ತೂಕ ಕಳೆದುಕೊಳ್ಳಲು 6 ಅತ್ಯುತ್ತಮ ಪಾನೀಯಗಳು

Update: 2016-10-26 09:18 GMT

ಪೌಷ್ಟಿಕ ತಜ್ಞರ ಪ್ರಕಾರ ನೀವು ಕಠಿಣ ಶಿಸ್ತಿನ ಆಹಾರವನ್ನು ಪಾಲಿಸದೆ ಇದ್ದರೂ ಸರಿಯಾದ ಪಾನೀಯವನ್ನು ಆರಿಸುವುದು ನಿಮಗೆ ತೂಕ ಇಳಿಸಲು ನೆರವಾಗಲಿದೆ. ಇಲ್ಲಿ ಕೆಲವು ಆರೋಗ್ಯಕರ ಆಯ್ಕೆಗಳಿವೆ.

ನೀರು

ಇದು ನಿಮಗೆ ಅತ್ಯುತ್ತಮ ಪಾನೀಯ. ಹೆಚ್ಚು ನೀರು ಕುಡಿಯುವುದು ನಿಮಗೆ ಹೆಚ್ಚು ತೂಕ ಇಳಿಸಲು ನೆರವಾಗಲಿದೆ. ನೀರಿಗೆ ಸ್ವಲ್ಪ ನಿಂಬೆ ಬೆರೆಸಿದರೆ ಇನ್ನೂ ಆರೋಗ್ಯಕರ. ವ್ಯಾಯಾಮಕ್ಕೆ ಮೊದಲು ನಿಂಬೆರಸ ಕುಡಿದಲ್ಲಿ ಕೊಬ್ಬನ್ನು ಚೆನ್ನಾಗಿ ಇಳಿಸುತ್ತದೆ.

ತರಕಾರಿ ಸೂಪ್

ಪೂರ್ಣ ಪೌಷ್ಟಿಕಾಂಶವಾಗಿರುವ ಇದು ಚಯಾಪಚಯವನ್ನು ಉದ್ದೀಪನಗೊಳಿಸುತ್ತದೆ. ಡಿನ್ನರ್‌ಗೆ ಮೊದಲು ತರಕಾರಿ ಸೂಪ್ ಕುಡಿಯುವುದರಿಂದ ಕೆಲವೇ ಕ್ಯಾಲರಿಗಳು ಕರಗುತ್ತವೆ.

ಗ್ರೀನ್ ಟೀ

ಗ್ರೀನ್ ಟೀ ಕಚ್ಛಾವಸ್ತುಗಳು ತೂಕ ಇಳಿಸಲು ಉತ್ತಮ. ಇದು ದೇಹದಲ್ಲಿ ಗ್ಲುಕೋಸ್ ಅಂಶವನ್ನು ನಿಯಂತ್ರಿಸಲು ನೆರವಾಗುತ್ತದೆ. ನಿತ್ಯವೂ ಎರಡು ಕಪ್ ಗ್ರೀನ್ ಟೀ ಕುಡಿದರೆ ನಿಮಗೆ ಹೆಚ್ಚು ಲಾಭವಾಗಲಿದೆ. ಗ್ರೀನ್ ಟೀ ದೇಹವನ್ನು ವಿವಿಧ ರೋಗಗಳಿಂದ ರಕ್ಷಿಸುತ್ತದೆ. ಹಾಗೆ ನಿಮ್ಮ ನಿರೋಧಕ ಶಕ್ತಿಯನ್ನೂ ಸುಧಾರಿಸುತ್ತದೆ.

ತರಕಾರಿ ಜ್ಯೂಸ್

ಇದು ತರಕಾರಿ ಸೂಪ್‌ನಂತೆಯೇ ಲಾಭಕರ. ಜ್ಯೂಸ್ ಅನ್ನು ಬೇಸಗೆಯಲ್ಲಿ ಕುಡಿಯಬಹುದು. ಸೂಪ್ ಅನ್ನು ಚಳಿಗಾಲದಲ್ಲಿ ಕುಡಿಯಬಹುದು. ಆದರೆ ಕಡಿಮೆ ಸೋಡಿಯಂ ಇರಲಿ.

ಬ್ಲಾಕ್ ಕಾಫಿ

ಕಟ್ಟಂ ಚಹಾ ಕುಡಿಯುವುದು ಚಯಾಪಚಯವನ್ನು ಉತ್ತೇಜಿಸುತ್ತದೆ. ಇದು ವೇಗದದರದಲ್ಲಿ ಕೊಬ್ಬು ಇಳಿಸಿ ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಬ್ಲಾಕ್ ಕಾಫಿಯಲ್ಲಿ ಕೆಫೈನ್ ಇದ್ದು, ವಿಶ್ರಾಂತ ಸ್ಥಿತಿಯಲ್ಲೂ ಹೆಚ್ಚು ಕ್ಯಾಲರಿಗಳನ್ನು ಕರಗಿಸಲು ನೆರವಾಗುತ್ತದೆ. ಆದರೆ ಖಾಲಿ ಹೊಟ್ಟೆಗೆ ಮತ್ತು ದಿನಕ್ಕೆ ಎರಡಕ್ಕಿಂತ ಹೆಚ್ಚು ಬಾರಿ ಕುಡಿಯುವುದು ಚಯಾಪಚಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ.

ಸ್ಕಿಮ್ಡ್ ಹಾಲು

ಪ್ರೊಟೀನ್ ಹೆಚ್ಚಾಗಿರುವ ಆಹಾರವಿದು. ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಮೂಳೆಗಳನ್ನು ಗಟ್ಟಿಯಾಗಿಡುತ್ತವೆ. ಮುಖ್ಯವಾಗಿ ನಿತ್ಯವೂ ಕ್ಯಾಲರಿ ಸೇರಿಸದೆಯೇ ದೇಹಕ್ಕೆ ವಿಟಮಿನ್ ಕೊಡುತ್ತದೆ.

ಕೃಪೆ: http://timesofindia.indiatimes.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News