×
Ad

ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯ ಲಕ್ಷಣಗಳೇನು? ಮತ್ತು ಅದಕ್ಕೆ ಪರಿಹಾರವೇನು?

Update: 2016-10-27 23:30 IST

ದಿನಕ್ಕೊಂದು ಗ್ಲಾಸ್ ಹಾಲು ಕುಡಿದ ಕೂಡಲೇ ದೇಹದಲ್ಲಿ ಕ್ಯಾಲ್ಸಿಯಂ ಗುಣ ಬರುವುದಿಲ್ಲ. ದೇಹಕ್ಕೆ ಆರೋಗ್ಯಕರ ಮೂಳೆ ಬೇಕೆಂದರೆ ಕ್ಯಾಲ್ಸಿಯಂ ಬೇಕೇಬೇಕು. ಹಾಗಿದ್ದರೆ ಸಮರ್ಥ ಕ್ಯಾಲ್ಸಿಯಂ ಪಡೆಯುವುದು ಹೇಗೆ? ಕ್ಯಾಲ್ಸಿಯಂ ಹೊಂದಿರುವ ಬಹಳಷ್ಟು ಆಹಾರಗಳು ಇವೆ. ಅದನ್ನು ನಮ್ಮ ನಿತ್ಯಜೀವನಕ್ಕೆ ಸೇರ್ಪಡೆ ಮಾಡಬೇಕು. ಹಸಿರೆಲೆಗಳು, ಕಡಲೆ, ಬೆಣ್ಣೆ ಮತ್ತು ಯೋಗಾರ್ಟ್ ಕ್ಯಾಲ್ಸಿಯಂ ಹೊಂದಿರುತ್ತವೆ. ಕ್ಯಾಲ್ಸಿಯಂ ಕೊರತೆಯಿಂದ ಹಲವು ಸಮಸ್ಯೆಗಳು ಕಂಡು ಬರಲಿವೆ. ಅವುಗಳಲ್ಲಿ ಮುಖ್ಯವಾದುವು,

ಮೂಳೆಗಳ ಮುರಿತ

ಕಡಿಮೆ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ, ಕಡಿಮೆ ನೀರು ಸೇವನೆ, ಕಡಿಮೆ ಕ್ಯಾಲ್ಸಿಯಂ ಇರುವ ಕಾರಣ ಮೂಳೆಗಳ ಮುರಿತವಾಗುತ್ತದೆ. ಮುಖ್ಯವಾಗಿ ತೊಡೆ ಭಾಗದಲ್ಲಿ ಕ್ಯಾಲ್ಸಿಯಂ ವ್ಯವಸ್ಥೆ ಏರು ಪೇರಾಗಿರುತ್ತದೆ. ಕ್ಯಾಲ್ಸಿಯಂ ಸಮಸ್ಯೆ ಇದ್ದಾಗ ನರವ್ಯೆಹ ವ್ಯವಸ್ಥೆಯ ಮೇಲೂ ಪರಿಣಾಮವಾಗುತ್ತದೆ.

ದುರ್ಬಲ ಮೂಳೆಗಳ ಸಾಂದ್ರತೆ

ಕ್ಯಾಲ್ಸಿಯಂ ಬಹಳ ಪ್ರಮುಖ ಪೌಷ್ಟಿಕಾಂಶ. ಅದು ಖನಿಜೀಕರಣಕ್ಕೆ ನೆರವಾಗುತ್ತದೆ. ವೃದ್ಧಾಪ್ಯದ ಹೊರತಾಗಿಯೂ ಮೂಳೆಗಳನ್ನು ಗಟ್ಟಿಯಾಗಿಡಲು ಇದು ಮುಖ್ಯ. ಕ್ಯಾಲ್ಸಿಯಂ ಮಟ್ಟವು ಮೂಳೆಯ ಸಾಂದ್ರತೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಮೂಳೆಗಳು ದುರ್ಬಲವಾಗಿದ್ದಲ್ಲಿ ಬೇಗನೇ ಸಣ್ಣ ದೈಹಿಕ ಚಟುವಟಿಕೆಗಳಲ್ಲೂ ಹಾನಿಗೊಳಗಾಗುತ್ತವೆ. ಮಹಿಳೆಯರಲ್ಲಿ ದುರ್ಬಲ ಮೂಳೆಸಾಂದ್ರತೆ ಓಸ್ಟಿಯೋಪೊರಸಿಸ್‌ಗೆ ಕಾರಣವಾಗುತ್ತದೆ. ದೇಹಕ್ಕೆ ಸಾಕಷ್ಟು ಕ್ಯಾಲ್ಸಿಯಂ ಕೊಡದಿದ್ದಲ್ಲಿ ಸಾಮಾನ್ಯ ಕಾರ್ಯಗಳನ್ನು ನಡೆಸುವುದೂ ಕಷ್ಟವಾಗುತ್ತದೆ.

ಹಲ್ಲು ನೋವು

ದೇಹದಲ್ಲಿರುವ ಶೇ. 99ರಷ್ಟು ಕ್ಯಾಲ್ಸಿಯಂ ಹಲ್ಲು ಮತ್ತು ಮೂಳೆಗಳಲ್ಲಿರುತ್ತದೆ. ಕ್ಯಾಲ್ಸಿಯಂ ಪ್ರಮಾಣ ಇಳಿದಲ್ಲಿ ಹಲ್ಲುನೋವು ಬರಬಹುದು. ಹಲ್ಲು ಕೊಳೆಯುವುದು, ನಾಶವಾಗುವುದು ಆಗುತ್ತದೆ. ಹೀಗಾಗಿ ಮಕ್ಕಳಿಗೆ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ನೀಡಲೇಬೇಕು.

ಋತುಸ್ರಾವದ ಮೊದಲಿನ ಮೂಳೆ ನೋವು

ಮಹಿಳೆಯರಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆ ಇದ್ದಾಗ ಋತುಸ್ರಾವ ಸಮಯದಲ್ಲಿ ನೋವು ಕಾಣಿಸುತ್ತದೆ. ಆದರೆ ಇದು ಹೇಗಾಗುತ್ತದೆ ಎನ್ನುವುದನ್ನು ಇನ್ನೂ ಅಧ್ಯಯನಗಳು ವಿವರಿಸಿಲ್ಲ. ಆದರೆ ಕ್ಯಾಲ್ಸಿಯಂ ಪೆಲ್ವಿಕ್ ಮೂಳೆಗಳ ನಿಯಂತ್ರಣದಲ್ಲಿ ಮುಖ್ಯ ಪಾತ್ರವಹಿಸುತ್ತದೆ ಎನ್ನಲಾಗಿದೆ. ಅಲ್ಲದೆ ಕ್ಯಾಲ್ಸಿಯಂ ಕೊರತೆ ನಿತ್ಯದ ಋತುಸ್ರಾವದ ರಕ್ತಪ್ರಸಾರದ ಮೇಲೂ ಪರಿಣಾಮ ಬೀರುತ್ತದೆ. ಯುಟಿರಸ್ ಬೆಳವಣಿಗೆ ಮತ್ತು ಅಂಡಾಶಯದ ಹಾರ್ಮೋನ್ ಉತ್ಪಾದನೆಯಲ್ಲಿ ಕ್ಯಾಲ್ಸಿಯಂ ಮುಖ್ಯ ಪಾತ್ರವಹಿಸುತ್ತದೆ.

ಬೇಗನೇ ಸುಸ್ತು

ಮೂಳೆ ಮತ್ತು ಸ್ನಾಯು ದುರ್ಬಲವಾದಾಗ ಸ್ತ್ರೀ- ಪುರುಷ ಇಬ್ಬರಲ್ಲೂ ಬೇಗನೇ ಸುಸ್ತು ಕಾಣಿಸಿಕೊಳ್ಳುತ್ತದೆ. ಸಾಮಾನ್ಯ ವಿಶ್ರಾಂತಿ ಸಂದರ್ಭವೂ ಸುಸ್ತಾಗುತ್ತದೆ. ಕ್ಯಾಲ್ಸಿಯಂ ಕೊರತೆ ನಿದ್ರಾರಾಹಿತ್ಯ, ಭಯ, ಕಾತುರತೆ ಮತ್ತು ಇತರ ಮಾನಸಿಕ ಸಮಸ್ಯೆಗಳನ್ನೂ ತರುತ್ತದೆ. ಕಡಿಮೆ ಕ್ಯಾಲ್ಸಿಯಂ ಪ್ರಮಾಣ ಇದ್ದವರಲ್ಲಿ ಸುಸ್ತು ಸಾಮಾನ್ಯ ಚಿಹ್ನೆಯಾಗಿದೆ.

ಕ್ಯಾಲ್ಸಿಯಂ ಕೊರತೆ ನಿವಾರಿಸಲು ಇಲ್ಲಿ ಕೆಲವು ಸಲಹೆಗಳಿವೆ:

- ಕ್ಯಾಲ್ಸಿಯಂ ಹೆಚ್ಚಾಗಿರುವ ಆಹಾರವನ್ನೇ ಸೇವಿಸಿ. ಸ್ಕಿಮ್ ಹಾಲು, ಡೈರಿ ಉತ್ಪನ್ನಗಳು, ಕಡುಹಸಿರು ತರಕಾರಿಗಳು ಮತ್ತು ಧಾನ್ಯಗಳ ಸೇವನೆ ಅಗತ್ಯ.
- ವೈದ್ಯರ ಸಲಹೆ ಪಡೆದು ಕ್ಯಾಲ್ಸಿಯಂ ಸಪ್ಲಿಮೆಂಟ್‌ಗಳನ್ನೂ ಸೇವಿಸಬಹುದು.

- ಕ್ಯಾಲ್ಸಿಯಂ ಹೊರತಾಗಿ ನಿಮಗೆ ವಿಟಮಿನ್ ಡಿ ಅಗತ್ಯ. ವಿಟಮಿನ್ ಡಿ ಇರುವ ಆಹಾರ ಸೇವನೆ ಮತ್ತು ಸೂರ್ಯನ ಶಾಖದಲ್ಲಿ ಓಡಾಟ ಮಾಡಬಹುದು.

- ಮೆಗ್ನೇಶಿಯಂ ಕೂಡ ಕ್ಯಾಲ್ಸಿಯಂ ಹೀರುವಿಕೆಯನ್ನು ದೇಹದಲ್ಲಿ ವೇಗಗೊಳಿಸುತ್ತದೆ. ಇದು ದೇಹದಲ್ಲಿ ಕ್ಯಾಲ್ಸಿಯಂ ದೀರ್ಘಕಾಲ ಇರುವಂತೆ ಮಾಡುತ್ತದೆ. ಹೀಗಾಗಿ ಮೆಗ್ನೇಶಿಯಂ ಹೆಚ್ಚಿರುವ ಪಾಲಾಕ್, ಸಿಹಿಗುಂಬಳ ಬೀಜ, ಹಸಿರು ಬೀನ್ಸ್, ಇಡೀ ಧಾನ್ಯ, ಸಾಸಿವೆ ಬೀಜಗಳನ್ನು ಸೇವಿಸಬಹುದು.

- ಸೋಡಾ ಮತ್ತು ಕಾಫಿ ಕಡಿಮೆ ಮಾಡಬೇಕು. ಇವುಗಳಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾಗಿರುವ ಕಾರಣ ದೇಹದಲ್ಲಿ ಕ್ಯಾಲ್ಸಿಯಂ ಹೀರುವಿಕೆ ಸಾಮರ್ಥ್ಯ ಕಡಿಮೆಯಾಗುತ್ತದೆ.

ಕೃಪೆ: http://www.wellnessbin.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News