ಫಿಲಿಪ್ಪೀನ್ಸ್‌ನ ಈ ದಂಪತಿ ತಲಾ 100ಡಾಲರ್ ಪಡೆದು 800 ಕೊಲೆ ಮಾಡಿದ್ದಾರೆ!

Update: 2016-10-25 12:46 GMT

ಫಿಲಿಪ್ಪೀನ್ಸ್,ಅಕ್ಟೋಬರ್ 25: ರಾಡ್ರಿಗೊ ಡುಟಾರ್ಟೆ ಫಿಲಿಪ್ಪೀನ್ಸ್ ಅಧ್ಯಕ್ಷರಾದ ಮೇಲೆ ಅಲ್ಲಿ ಡ್ರಗ್ ಡೀಲರ್ಸ್‌ಗಳ ಕಗ್ಗೊಲೆ ನಡೆಯುತ್ತಿದೆ. ರಾಡ್ರಿಗೊ ಅಧ್ಯಕ್ಷರಾಗಿ ನಾಲ್ಕುತಿಂಗಳಲ್ಲಿ ಈವರೆಗೆ 4000ಕ್ಕೂ ಹೆಚ್ಚು ಮಾದಕವಸ್ತು ವ್ಯಸನಿಗಳುಮತ್ತು ಡೀಲರ್‌ಗಳ ಹತ್ಯೆ ನಡೆಸಲಾಗಿದೆ. ಇಂತವರ ಶವ ರಸ್ತೆ ಬದಿಗಳಲ್ಲಿ ಆಗಾಗ ಬಿದ್ದಿರುತ್ತವೆ ಎಂದು ವರದಿಯಾಗಿದೆ.

ಇಲ್ಲಿ ಡ್ರಗ್ಸ್‌ಡೀಲರ್ಸ್‌ಗಳ ಕೊಲೆಯ ಗುತ್ತಿಗೆ ಪಡೆದಿರುವ ದಂಪತಿ, ತಲಾ ನೂರು ಡಾಲರ್‌ಗಳಂತೆ ಎಂಟು ನೂರು ಕೊಲೆ ನಾವು ಇಷ್ಟರಲ್ಲೇ ಮಾಡಿ ಮುಗಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಅವರ ಈ ಕೆಲಸದಿಂದ ಅಧ್ಯಕ್ಷ ರಾಡ್ರಿಗೊ ತುಂಬ ಖುಷಿಪಟ್ಟಿದ್ದಾರೆಂದು ಈ ದಂಪತಿ ಹೇಳಿಕೊಂಡಿದ್ದಾರೆ. ಮಾದಕವ್ಯಸನಿಗಳ ನಿರ್ಮೂಲನಕ್ಕೆ ರೂಪಿಸಲಾದ ಸೇನೆ ಇವರಿಗೆ ಮಾರ್ಗದರ್ಶನ ನೀಡುತ್ತದೆ.

ಪೊಲೀಸರು ಕೊಲ್ಲಬೇಕಾದವರ ಫೋಟೊ ಕೊಟ್ಟು ಮೂರುದಿವಸಗಳ ಅವಕಾಶ ಕೊಡುತ್ತಾರೆ. ಅಷ್ಟರಲ್ಲಿ ಅವರನ್ನು ಹುಡುಕಿ ಕೊಲೆಮಾಡುತ್ತೇವೆ ಎಂದು ಹೇಳಿದೆ. ಕೊಲ್ಲಬೇಕಾದ ವ್ಯಕ್ತಿಗೆ ಗುಂಡಿಟ್ಟು ಹತ್ಯೆ ಮಾಡಲಾಗುತ್ತದೆ. ಒಂದುವೇಳೆ ಆತ ಅರೆಜೀವವಾಗಿದ್ದರೆ ಇನ್ನೊಂದು ಗುಂಡುಹಾರಿಸಿ ಸತ್ತದ್ದನ್ನು ಖಾತ್ರಿ ಪಡಿಸಿಯೇ ತೆರಳುತ್ತೇವೆ ಎಂದು ದಂಪತಿ ಹೇಳುತ್ತಾರೆ.

ರಾಡ್ರಿಗೊ ಅಧ್ಯಕ್ಷರಾದ ಮೇಲೆ ಡ್ರಗ್‌ಮಾಫಿಯ ವಿರುದ್ಧ ಕಾನೂನು ಕ್ರಮ ಸಾಧ್ಯವಿಲ್ಲ, ಬದಲಾಗಿ ಗುಂಡುಹಾರಿಸಿಕೊಲ್ಲಬೇಕೆಂದು ಕರೆ ನೀಡಿದ್ದರು. ಈವರೆಗೆ 3000ಕ್ಕೂ ಅಧಿಕ ಡ್ರಗ್‌ಡೀಲರ್ಸ್‌ಗಳು ಸರಕಾರಕ್ಕೆ ಶರಣಾಗಿದ್ದಾರೆ. ಅಧ್ಯಕ್ಷ ರಾಡ್ರಿಗೊ ಡುಟಾರ್ಟೆ ಒಂದು ವರ್ಷದೊಳಗೆ ಫಿಲಿಪ್ಪೀನ್ಸ್‌ನ್ನು ಡ್ರಗ್ಸ್ ಮುಕ್ತಗೊಳಿಸುವ ಪಣತೊಟ್ಟಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News