ಗ್ರಿಝ್ಮನ್‌ಗೆ ಲಾಲಿಗ ವರ್ಷದ ಆಟಗಾರ ಪ್ರಶಸ್ತಿ

Update: 2016-10-25 18:01 GMT

 ಮ್ಯಾಡ್ರಿಡ್, ಅ.25: ಸ್ಟಾರ್ ಆಟಗಾರರಾದ ಲಿಯೊನೆಲ್ ಮೆಸ್ಸಿ ಹಾಗೂ ಕ್ರಿಸ್ಟಿಯಾನೊ ರೊನಾಲ್ಡೊರನ್ನು ಸ್ಪರ್ಧೆಯಲ್ಲಿ ಹಿಂದಿಕ್ಕಿದ ಅಟ್ಲೆಟಿಕ್ ಮ್ಯಾಡ್ರಿಡ್‌ನ ಫಾರ್ವರ್ಡ್ ಆಟಗಾರ ಆ್ಯಂಟೊನಿ ಗ್ರಿಝ್ಮನ್ 2015-16ನೆ ಸಾಲಿನ ಲಾಲಿಗ ವರ್ಷದ ಆಟಗಾರನಾಗಿ ಆಯ್ಕೆಯಾಗಿದ್ದಾರೆ.

ಅಟ್ಲೆಟಿಕೊದ ಡಿಯೆಗೊ ಸಿಮೋನ್ ವರ್ಷದ ಕೋಚ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬಾರ್ಸಿಲೋನ ಹಾಗೂ ಉರುಗ್ವೆ ಸ್ಟ್ರೈಕರ್ ಲೂಯಿಸ್ ಸುಯರೆಝ್ ಅಗ್ರ ಇಯು ಆಟಗಾರನಾಗಿ ನೇಮಕಗೊಂಡಿದ್ದಾರೆ.

ಸೋಮವಾರ ವೆಲೆನ್ಸಿಯದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬಾರ್ಸಿಲೋನ ಹಾಗೂ ಅರ್ಜೆಂಟೀನ ಆಟಗಾರ ಮೆಸ್ಸಿ ಶ್ರೇಷ್ಠ ಫಾರ್ವರ್ಡ್ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಟ್ಲೆಟಿಕೋ ತಂಡದ ಆಟಗಾರರು ಹೆಚ್ಚು ಪ್ರಾಬಲ್ಯ ಸಾಧಿಸಿದರು. ಜಾನ್ ಒಬ್ಲಾಕ್ ಶ್ರೇಷ್ಠ ಗೋಲ್‌ಕೀಪರ್, ಡಿಯೆಗೊ ಗೊಡಿನ್ ಶ್ರೇಷ್ಠ ಡಿಫೆಂಡರ್ ಹಾಗೂ ಫ್ರಾನ್ಸ್‌ನ ಗ್ರೆಝ್ಮನ್ ಫ್ಯಾನ್ಸ್ ಅವಾರ್ಡ್‌ಗೆ ಆಯ್ಕೆಯಾಗಿದ್ದಾರೆ.

ರಿಯಲ್ ಮ್ಯಾಡ್ರಿಡ್‌ನ ಲುಕಾ ಮಾಡ್ರಿಕ್ ಶ್ರೇಷ್ಠ ಮಿಡ್‌ಫೀಲ್ಡರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News