×
Ad

ಫೊಟೋಗ್ರಫಿ ಆಸಕ್ತರಿಗೆ ಬರಲಿದೆ ಹೊಸ 'ಕ್ಯಾಮೆರಾ ಸ್ಮಾರ್ಟ್ ಫೋನ್'

Update: 2016-10-24 23:30 IST

ಹೆಚ್ಚು ಜನಪ್ರಿಯವಾಗದ ಡಿವೈಸ್ ಐಎಂ5 ತಂದು ವಿಫಲವಾದ ಮೇಲೆ ಈಗ ಫೋಟೋಗ್ರಫಿ ಕಂಪನಿ ಕೋಡಾಕ್ ತನ್ನ ಹೊಸ ಡಿವೈಸ್ ಏಕ್ತ್ರಾ ಹೊರತಂದಿದೆ. ಕ್ಯಾಮರಾದಂತೆಯೇ ಇರುವ ಏಕ್ತ್ರಾ ಸ್ಮಾರ್ಟ್‌ಫೋನ್ ಉದ್ದೇಶಿತ ಶಟರ್‌ಬಗ್ಸ್‌ಗಳನ್ನು ಹೊರತರಲಿದೆ.

ತನ್ನ 1941 ರೇಂಜ್‌ಫೈಂಡರ್ ಹೆಸರಿನಲ್ಲಿರುವ (1970ರ 110 ಫಿಲ್ಮ್ ಕ್ಯಾಮೆರಾ ರೇಂಜ್) ಈ ಹ್ಯಾಂಡ್‌ಸೆಟ್‌ನ ಹಿಂಬದಿಯನ್ನು ಲೆದರೆಟ್‌ನಲ್ಲಿ ರ್ಯಾಪ್ ಮಾಡಲಾಗಿದೆ. ಒಂದು ಬದಿಯಲ್ಲಿ ಸ್ವಲ್ಪವೇ ಕರ್ವ್ ಆಗಿರುವ ಗ್ರಿಪ್ ಮತ್ತು ಹೆಚ್ಚು ಆಪ್ತವಾಗಿರುವ ಬಟನ್ ಟಪ್ ಮೇಲಿದೆ.

ಡಿಸೆಂಬರ್ ನಿಂದ ಇದು ಬ್ರಿಟನ್‌ನಲ್ಲಿ 450 ಪೌಂಡ್‌ಗಳಿಗೆ (550 ಡಾಲರ್) ಲಭ್ಯವಿದೆ. ಸ್ಮಾರ್ಟ್‌ಫೋನ್‌ನಲ್ಲಿ ದೊಡ್ಡ, ಪ್ರೊಟ್ರೂಡಿಂಗ್ ಲೆನ್ಸ್ ಹಿಂಬದಿಯಿಂದ ಹೊರಬರುತ್ತದೆ ಮತ್ತು 21 ಎಂಪಿ ಸೋನಿ ಸೆನ್ಸರ್ (IMX230) ಹುಡ್ ಅಡಿಯಲ್ಲಿದೆ. ಇದು ಫೋಟೋಗ್ರಾಫರ್ ಸ್ನೇಹಿಯೂ ಆಗಿದೆ.

ಬುಲ್ಲಿಟ್ ಎನ್ನುವ ಫೋನ್ ತಯಾರಕ ಕಂಪನಿಯನ್ನು ಈ ಡಿವೈಸ್ ಮಾಡಲು ಕೋಡಾಕ್ ನೇಮಿಸಿದೆ. ಸ್ಮಾರ್ಟ್‌ಫೋನ್ ಮೇಲಿರುವ ಕ್ಯಾಮೆರಾ ಆಪ್‌ನಲ್ಲಿ ಡಿಜಿಟಲ್ 'ಸೀನ್ ಸೆಲೆಕ್ಷನ್ ಡಯಲ್‌'ಇದ್ದು, ನಿಮಗೆ ವಿಭಿನ್ನ ಶೂಟಿಂಗ್ ಮೋಡ್‌ಗಳನ್ನು ಪ್ರವೇಶಿಸಲು ಅವಕಾಶ ಕೊಡುತ್ತದೆ. ಬುಲಿಟ್ ಸ್ನಾಪ್‌ಸೀಡ್ ಎನ್ನುವ ಡಿಫಾಲ್ಟ್ ಫೋಟೋ ಎಡಿಟಿಂಗ್ ಆಪ್ ಅನ್ನೂ ತಯಾರಿಸಿದೆ. ಪ್ಲೇ ಸ್ಟೋರ್‌ನಲ್ಲಿ ಇದು ಒಂದು ಅ್ಯುತ್ತಮ ಆಯ್ಕೆ ಎನ್ನುವ ಹಾಗಿದೆ.

ಫೋನ್ ಒಂದು ಡೆಕಾ ಕೋರ್ ಮೀಡಿಯಾ ಟೆಕ್ ಹೆಲಿಕೋ ಎಕ್ಸ್20 ಪ್ರೊಸೆಸರ್ ಹೊಂದಿದೆ ಮತ್ತು 3ಜಿಬಿ ರ್ಯಾಮ್ ಹೊಂದಿದೆ. ಇದು 32 ಜಿಬಿ ಆಂತರಿಕ ಸ್ಟೋರೇಜ್ ಕೂಡ ಹೊಂದಿದೆ. ಅದನ್ನು ಮೈಕ್ರೋ ಎಸ್‌ಡಿ ಕಾರ್ಡ್ ಹಾಕಿ 128 ಜಿಬಿವರೆಗೆ ಏರಿಸಬಹುದು. 3000 ಎಂಎಎಚ್ ಬ್ಯಾಟರಿಯೂ ಪಂಪ್ ಎಕ್ಸ್‌ಪ್ರೆಸ್ ತ್ವರಿತ ಚಾರ್ಜಿಂಗ್‌ಗೆ ನೆರವಾಗುತ್ತದೆ.

5 ಇಂಚ್, 1080ಪಿ ಡಿಸ್ ಪ್ಲೇಯಲ್ಲಿ ಆಂಡ್ರಾಯ್ಡಾ 6.0 ಮಾರ್ಷ್‌ಮ್ಯಾಲೋನ ಸ್ಟಾಕ್ ವರ್ಷನ್ ಹೊಂದಿದೆ.

ಕೃಪೆ: http://www.thenewsminute.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News