ಅಮಾನತುಗೊಂಡ ಎಂಎಲ್ಸಿ ಮನೋರಮಾ ದೇವಿ ಮಗ ನ್ಯಾಯಾಲಯಕ್ಕೆ ಶರಣು
Update: 2016-10-29 14:54 IST
ಗಯಾ, ಅ.29: ಅಮಾನತುಗೊಂಡಿರುವ ಬಿಹಾರದ ಎಂಎಲ್ಸ್ ಮನೋರಮಾ ದೇವಿ ಮಗ ರಾಕಿ ಯಾದವ್ ಗಯಾ ನ್ಯಾಯಾಲಯಕ್ಕೆ ಶನಿವಾರ ಶರಣಾಗಿದ್ದಾನೆ.
ಪಾಟ್ನಾ ಹೈಕೋರ್ಟ್ ನೀಡಿದ್ದ ಜಾಮೀನಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ವಿಧಿಸಿರುವ ಹಿನ್ನೆಲೆಯಲ್ಲಿ ರಾಕಿ ಯಾದವ್ ನ್ಯಾಯಾಲಯಕ್ಕೆ ಶರಣಾಗಿದ್ದಾನೆ.
ಹಿರಿಯ ವಕೀಲರಾದ ರಾಜೀವ್ ದತ್ತ್ ಅವರು ರಾಕಿ ಯಾದವ್‌ಗೆ ನೀಡಿರುವ ಜಾಮೀನನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ರಾಕಿ ಯಾದವ್ ತನ್ನ ಕಾರನ್ನು ಓವರ್ ಟೇಕ್ ಮಾಡಿದ ಆರೋಪದಲ್ಲಿ ಉದ್ಯಮಿಯೊಬ್ಬರ ಪುತ್ರ ಆದಿತ್ಯ ಸಚಿದೇವ್ ಅವರನ್ನು ಗುಂಡು ಹಾರಿಸಿ ಕೊಲೆಗೈದಿರುವುದಾಗಿ ಆರೋಪಿಸಲಾಗಿತ್ತು.