×
Ad

10 ರೂ.ಬಾಡಿಗೆ ಕೇಳಿದ್ದಕ್ಕೆ ಸೈಕಲ್ ರಿಕ್ಷಾವಾಲನನ್ನು ಥಳಿಸಿದ ಪೊಲೀಸ್

Update: 2016-10-29 17:45 IST

ಅಗ್ರಾ, ಅಕ್ಟೋಬರ್ 20: ಉತ್ತರಪ್ರದೇಶದ ಪೊಲೀಸರ ಕ್ರೌರ್ಯ ಮತ್ತೊಮ್ಮೆ ಬಹಿರಂಗವಾಗಿದೆ. ಬಾಡಿಗೆ ಕೇಳಿದ ಬಡರಿಕ್ಷಾವಾಲನೊಬ್ಬನನ್ನು ಪೊಲೀಸ್ ಪೇದೆಯೊಬ್ಬ ನಿರ್ದಯವಾಗಿ ಹೊಡೆದು ನಂತರ ಕಾಲರ್ ಹಿಡಿದು ಸ್ವಲ್ಪದೂರದವರೆಗೆ ಎಳೆದೊಯ್ದ ಅಘಾತಕಾರಿ ಘಟನೆ ಆಗ್ರಾದ ಕೋತ್‌ವಾಲಿಯಿಂದ ವರದಿಯಾಗಿದೆ.

ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಪೊಲೀಸರ ದೌರ್ಜನ್ಯದ ಕುರಿತು ಭಾರೀ ವಿರೋಧ ವ್ಯಕ್ತವಾಗಿದೆ.

ಬಡಪಾಯಿ ರಿಕ್ಷಾವಾಲ ತನ್ನ ರಿಕ್ಷಾದಲ್ಲಿ ಪ್ರಯಾಣಿಸಿದ ಪೊಲೀಸನಿಂದ ಹತ್ತು ರೂಪಾಯಿ ಬಾಡಿಗೆ ಕೊಡಬೇಕೆಂದು ಹೇಳಿದ್ದೇ ಆತನ ಮಹದಪರಾಧವಾಯಿತು. ಘಟನೆಯ ವೀಡಿಯೊವನ್ನು ಚಿತ್ರೀಕರಿಸಿದ್ದ ಯಾರೋ ಸಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.ಆನಂತರ ಅದನ್ನು ನೋಡಿದ ಜನರು ಉತ್ತರಪ್ರದೇಶ ಸರಕಾರ ಮತ್ತು ಪೊಲೀಸರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ವೀಡಿಯೊ ವೈರಲ್ ಆದ ಬಳಿಕವೂ ತಪ್ಪಿತಸ್ಥಪೊಲೀಸನ ವಿರುದ್ಧ ಇಲಾಖೆ ಕ್ರಮ ಜರಗಿಸುವ ಬಗ್ಗೆ ಜನರು ಸಂದೇಹ ವ್ಯಕ್ತಪಡಿಸಿದ್ದಾರೆಂದು ವರದಿತಿಳಿಸಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News