ದುಬೈ ಫ್ರೇಮ್ ಬಹುತೇಕ ಸಿದ್ಧ : ಈ ಹೊಸ ಪ್ರವಾಸಿ ಆಕರ್ಷಣೆಯಲ್ಲಿ ಏನು ವಿಶೇಷ?

Update: 2016-10-29 04:16 GMT

ದುಬೈ ಫ್ರೇಮ್‌ನ ಅತೀ ನಿರೀಕ್ಷೆಯ ಉದ್ಘಾಟನಾ ಸಮಾರಂಭ ಹತ್ತಿರ ಬಂದಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅಧಿಕಾರಿಗಳು ಈ ಫ್ರೇಮ್ ಶೇ. 80ರಷ್ಟು ಪೂರ್ಣಗೊಂಡಿದೆ ಎಂದಿದ್ದಾರೆ. ಹೀಗಾಗಿ ಇನ್ನು ಕೆಲವೇ ದಿನಗಳಲ್ಲಿ ಈ ಜಾಗವೂ ದುಬೈನ ಪ್ರವಾಸಿ ಸ್ಥಳಗಳಲ್ಲಿ ಸೇರಿಕೊಳ್ಳಲಿದೆ.

3.5 ಮಿಲಿಯನ್ ಡಾಲರ್ ವೆಚ್ಚದ ಈ ಯೋಜನೆಯ ಮುಖ್ಯ ಉದ್ದೇಶವೆಂದರೆ ಹಳೇ ಮತ್ತು ಹೊಸ ದುಬೈಗೆ ಹೆಬ್ಬಾಗಿಲು ಆಗುವುದು. 150 ಮೀಟರ್‌ಗಳ ಎತ್ತರ ಮತ್ತು 93 ಮೀಟರ್ ಅಗಲವಿರುವ ಈ ಫೋಟೋ ಫ್ರೇಮ್ ಜಬೀಲ್ ಪಾರ್ಕ್ ಬಳಿ ಇದೆ. ಹೀಗಾಗಿ ಇದನ್ನು ನೋಡದೆ ಬರುವುದು ಸಾಧ್ಯವೇ ಇಲ್ಲ. ಅಲ್ಲದೆ ಈಗಾಗಲೇ ಇದು ನೋಡಲೂ ಬಹಳ ಆಕರ್ಷಕವಾಗಿ ಸಿದ್ಧವಾಗಿದೆ.
ಫ್ರೇಮ್ ಮೇಲೆ ಸ್ಪಷ್ಟವಾದ ಗ್ಲಾಸ್‌ನ ನಡೆದಾಡುವ ಹಾದಿಯಿದೆ. ಹೀಗಾಗಿ ಎರಡೂ ದಿಕ್ಕಿನಿಂದ ಅಂದರೆ ನೆಲದಿಂದ 150 ಮೀಟರ್‌ಗಳ ಎತ್ತರದಿಂದಲೂ ಪ್ರವಾಸಿಗರಿಗೆ ಇದು ಆಕರ್ಷಕವೆನಿಸಲಿದೆ. ಈ ವರ್ಷಾರಂಭದಲ್ಲಿ ದುಬೈ ಪಾಲಿಕೆ ಸಾಮಾಜಿಕ ತಾಣದಲ್ಲಿ ಈ ಬಗ್ಗೆ ಬರೆದು, ಈ ರಚನೆಯು ಹಳೇ ಮತ್ತು ಹೊಸ ದುಬೈಗೆ ಒಂದು ಚೌಕಟ್ಟು (ಫ್ರೇಮ್) ಆಗಿದೆ ಎಂದಿತ್ತು.
"ದುಬೈ ಫ್ರೇಮ್ ಪ್ರಾಜೆಕ್ಟ್ ಸ್ಟಾರ್‌ಗೇಟ್ ಬಳಿ ಇದ್ದು, ಪ್ರಸಿದ್ಧ ಮನೋರಂಜನಾ ಭಾಗ ಜಬೀಲ್ ಪಾರ್ಕ್ ಬಳಿಯಿದೆ. ಈ ಪಾರ್ಕ್‌ನ ಅತೀ ಆಕರ್ಷಕ ತಾಣವೂ ಆಗಲಿದೆ. ದುಬೈ ಫ್ರೇಮ್ ದುಬೈನ ಖ್ಯಾತ ಕಟ್ಟಡಗಳನ್ನು ವಿಶಿಷ್ಟ ರೀತಿಯಲ್ಲಿ ಪ್ರದರ್ಶಿಸಲಿದೆ. 150 ಮೀಟರ್ ಎತ್ತರ, 93 ಮೀಟರ್ ಅಗಲ ಜಾಗವಿರುವ ಫ್ರೇಮ್ ದುಬೈನ ಸುಂದರ ರಚನೆಯಾಗಲಿದೆ" ಎಂದು ದುಬೈ ಪಾಲಿಕೆ ಹೇಳಿದೆ. "ಈ ರಚನೆಯು ಶೇಕ್ ಜಯಾದ್ ರಸ್ತೆಯ ಕಟ್ಟಡಗಳು ಮತ್ತು ಹಲವು ಸ್ಮಾರಕಗಳನ್ನು ಒಂದು ಬದಿಯಿಂದ ತೋರಿಸುವ ಮೂಲಕ ಆಧುನಿಕ ದುಬೈಗೆ ಕನ್ನಡಿಯಾದರೆ, ಮತ್ತೊಂದು ಬದಿಯಿಂದ ಡಿಯೆರಾ, ಉಮ್ ಹುರೈರ್ ಮತ್ತು ಕರಮ ಮೊದಲಾದ ದುಬೈ ಸ್ಥಳಗಳನ್ನು ತೋರಿಸುತ್ತದೆ" ಎಂದು ಪಾಲಿಕೆ ಹೇಳಿದೆ.
ಈ ರಚನೆ ಪೂರ್ಣಗೊಳ್ಳುವ ಖಚಿತ ದಿನಾಂಕದ ಬಗ್ಗೆ ತಿಳಿದಿಲ್ಲವಾದರೂ, ನಾಲ್ಕನೇ ಹಂತವೂ ಪೂರ್ಣಗೊಂಡಿದೆ ಎನ್ನಲಾಗಿದೆ. ಹೀಗಾಗಿ ಕೆಲವೇ ತಿಂಗಳಲ್ಲಿ ಈ ರಚನೆಯ ಮೇಲ್ಗಡೆಯಿಂದ ಸೆಲ್ಫೀ ತೆಗೆದುಕೊಳ್ಳುವ ಅವಕಾಶ ಸಿಗಬಹುದು.
ಕೃಪೆ: www.shortlistdubai.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News