್ರಿಟಿಷ್ ನ್ಯಾಯಾಧೀಶ ಲಾರ್ಡ್ ಡೆನ್ನಿಂಗ್‌ರ ಮಾತುಗಳನ್ನು ತನ್ನ ಪೋಸ್ಟ್‌ನಲ್ಲಿ ಕಟ್ಜು ಉದ್ಧರಿಸಿದ್ದಾರೆಂದು ವರದಿಯೊಂದು ತಿಳಿಸಿದೆ.

 ಸುಪ್ರೀಂಕೋರ್ಟು ಜಡ್ಜ್ ಆಗಿದ್ದಾಗ ತನ್ನಿಂದಲೂ ತಪ್ಪು ಸಂಭವಿಸಿದೆ. ಸೌಮ್ಯಾಕೊಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟಿನಿಂದ ಉಂಟಾಗಿರುವತಪ್ಪನ್ನು ತಿದ್ದಿಕೊಳ್ಳಬೇಕೆಂಬ ನಿಲುವಿನಲ್ಲಿ ತಾನು ದೃಢವಾಗಿ ನಿಲ್ಲುತ್ತೇನೆ. ತಪ್ಪನ್ನು ತಿದ್ದಿಕೊಳ್ಳಲು ಜಡ್ಜ್‌ಗಳು ಸಿದ್ಧರಾಗಬೇಕು. ತನಗೆ ನೋಟಿಸ್ ನೀಡುವ ಸುಪ್ರೀಂಕೋರ್ಟಿನ ಆದೇಶ ಬಂದಾಗ ಮೊದಲು ಹಾಜರಾಗುವುದು ಬೇಡ ಎಂದು ತೀರ್ಮಾನಿಸಿದ್ದೆ.

  ಆದರೆ ತೀರ್ಪಿನಲ್ಲಿರುವ ತಪ್ಪನ್ನು ತೋರಿಸಿಕೊಡಲು ವಿನಂತಿಸಿದ್ದರಿಂದ ನವೆಂಬರ್ ಹನ್ನೊಂದರಂದು ಸೌಮ್ಯಾಪ್ರಕರಣದ ಮರುಪರಿಶೀಲನಾ ಅರ್ಜಿಯನ್ನು ಪುನಃ ಪರಿಗಣಿಸುವಾಗ ತನ್ನ ವಾದವನ್ನು ಮಂಡಿಸಲಿಕ್ಕಾಗಿ ಹಾಜರಾಗಲು ತಾನು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

 ಕಳೆದ ಬಾರಿ ಸುಪ್ರೀಂಕೋರ್ಟು ಸೌಮ್ಯಾ ಕೊಲೆ ಪ್ರಕರಣದಲ್ಲಿ ತೀರ್ಪು ನೀಡುವಾಗ ಕೇರಳ ಸರಕಾರ ಮುಂದಿಟ್ಟ ವಾದವನ್ನು ಸಂಪೂರ್ಣ ತಿರಸ್ಕರಿಸಿತ್ತು. ಮತ್ತು ಗೋವಿಂದಚಾಮಿಗೆ ಕೆಳಕೋರ್ಟು ವಿಧಿಸಿದ್ದ ಗಲ್ಲುಶಿಕ್ಷೆಯನ್ನು ಜೀವಾವಧಿಶಿಕ್ಷೆಗಿಳಿಸಿ ತಿರ್ಪು ನೀಡಿತ್ತು ಎಂದುವರದಿತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News