ಐಒಸಿ ಅಥ್ಲೆಟಿಕ್ಸ್ ಆಯೋಗದ ಸಭೆಗೆ ಸೈನಾ ಗೈರು

Update: 2016-10-25 18:04 GMT

 ಹೊಸದಿಲ್ಲಿ, ಅ.25: ಮುಂದಿನ ತಿಂಗಳು ನಡೆಯಲಿರುವ ಚೀನಾ ಹಾಗೂ ಹಾಂಕಾಂಗ್‌ನಲ್ಲಿ ನಡೆಯಲಿರುವ ಸೂಪರ್ ಸರಣಿ ಟೂರ್ನಿಗಳಲ್ಲಿ ಸಜ್ಜಾಗುತ್ತಿರುವ ಭಾರತದ ಅಗ್ರ ಶಟ್ಲರ್ ಸೈನಾ ನೆಹ್ವಾಲ್‌ಗೆ ಇಂಟರ್‌ನ್ಯಾಶನಲ್ ಒಲಿಂಪಿಕ್ಸ್ ಸಮಿತಿಯ ಅಥ್ಲೆಟಿಕ್ಸ್ ಆಯೋಗದ ಸಭೆಯಲ್ಲಿ ಹಾಜರಾಗಲು ಸಾಧ್ಯವಾಗುತ್ತಿಲ್ಲ.

ಐಒಸಿ ಅಧ್ಯಕ್ಷ ಥಾಮಸ್ ಬಾಕ್ ಕಳೆದ ತಿಂಗಳು ಐಒಸಿ ಅಥ್ಲೆಟಿಕ್ಸ್ ಆಯೋಗದ ಸಮಸ್ಯೆಯಾಗಿ ಸೈನಾರನ್ನು ನೇಮಕ ಮಾಡಿದ್ದರು.

‘‘ಲಾಸನ್ನೆಯಲ್ಲಿ ನ.6 ರಿಂದ 11ರ ತನಕ ನಡೆಯಲಿರುವ ಐಒಸಿ ಅಥ್ಲೆಟಿಕ್ಸ್ ಆಯೋಗದ ಅತ್ಯಂತ ಪ್ರಮುಖ ಸಭೆಗೆ ನನಗೆ ಆಹ್ವಾನ ಬಂದಿದೆ. ಆದರೆ, ಪ್ರತಿಷ್ಠಿತ ಟೂರ್ನಿಗಳಾದ ಚೀನಾ ಹಾಗೂ ಹಾಂಕಾಂಗ್ ಓಪನ್‌ನಲ್ಲಿ ಭಾಗವಹಿಸುವ ಬಗ್ಗೆ ಈ ಮೊದಲೇ ಒಪ್ಪಂದ ಮಾಡಿಕೊಂಡಿರುವ ಕಾರಣ ಐಒಸಿ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ’’ ಎಂದು ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾಗೆ ಬರೆದ ಪತ್ರದಲ್ಲಿ ಸೈನಾ ತಿಳಿಸಿದ್ದಾರೆ.

ಚೀನಾ ಸೂಪರ್ ಸರಣಿ ನ.15 ರಿಂದ 20ರ ತನಕ ಹಾಗೂ ಹಾಂಕಾಂಗ್ ಸೂಪರ್ ಸರಣಿ ನ.22 ರಿಂದ 27ರ ತನಕ ನಡೆಯಲಿದೆ.

‘‘ಐಒಸಿ ಅಧ್ಯಕ್ಷರಾದ ಥಾಮಸ್ ಬಾಕ್‌ರಿಂದ ಐಒಸಿ ಅಥ್ಲೆಟಿಕ್ಸ್ ಕಮಿಶನ್‌ನ ಸದಸ್ಯೆಯಾಗಿ ಆಯ್ಕೆಯಾಗಿರುವುದು ನನಗೆ ಬಹಳ ಹೆಮ್ಮೆಯ ವಿಷಯ.ನಾನು ಐಒಸಿ ಅಥ್ಲೆಟಿಕ್ಸ್ ಆಯೋಗದ ಅಧ್ಯಕ್ಷೆ ಏಂಜೆಲಾ ರುಗಿರೊ ಅವರೊಂದಿಗೆ ಕೆಲಸ ಮಾಡುವೆ. ಒಲಿಂಪಿಕ್ಸ್ ಐಒಸಿ ಅಥ್ಲೆಟಿಕ್ಸ್ ಆಯೋಗದ ಸದಸ್ಯೆಯಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ’’ಎಂದು ಸೈನಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News