×
Ad

ಈ ವಿಮಾನಗಳಲ್ಲಿ ಮಾತ್ರ ನಿಮಗೆ ಉಚಿತ ವೈಫೈ ಲಭ್ಯ

Update: 2016-10-29 17:09 IST

ವಿಮಾನದಲ್ಲಿ ಪ್ರಯಾಣಿಸುವಾಗ ಇಂಟರ್ನೆಟ್ ಸೌಲಭ್ಯ ಬೇಕೆ? ಜಾಗತಿಕವಾಗಿ 11 ಏರ್‌ಲೈನ್ಸ್ ಉಚಿತವಾಗಿ ವೈಫೈ ವ್ಯವಸ್ಥೆಯನ್ನು ತನ್ನ ವಿಮಾನದಲ್ಲಿ ಪ್ರಯಾಣಿಸುವವರಿಗೆ ಒದಗಿಸುತ್ತದೆ. "ಗ್ರಾಹಕರಿಗೆ ಸಾಮಾನ್ಯವಾಗಿ ವಿಮಾನದಲ್ಲಿ ವೈಫೈ ಇಲ್ಲ ಎಂದಾಗ ಸಿಟ್ಟು ಬರುತ್ತದೆ" ಎನ್ನುತ್ತಾರೆ ವಿಮಾಯಾನದ ವಿವರ ಪರಿಣತ ಜೇಸನ್ ರಾಬಿನೊವಿಟ್ಸ್
ಇಮೇಲ್‌ಗಳು, ಸ್ನೇಹಿತರ ಜೊತೆಗೆ ಮತ್ತು ಕುಟುಂಬದ ಜೊತೆಗೆ ಚಾಟ್ ಮಾಡುವುದು ಹೇಗೆ ಸಾಧ್ಯ? ಇದೆಲ್ಲ ಮಾಡಬೇಕಿದ್ದಲ್ಲಿ ಉಚಿತ ವೈಫೈ ಸೌಲಭ್ಯ ಒದಗಿಸುವ ಈ 6 ಏರ್‌ಲೈನ್ಸ್‌ನಲ್ಲಿ ಪ್ರಯಾಣಿಸಿ.

►ಎಮಿರೇಟ್ಸ್
ಎಮಿರೇಟ್ಸ್ ಮೊದಲ 10 ಎಂಬಿಗಳಷ್ಟು ಉಚಿತವಾದ ವೈಫೈ ಬಳಕೆಗೆ ಅವಕಾಶ ಕೊಡುತ್ತದೆ. ನಂತರ ಹೆಚ್ಚಿನ ವೈಫೈ ಸೇವೆ ಬೇಕಿದ್ದಲ್ಲಿ 1 ಡಾಲರ್‌ನಿಂದ ಪ್ಯಾಕೇಜ್ ಆರಂಭವಾಗುತ್ತದೆ. ಎಮಿರೇಟ್ಸ್‌ನಲ್ಲಿ ಜಾಗತಿಕವಾಗಿಯೇ ಅತ್ಯುತ್ತಮ ಆನ್‌ಬೋರ್ಡ್ ವೈಫೈ ವ್ಯವಸ್ಥೆ ಇರುವ ಕಾರಣ ಈ ಮೊತ್ತ ತೆರುವುದರಲ್ಲಿ ತಪ್ಪೇನಿಲ್ಲ.

►ಫಿಲಿಪ್ಪೀನ್ಸ್ ಏರ್‌ಲೈನ್ಸ್
ಫಿಲಿಪ್ಪೀನ್ಸ್ ವಿಮಾನಯಾನವು ಉಚಿತವಾಗಿ 15 ಎಂಬಿ ವೈಫೈ ಕೊಡುತ್ತದೆ. ಮುಂದಿನ ಹಂತದ ವೈಫೈ ಸೇವೆಗೆ ಸ್ವಲ್ಪ ಅಗ್ಗದಲ್ಲೇ ವ್ಯವಸ್ಥೆಯಿದೆ. ಕ್ರೆಡಿಟ್ ಕಾರ್ಡ್ ಇಲ್ಲದಿದ್ದರೂ ವೈಫೈ ಸೇವೆಗಾಗಿ ಕ್ಯಾಬಿನ್ ಕ್ರೂ ಸಹಾಯದಿಂದ ಸ್ಕ್ರಾಚ್ ಕಾರ್ಡ್‌ಗಳನ್ನು ಬಳಸಿ ಖರೀದಿ ಮಾಡಬಹುದು.

►ನಾರ್ವೆ
ನಾರ್ವೆ ವಿಮಾನಯಾನ ಹೇಳುವುದು ಹೀಗೆ: ನೀವು ನೆಲದ ಮೇಲಿರುವಾಗ ಅಂತರ್ಜಾಲ ಸೇವೆ ಬೇಕೇ ಬೇಕು. ಹಾಗಿರುವಾಗ ಹಾರಾಟದ ಸಂದರ್ಭ ಏಕೆ ಇರಬಾರದು? ಈ ವಿಮಾನಯಾನವು ಯುರೋಪ್, ಅಮೆರಿಕ ಮತ್ತು ಕೆರಿಬಿಯನ್‌ಗೆ ಹೋಗುವ ಎಲ್ಲಾ ದರ್ಜೆಯ ವಿಮಾಗಳಲ್ಲೂ ಉಚಿತ ವೈಫೈ ಸೇವೆ ಒದಗಿಸುತ್ತದೆ.
ಹಾಂಗ್ ಕಾಂಗ್ ಏರ್‌ಲೈನ್ಸ್
ಲಂಡನ್ ಮತ್ತು ಹಾಂಗ್ ಕಾಂಗ್ ನಡುವೆ ಹಾರಾಟಕ್ಕೆ ಈ ಕಂಪನಿ ಎ330-200 ವಿಮಾನಗಳಲ್ಲಿ ಉಚಿತ ವೈಫೈ ಸೇವೆಯನ್ನು ಒದಗಿಸಿದೆ.

►ನಾಕ್ ಏರ್
ಬ್ಯಾಂಕಾಕ್ ಮೂಲದ ಬಜೆಟ್ ಏರ್‌ಲೈನ್ಸ್ ಉಚಿತ ವೈಫೈ ಒದಗಿಸುವ ಕೆಲವೇ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿದೆ. ಇದರ ಎಲ್ಲಾ ವಿಮಾನಗಳಲ್ಲೂ ಉಚಿತ ವೈಫೈ ಸೌಲಭ್ಯ ಶೀಘ್ರದಲ್ಲೇ ಸಿಗಲಿದೆ.

►ಜೆಟ್‌ಬ್ಲೂ
ಇಂಟರ್ನೆಟ್ ಉಚಿತವಾಗಿ ಪಡೆಯಿರಿ ಎನ್ನುವ ಸಂದೇಶ ಜೆಟ್‌ಬ್ಲೂ ಪ್ರವೇಶಿಸಿದಾಗ ಸಿಗುತ್ತದೆ. ಅವರು ಇದನ್ನು ಫ್ಲೈಫಿ ಎಂದು ಕರೆದಿದ್ದಾರೆ. ಆಗಸದಲ್ಲಿ ಮನೆಯಲ್ಲಿ ಬಳಸುವಂತೆಯೇ ವೈಫೈ ಬಳಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News