ಬಾಡಿಗೆಗೆ ಇರುವವರು ಗುಲಾಮರಲ್ಲ

Update: 2016-10-25 18:31 GMT

ನಮ್ಮಲ್ಲಿ ಬಹಳಷ್ಟು ಮಂದಿ ಜೀವನದ ಒಂದಲ್ಲ ಒಂದು ಘಟ್ಟದಲ್ಲಿ ಸ್ನೇಹಿತರು ಅಥವಾ ಕುಟುಂಬದ ಜೊತೆಗೆ ಬಾಡಿಗೆ ಮನೆಯಲ್ಲಿ ನೆಲೆಸಿದವರೇ ಆಗಿದ್ದೇವೆ. ಆದರೆ ಬಾಡಿಗೆದಾರರಾಗಿ ನಮ್ಮ ಹಕ್ಕುಗಳ ಬಗ್ಗೆ ನಮಗೆಷ್ಟು ಗೊತ್ತಿದೆ? ಬಾಡಿಗೆದಾರ ಮತ್ತು ಮಾಲೀಕರ ಸಂಬಂಧವನ್ನು ಲೀಸ್ ಒಪ್ಪಂದಲ್ಲಿ ಬರೆಯಲಾಗುತ್ತದೆ. ಹೀಗಾಗಿ ಲೀಸ್‌ನ ಒಟ್ಟು ವಿವರಗಳತ್ತ ಗಮನಹರಿಸಬೇಕು. ಬಾಡಿಗೆದಾರರ 10 ಪ್ರಮುಖ ಹಕ್ಕುಗಳತ್ತ ನಾವು ಇಲ್ಲಿ ಗಮನಹರಿಸಿದ್ದೇವೆ. ನೀವೂ ಇದನ್ನು ಮುರಿಯದೆ ಇರುವಂತೆ ಮಾಲೀಕರನ್ನು ಎಚ್ಚರಿಸಬಹುದು.

1. ಮೌಖಿಕ ಒಪ್ಪಂದ

ಮಾಲೀಕರು ಲಿಖಿತ ಒಪ್ಪಂದದ ಬದಲಾಗಿ ಬಾಡಿಗೆಗೆ ಮೌಖಿಕ ಒಪ್ಪಂದಕ್ಕೆ ಬರಲು ಹೇಳಿದರೆ ಒಪ್ಪಬೇಡಿ. ಬಾಡಿಗೆದಾರನಾಗುವ ಕಾನೂನಿನಲ್ಲಿ ಎಲ್ಲಾ ಒಪ್ಪಂದಗಳೂ 12 ತಿಂಗಳು ಅಥವಾ ಹೆಚ್ಚಿನ ಅವಧಿಗೆ ಇರಬೇಕು. ಲಿಖಿತವಾಗಿ ಬರೆದು ನೊಂದಣಿ ಮಾಡಿಕೊಂಡಲ್ಲಿ ಮಾತ್ರ ಕಾನೂನಾತ್ಮಕವಾಗಿ ಅದಕ್ಕೆ ಮಾನ್ಯತೆ ಸಿಗಲಿದೆ.

2. ಶಾಂತಿಯುತ ಜೀವನ

ನಿಮ್ಮ ಮಾಲೀಕರು ನೇರವಾಗಿ ಮೊದಲೇ ತಿಳಿಸದೆ ಅಥವಾ ಸಂಪರ್ಕಿಸದೆ ನಿಮ್ಮ ಮನೆಗೆ ಪ್ರವೇಶಿಸುವಂತಿಲ್ಲ. ಪ್ರತೀ ಬಾಡಿಗೆದಾರನಿಗೂ ಶಾಂತಿಯುತವಾಗಿ ಆಸ್ತಿಯಲ್ಲಿ ನೆಲೆಸುವ ಅಧಿಕಾರವಿದೆ. ಮಾಲಕರು ಸೇರಿದಂತೆ ಯಾರೂ ಕಿರಿಕಿರಿ ಮಾಡುವಂತಿಲ್ಲ.

3. ಅಕಾರಣ ನಿರೀಕ್ಷೆಗಳು

ಯಾವುದೇ ಸಂದರ್ಭದಲ್ಲೂ ಬಾಡಿಗೆದಾರ ಕಾಯ್ದೆಯಡಿ ಮಾಲೀಕರು ನಿಮ್ಮನ್ನು ಸೂಕ್ತ ಕಾರಣ ಕೊಡದೆ ಮನೆ ಬಿಡುವಂತೆ ಹೇಳುವಂತಿಲ್ಲ.

4. ಸಮರ್ಪಕವಲ್ಲದ ನೊಟೀಸ್

ಮನೆಮಾಲಕರು ನಿಮ್ಮನ್ನು ಸರಿಯಾದ ಕಾರಣ ನೀಡದೆ ಅವೇಳೆಯಲ್ಲಿ ಮನೆ ಬಿಡುವಂತೆ ಒತ್ತಡ ತರುವ ಅಧಿಕಾರ ಹೊಂದಿಲ್ಲ. ಸಾಮಾನ್ಯವಾಗಿ ಸೂಕ್ತ ಸಮಯದ ಅವಧಿಯನ್ನು ಕೊಟ್ಟು, ಕಾನೂನು ಪ್ರಕಾರ ಒಂದು ತಿಂಗಳ ಅವಧಿಯಲ್ಲಿ ಅಥವಾ ಒಪ್ಪಂದದಲ್ಲಿ ತಿಳಿಸಲಾದ ಅವಧಿಯಲ್ಲಿ ಮನೆ ಬಿಡುವಂತೆ ಸೂಚಿಸಬೇಕು.

5. ಅಕ್ರಮ ವೆಚ್ಚಗಳು

ಮನೆ ಮಾಲಕರು ಆಸ್ತಿಗಾದ ನಷ್ಟಕ್ಕೆ ಸಂಬಂಧಿಸಿ ಅನಗತ್ಯ ವೆಚ್ಚಗಳನ್ನು ಬಾಡಿಗೆದಾರರ ಮೇಲೆ ಹಾಕುವಂತಿಲ್ಲ. ನಷ್ಟಗಳಿಗೆ ಆಗುವ ಖರ್ಚನ್ನು ಮಾಲಕರು ಭರಿಸಬೇಕೆಂದು ಕಾನೂನು ಹೇಳುತ್ತದೆ.

6. ಕೊನೆಯ ತಿಂಗಳ ಒಪ್ಪಂದ

ನಿಮ್ಮ ಭೂಮಾಲಕರಿಗೆ ನಿಮಗೆ ಬಾಡಿಗೆ ಕೊಡುವಂತೆ ಒತ್ತಡ ಹೇರಿ, ನಂತರ ನೊಟೀಸ್ ಅವಧಿಯೊಳಗೆ ನಿಮ್ಮ ಮುಂಗಡ ಠೇವಣಿ ಜೊತೆ ಸರಿಪಡಿಸುವಂತಿಲ್ಲ ಎನ್ನುವ ಕಾನೂನು ಹಕ್ಕು ಇರುವುದಿಲ್ಲ

7. ಮುಂಗಡ ಠೇವಣಿ ಮರುಪಾವತಿ

ಬಾಡಿಗೆಯ ಭದ್ರತೆಯಾಗಿ ನೀವು ಕೊಟ್ಟಿರುವ ಮುಂಗಡ ಪಾವತಿಯನ್ನು ನೀವು ಮನೆ ಬಿಡುವಾಗ ನಿಮ್ಮ ಭೂಮಾಲಕರು ಮರಳಿ ಕೊಡಬೇಕು.

8. ಬಾಡಿಗೆದಾರನ ನಿಧನ

ನಿಧನರಾದ ವ್ಯಕ್ತಿಯ ಕುಟುಂಬವನ್ನು ಸೂಕ್ತ ಕಾರಣ ನೀಡದೆ ಮನೆ ಬಿಡುವಂತೆ ಹೇಳುವಂತಿಲ್ಲ. ನಿಧನರಾದ ವ್ಯಕ್ತಿಯ ಕುಟುಂಬಕ್ಕೆ ಕಾನೂನಿನ ಪ್ರಕಾರ ಅದೇ ಮನೆಯಲ್ಲಿ ಮುಂದುವರಿಯುವ ಹಕ್ಕಿರುತ್ತದೆ.

9. ಬಾಡಿಗೆಯಲ್ಲಿ ಏರಿಕೆ

ಬಾಡಿಗೆದಾರರು ಒಪ್ಪಂದದಲ್ಲಿ ಒಪ್ಪಿಕೊಂಡ ನಿಯಮಗಳಿಗೆ ವಿರುದ್ಧವಾಗಿ ಬಾಡಿಗೆಯನ್ನು ಹೆಚ್ಚಿಸುವಂತೆ ಕೇಳುವಂತಿಲ್ಲ.

ದೇಶದ ಕಾನೂನಿನ ಪ್ರಕಾರ ಪ್ರತೀ ವರ್ಷ ಅಥವಾ ನಿರ್ಧರಿತ ಅವಧಿಗೆ ಬಾಡಿಗೆಯನ್ನು ಹೆಚ್ಚಿಸುವ ವಿಷಯದಲ್ಲಿ ಲೆಕ್ಕ ಮಾಡುವ ಒಂದು ಸ್ಥಿರ ಸಿದ್ಧಾಂತವಿದೆ. ಈ ಸಿದ್ಧಾಂತಕ್ಕೆ ತಕ್ಕಂತೆ ಬಾಡಿಗೆ ಮೊತ್ತವನ್ನು ಹೆಚ್ಚಿಸಿದಲ್ಲಿ ಮಾತ್ರ ಬಾಡಿಗೆದಾರ ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಾಗುತ್ತದೆ.

10. ಒತ್ತಡಪೂರ್ವಕ ವಿಸ್ತರಣೆ

ನಿಮ್ಮ ಭೂಮಾಲಕರು ನಿರಂತರವಾಗಿ ಬಾಡಿಗೆದಾರನಾಗಿ ಮುಂದುವರಿಯುವಂತೆ ಒತ್ತಡ ಹೇರುವಂತಿಲ್ಲ. ಬಾಡಿಗೆದಾರನ ಬಳಿ ಸೂಕ್ತ ಕಾರಣ ನೀಡಿ ಮನೆ ಬಿಡುವ ಹಕ್ಕಿರುತ್ತದೆ.

ಕೃಪೆ: http://www.businesstoday.in/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News