ಪಟಾಕಿ ದುರಂತ:8 ಮಂದಿ ಬಲಿ
Update: 2016-10-28 23:30 IST
ವಡೋದರ, ಅ.28: ದೀಪಾವಳಿಯ ಮುನ್ನಾ ದಿನ ಗುಜರಾತ್‌ನ ವಡೋದರ ಜಿಲ್ಲೆಯ ರುಸ್ತಂಪುರ ಗ್ರಾಮದ ಪಟಾಕಿ ಅಂಗಡಿಯೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಟ 8 ಮಂದಿ ಬಲಿಯಾಗಿದ್ದಾರೆ. ಸಂಜೆ ವೇಳೆ ಪಟಾಕಿ ಅಂಗಡಿಯಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಸಮೀಪದ ಪಟಾಕಿ ಅಂಗಡಿ ಹಾಗೂ ಮನೆಗಳಿಗೆ ಹಬ್ಬಿದ್ದು ಘಟನೆಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದು ಕೆಲವರು ಗಾಯಗೊಂಡಿದ್ದಾರೆ. ಪೊಲೀಸರು ಅಗ್ನಿಶಾಮಕ ದಳದ ನೆರವಿನಿಂದ ಬೆಂಕಿ ನಂದಿಸಿದರು. ಸ್ಥಳದಲ್ಲಿ ಅಗ್ನಿಶಾಮಕ ದಳದ ತುಕಡಿಯನ್ನು ನಿಯೋಜಿಸಲಾಗಿದೆ ಎಂದು ವಡೋದರ (ಗ್ರಾಮೀಣ) ಎಸ್‌ಪಿ ಸೌರಭ್ ತೊಲಂಬಿಯಾ ತಿಳಿಸಿದ್ದಾರೆ. ಘಟನೆಗೆ ಕಾರಣ ತಿಳಿದುಬಂದಿಲ್ಲ.