ಲೂಟಿ ಮಾಡಿದ ಹಣ ಹಂಚಿಕೊಳ್ಳುವ ಬಗ್ಗೆ ಮುಲಾಯಂ ಕುಟುಂಬದಲ್ಲಿ ಲಡಾಯಿ: ಸಾಧ್ವಿ ನಿರಂಜನಾ
ಫತೇಪುರ, ಅಕ್ಟೋಬರ್ 29: ಕೇಂದ್ರ ಸಚಿವೆ ಸಾಧ್ವಿ ನಿರಂಜನಾಜ್ಯೋತಿ ಸಮಾಜವಾದಿ ಪಕ್ಷ, ಬಿಎಸ್ಪಿ, ಕಾಂಗ್ರೆಸ್ ವಿರುದ್ಧ ಕಟುಟೀಕಾಪ್ರಹಾರ ಹರಿಸಿದ್ದಾರೆ. ಸಮಾಜವಾದಿ ಪಾರ್ಟಿಯ ಕುರಿತು ಪ್ರಸ್ತಾಪಿಸಿದ ಸಚಿವೆ ಮುಲಾಯಂ ಸಿಂಗ್ ಬೇಕಿದ್ದರೆ ಮಹಾಗಟ್‌ಬಂಧನ್(ಮಹಾಮೈತ್ರಿ) ಮಾಡಿಕೊಳ್ಳಲಿ ಅಥವಾ ಇನ್ನುಯಾವುದೇ ಮೈತ್ರಿಮಾಡಿಕೊಳ್ಳಲಿ. ಮುಂದಿನ ಚುನಾವಣೆಯಲ್ಲಿ ಮಾತ್ರ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆಂದು ವರದಿ ಯಾಗಿದೆ.
ಮುಲಾಯಮ್‌ರ ನಾಟಕ ಜನರು ಅರ್ಥಮಾಡಿಕೊಂಡಿದ್ದಾರೆ. ಇಂದು ಜನರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ. ಸಮಾಜವಾದಿ ಪಾರ್ಟಿಯೊಳಗೆ ನಡೆಯುತ್ತಿರುವ ಜಗಳ ಆ ಪಾರ್ಟಿಯ ಸರಕಾರ ಕಳೆದ ನಾಲ್ಕುವರ್ಷದಲ್ಲಿ ದೋಚಿರುವ ಸಂಪಾದನೆಯನ್ನು ಯಾರು ಎಷ್ಟು ಎಲ್ಲಿಗೆ ಕೊಂಡುಹೋಗಬೇಕೆಂಬ ಕುರಿತದ್ದಾಗಿದೆ. ಕುಟುಂಬದೊಳಗಿನ ಜಗಳವನ್ನೇ ನಿಯಂತ್ರಿಸಲು ಸಮಾಜವಾದಿ ಪಾರ್ಟಿಗೆ ಸಾಧ್ಯವಾಗಿಲ್ಲ. ಹೀಗಿರುತ್ತಾ ಉತ್ತರಪ್ರದೇಶವನ್ನು ಹೇಗೆ ತಾನೆ ಅದು ಆಳಬಲ್ಲುದು ಎಂದು ಸಾಧ್ವಿ ಪ್ರಶ್ನಿಸಿದ್ದಾರೆ.
ಸಮಾಜವಾದಿಯೊಳಗಿನ ಕಲಹ ಬಿಎಸ್ಪಿಗೆ ಲಾಭವಲ್ಲವೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಸಮಾಜವಾದಿಪಾರ್ಟಿ, ಬಹುಜನಸಮಾಜವಾದಿ ಪಾರ್ಟಿ, ಕಾಂಗ್ರೆಸ್ ಇವು ಮೂರು ಸೇರಿ ಉತ್ತರಪ್ರದೇಶವನ್ನು ಲೂಟಿಗೈದಿವೆ. ಈ ಮೂರು ಪಾರ್ಟಿ ಪರಸ್ಪರ ಶಾಮಿಲಾಗಿವೆ ಎಂದಿದ್ದಾರೆ. ಜೊತೆಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಳೆದಲೋಕಸಭಾ ಚುನಾವಣೆಗಿಂತ ಹೆಚ್ಚಿನ ಲಾಭ ಬಿಜೆಪಿಗೆ ಆಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದು ವರದಿ ತಿಳಿಸಿದೆ.