ಮುಲಾಯಂ ಸಿಂಗ್‌ ಯಾದವ್‌ ಮನೆಯಲ್ಲಿ ಸಂಧಾನ ಸಭೆ; ಪಕ್ಷದ ಆಂತರಿಕ ಭಿಕ್ಕಟ್ಟು ಶಮನ ಸಾಧ್ಯತೆ

Update: 2016-10-25 06:26 GMT

ಲಕ್ನೋ, ಅ.25: ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮುಲಾಯಂ ಸಿಂಗ್‌ ಯಾದವ್‌ ಮನೆಯಲ್ಲಿ  ಇಂದು ಸಂಧಾನ ಸಭೆ ನಡೆಯುತ್ತಿದ್ದು,  ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಭಿಕ್ಕಟ್ಟು ಶಮನವಾಗುವ ಸಾಧ್ಯತೆ ಕಂಡು ಬಂದಿದೆ.

ಇದೇ ವೇಳೆ ಮುಲಾಯಂ ಸಿಂಗ್‌ ಯಾದವ್‌ ಅವರು ಮುಖ್ಯ ಮಂತ್ರಿ ಹಾಗೂ ಪುತ್ರ ಅಖಿಲೇಶ್‌ ಯಾದವ್‌ ಅವರನ್ನು ತನ್ನ ನಿವಾಸಕ್ಕೆ ಕರೆಸಿ ಮಾತುಕತೆ ನಡೆಸಿದ್ದಾರೆ. ವಜಾಗೊಂಡಿರುವ ಎಸ್‌ಪಿ ರಾಜ್ಯಾಧ್ಯಕ್ಷ ಶಿವಪಾಲ್ ಸಿಂಗ್ ಯಾದವ್‌  ಸೇರಿದಂತೆ ಮೂವರು ಸಂಧಾನ ಸಭೆಯಲ್ಲಿ ಭಾಗವಹಿಸಿದ್ದಾರೆ. 
ವಜಾಗೊಂಡಿರುವ  ಅಖಿಲೇಶ್ ಅವರ ಚಿಕ್ಕಪ್ಪ ಶಿವಪಾಲ್ ಯಾದವ್, ನಾರದ್ ರಾಯ್, ಓಂ ಪ್ರಕಾಶ್ ಸಿಂಗ್ ಮತ್ತು ಸಯೆದಾ ಶದಾಬ್ ಫಾತೀಮಾ  ಮರಳಿ ಸಚಿವ ಸಂಪುಟ ಸೇರ್ಪಡೆಗೊಳ್ಳಲಿದ್ದಾರೆ. ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News