ಭಾರತದಲ್ಲಿ ಅ.6 ರಿಂದ 28ರ ತನಕ ಟೂರ್ನಿ

Update: 2016-10-25 18:00 GMT

ಕೋಲ್ಕತಾ, ಅ.25: ಭಾರತದಲ್ಲಿ ನಡೆಯಲಿರುವ ಫಿಫಾ ಅಂಡರ್-17 ವಿಶ್ವಕಪ್‌ಗೆ ಕೋಲ್ಕತಾದ ಸಾಲ್ಟ್ ಲೇಕ್ ಸ್ಟೇಡಿಯಂ ಆಯ್ಕೆಯಾಗಿದೆ. ಈ ಮೂಲಕ ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಫುಟ್ಬಾಲ್ ಟೂರ್ನಿಯು ಒಟ್ಟು ಆರು ತಾಣಗಳಲ್ಲಿ ನಡೆಯಲಿದೆ.

ಫಿಫಾ ನಿಯೋಗ ಕೋಲ್ಕತಾಕ್ಕೆ ಭೇಟಿ ನೀಡಿ ಸಾಲ್ಟ್‌ಲೇಕ್ ಸ್ಟೇಡಿಯಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ಸ್ಟೇಡಿಯಂನ್ನು ಅಂಡರ್-17 ವಿಶ್ವಕಪ್‌ಗೆ ಅನುಮೋದಿಸಿತು. ಫಿಫಾ ನಿಯೋಗ ಈಗಾಗಲೇ ಇತರ ಐದು ತಾಣಗಳಾದ ಕೊಚ್ಚಿ, ಮುಂಬೈ, ಗೋವಾ, ಹೊಸದಿಲ್ಲಿ ಹಾಗೂ ಗುವಾಹಟಿಯನ್ನು ವಿಶ್ವಕಪ್‌ಗೆ ಅನುಮೋದಿಸಿದೆ.

ವಿಶ್ವಕಪ್ ಟೂರ್ನಿಯ ಆತಿಥ್ಯವಹಿಸಿಕೊಂಡಿರುವ ಸ್ಟೇಡಿಯಂಗಳ ಪರಿಶೀಲನೆಯ ಬಳಿಕ ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಫಿಫಾ ಟೂರ್ನಿಯ ಮುಖ್ಯಸ್ಥ ಮರಿಯೊನ್ ಮಯೆರ್ 2017ರ ಅ.6 ರಿಂದ 28ರ ತನಕ ಟೂರ್ನಿಯು ನಡೆಯಲಿದೆ. ಟೂರ್ನಿಯ ಡ್ರಾ ಪ್ರಕ್ರಿಯೆ ಮುಂದಿನ ವರ್ಷದ ಜುಲೈನಲ್ಲಿ ನಡೆಯುವುದಾಗಿ ಘೋಷಿಸಿದ್ದಾರೆ.

ಕಳೆದ ಪರೀಕ್ಷೆಯ ಬಳಿಕ ಸ್ಟೇಡಿಯಂನಲ್ಲಿ ಸಾಕಷ್ಟು ಕಾಮಗಾರಿ ನಡೆದಿದೆ. ಕೋಲ್ಕತಾ ಸ್ಟೇಡಿಯಂ ದೇಶದ ಶ್ರೇಷ್ಠ ಸ್ಟೇಡಿಯಂ ಪೈಕಿ ಒಂದಾಗಿದೆ ಎಂದು ಮಯೆರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News