×
Ad

ಯಾವುದೇ ಕೌಶಲ್ಯ ಬೆಳೆಸಿಕೊಳ್ಳುವ ಅತ್ಯುತ್ತಮ ವಿಧಾನ ಇದು

Update: 2016-10-26 17:05 IST

ಜಗತ್ತಿನಲ್ಲಿ ಪ್ರಗತಿ ಸಾಧಿಸುವ ಎಲ್ಲಾ ಅವಕಾಶಗಳು ನಿಮ್ಮ ಮುಂದಿದ್ದರೂ, ನಿಮ್ಮ ಬಳಿ ಪ್ರಗತಿಯನ್ನು ಗುರುತಿಸಿ ಸುಧಾರಿಸಲು ಅನುಭವಿ ಕಣ್ಣಿಲ್ಲದಿದ್ದರೆ ಎಂದೂ ಗುರಿ ತಲುಪಲು ಸಾಧ್ಯವಿಲ್ಲ ಎಂದು ಸ್ವೀಡನ್ ಮೂಲದ ಮನಶ್ಶಾಸ್ತ್ರಜ್ಞ ಆಂಡರ್ಸ್‌ ಎರಿಕ್ಸನ್ ಇತ್ತೀಚೆಗೆ ಪ್ರೇರಣಾ ತಜ್ಞ ಡೇನಿಯಲ್ ಪಿಂಕ್ ಜೊತೆಗಿನ ಹೆಲೆಲೊ ಸಂಭಾಷಣೆಯಲ್ಲಿ ಹೇಳಿದ್ದಾರೆ. ಜನರು ತಮ್ಮ ಕ್ಷೇತ್ರಗಳಲ್ಲಿ ಕೌಶಲ್ಯ ಸಾಧಿಸುವ ಬಗ್ಗೆ ಇಬ್ಬರು ತಜ್ಞರು ಚರ್ಚಿಸುತ್ತಿದ್ದರು. "ಒಬ್ಬ ವ್ಯಕ್ತಿ ಸಾಧನೆ ಮಾಡಲು ಬಯಸುವ ಕೌಶಲ್ಯವನ್ನು ಪಡೆದ ಇತರ ವ್ಯಕ್ತಿಗಳಿಗೆ ಪ್ರೇರಣೆ ನೀಡಿದ ಅಧ್ಯಾಪಕರನ್ನು ಕಂಡುಕೊಂಡು ಅವರ ಬಳಿ ತರಬೇತಿ ಪಡೆದುಕೊಳ್ಳುವುದು" ಎಂದು ಎರಿಕ್ಸನ್ ಪರಿಹಾರ ಹೇಳಿದ್ದಾರೆ. ಅವರ ಪ್ರಕಾರ ಗುರಿಯಿಲ್ಲದ, ಅವ್ಯವಸ್ಥಿತ ಅಭ್ಯಾಸ ಪಾಠಗಳನ್ನು ಪರಿಣಾಮಕಾರಿ ಪಾಠಗಳನ್ನಾಗಿ ಉದ್ದೇಶಪೂರ್ವಕ ಅಭ್ಯಾಸ ಮಾಡಲು ಇದು ನೆರವಾಗಲಿದೆ.

ಎರಿಕ್ಸನ್ ಅವರ ಸ್ವಯಂ ಸಂಶೋಧನೆಯ ಉತ್ಪಾದನೆ ಎನ್ನುವ ಅಧ್ಯಯನವು "ಉದ್ದೇಶಪೂರ್ವಕ ಅಭ್ಯಾಸವು ನಿರಂತರವಾಗಿ ಸ್ವತಃ ಸಾಮರ್ಥ್ಯವನ್ನು ಮೀರಿ ಪ್ರಯತ್ನ ಪಟ್ಟು ಹೊಸ ಮಟ್ಟದ ಸಾಧನೆ ತೋರುವುದಾಗಿದೆ. ಆದರೆ ಅಧ್ಯಾಪಕರು ನಿರಂತರವಾಗಿ ಸರಿಯಾದ ದಿಕ್ಕಿನಲ್ಲಿ ಇಂತಹ ಉದ್ದೇಶಪೂರ್ವಕ ಅಭ್ಯಾಸದ ಲಾಭಗಳನ್ನು ಗರಿಷ್ಠಗೊಳಿಸಲು ನೆರವಾಗುತ್ತಾರೆ."

ಈಗಿನ ಡಿಐವೈ ತಲೆಮಾರಿನ ಯುಟ್ಯೂಬ್ ಟ್ಯುಟೋರಿಯಲ್ಸ್ ಕಾಲದಲ್ಲಿಯೂ ಎರಿಕ್ಸನ್ ಸಂಶೋಧನೆ ಹೊರಗಿನ ಅಭಿಪ್ರಾಯಗಳನ್ನು ಪಡೆಯುವುದಕ್ಕೆ ಹೆಚ್ಚಿನ ಒತ್ತು ನೀಡಿದೆ. ಅಧ್ಯಾಪಕರಿಲ್ಲದೆ ಕೌಶಲ್ಯದ ಮಟ್ಟದಲ್ಲಿ ಟಾಪ್ ಬರಬಹುದು. ಆದರೆ ಸ್ವಯಂ ಆಗಿಯೇ ತಪ್ಪುಗಳನ್ನು ತಿದ್ದುತ್ತಾ ಹೋಗಬೇಕಾಗುತ್ತದೆ. ಅಂತಿಮವಾಗಿ ಅಪರಿಚಿತ ಜಾಗದಲ್ಲಿ ಸ್ವಯಂ ಆಗಿ ನಿಂತಾಗಿ ಹೊರಗಿನಿಂದ ಅವಲೋಕಿಸುವ ಅನುಭವದ ಕೊರತೆ ಕಾಡುತ್ತದೆ. ತರಬೇತುದಾರನ ಮೌಲ್ಯದಲ್ಲಿ ನೀವು ಮುಂದುವರಿದು ಎಲ್ಲಿಗೆ ತಲುಪಬೇಕು ಎನ್ನುವ ಅವರ ಜ್ಞಾನದಲ್ಲಿ ಅಡಗಿರುತ್ತದೆ.

ನೀವು ಬಾಸ್ಕೆಟ್‌ಬಾಲ್ ಆಟಗಾರ ಎಂದು ಊಹಿಸಿಕೊಳ್ಳಿ. ಶಾಂತವಾಗಿ ನೀವು ಮೂರು ಪಾಯಿಂಟರ್‌ಗಳನ್ನು ಹೊಡೆದಾಗ ನಿಮಗೆ ಬಹಳ ಖುಷಿಯಾಗಬಹುದು. ಆದರೆ ಉತ್ತಮವಾದ ಪರಿಣತ ಶೂಟರ್ ಆಗಲು ನಿಮಗೆ ಬಾಸ್ಕೆಟ್ ಸುತ್ತ ಫೈರ್ ಜಂಪರ್ಸ್‌ ಅಗತ್ಯವಿದೆ. ನಿಮ್ಮ ಶಾಟ್‌ಗಳನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಬೇಕು. ಲೇನ್‌ನಲ್ಲಿ ಡ್ರೈವಿಂಗ್ ಅಭ್ಯಾಸ ಮಾಡಬೇಕು. ಅಂತಿಮವಾಗಿ ಹೇಳುವುದೆಂದರೆ ಎರಿಕ್ಸನ್ ಪ್ರಕಾರ ನೀವು ಸಾಧ್ಯವಾದಷ್ಟು ಬೇಗನೇ ತರಬೇತುದಾರರನ್ನು ಪಡೆದಲ್ಲಿ ಅಭ್ಯಾಸದ ಹಾದಿಯಲ್ಲಿ ಕೆಟ್ಟ ಹವ್ಯಾಸಗಳನ್ನು ಮಾಡುವುದಿಲ್ಲ. ಇಂತಹ ಹವ್ಯಾಸಗಳು ಆಗಿಬಿಟ್ಟರೆ ಅದನ್ನು ನಿವಾರಿಸಿಕೊಳ್ಳಲು ವರ್ಷಗಳೇ ಉರುಳಬಹುದು.

ನಿಮಗೆ ಸೂಕ್ತವಾದ ಮೂಲಭೂತ ವಿಷಯಗಳನ್ನು ಸರಿಪಡಿಸಿಕೊಳ್ಳಬೇಕೆಂದರೆ ಅಧ್ಯಾಪಕರು ನೆರವಾಗುತ್ತಾರೆ. ಅವರು ನಿಮ್ಮ ಅಭ್ಯಾಸದಲ್ಲಿ ವಿಶ್ಲೇಷಣಾ ಅಂಶವಾಗಿರುತ್ತಾರೆ. "ಬಹಳಷ್ಟು ತರಬೇತುದಾರರಿಗೆ ತಮ್ಮ ವಿದ್ಯಾರ್ಥಿಯನ್ನು ತಿಳಿದುಕೊಂಡು ಅವರನ್ನು ತಿದ್ದಲು ಒಂದೆರಡು ವರ್ಷಗಳೇ ಹಿಡಿಯುತ್ತದೆ. ಹೀಗಾಗಿ ಮೂಲಭೂತ ವಿಷಯಗಳನ್ನು ಸರಿಯಾಗಿ ರೂಪಿಸಿಕೊಳ್ಳಬೇಕಾಗುತ್ತದೆ."

ದೂರದೃಷ್ಟಿಯ ಕಾರಣದಿಂದಲೇ ಹವ್ಯಾಸಿ ವ್ಯಕ್ತಿ ತಜ್ಞನಾಗಿ ಪರಿಣಮಿಸುತ್ತಾನೆ. ಅಧ್ಯಾಪಕರನ್ನು ಜೊತೆಗೂಡಿಸಿಕೊಂಡು ಕಲಿತ ವಿದ್ಯಾರ್ಥಿಗೆ ಹೋಲಿಸಿದಲ್ಲಿ, ಸ್ವತಃ ಪೀಪಿ ಊದಲು ಕಲಿಯುವ ವ್ಯಕ್ತಿಗೆ ತನ್ನಲ್ಲಿನ ತಪ್ಪುಗಳನ್ನು ಕಂಡುಕೊಳ್ಳಲು ಬಹುತೇಕ ಕಷ್ಟವಾಗುತ್ತದೆ. ಏಕೆಂದರೆ ಸ್ವಯಂ ಕಲಿತ ಸಂಗೀತಗಾರ ಡಬಲ್ ಡ್ಯೂಟಿ ಮಾಡಿರುತ್ತಾರೆ. ಅವರು ಸಂಗೀತ ನುಡಿಸುವ ಜೊತೆಗೆ ತಮ್ಮ ವಾದ್ಯ ಪ್ರದರ್ಶನವನ್ನೂ ವಿಶ್ಲೇಷಿಸಬೇಕಾಗುತ್ತದೆ. ವಿದ್ಯಾರ್ಥಿ ತಮಗೆ ಅಭಿಪ್ರಾಯ ಸಿಗುವವರೆಗೂ ಕಾಯಬೇಕಾಗುತ್ತದೆ.

"ಕೆಲವರ ಪ್ರದರ್ಶನ ಬದಲಾಗಿರುವುದನ್ನು ಗಮನಿಸಬೇಕು. ಎರಡು ವಾರಗಳ ಹಿಂದೆ ಅವರಿಗೆ ಅದು ಸಾಧ್ಯವೇ ಇರಲಿಲ್ಲ. ಆದರೆ ನಿಧಾನವಾಗಿ ಅವರು ಉತ್ತಮ ಅಧ್ಯಾಪಕರನ್ನು ನೇಮಿಸಿಕೊಂಡು ಸಾಧಿಸಿ ತೋರಿಸಿದರು" ಎನ್ನುತ್ತಾರೆ ಎರಿಕ್ಸನ್.

ಹೀಗಾಗಿ ಮುಂದಿನ ಬಾರಿ ನೀವು ಹೊಸ ಕೌಶಲ್ಯವನ್ನು ಬೆಳೆಸಿಕೊಳ್ಳಲು ಬಯಸಿದಾಗ ಸ್ವಯಂ ಆಗಿ ಕಲಿಯುವ ಬದಲಿ ಉತ್ತಮ ಅದ್ಯಾಪಕರನ್ನು ನೇರವಾಗಿ ಪಡೆದುಕೊಳ್ಳುವುದು.
ಕೃಪೆ: http://www.businessinsider.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News