ನೆಲಕ್ಕಿಳಿಯದೆ 10 ತಿಂಗಳು ಹಾರಿದ ಈ ಪುಟ್ಟ ಹಕ್ಕಿ
ಸ್ಟಾಕ್‌ಹೋಂ,ಅ. 30: ನೆಲಕ್ಕಿಳಿಯದೆ ಹತ್ತು ತಿಂಗಳು ಹಾರಿ ಕಾಮನ್ ಸ್ವಿಫ್ಟ್ ಎಂದು ಕರೆಯುವ ಈ ಪುಟ್ಟ ಹಕ್ಕಿ ದಾಖಲೆ ನಿರ್ಮಿಸಿದೆ ಎಂದು ವರದಿಯಾಗಿದೆ. ಸ್ವೀಡನ್ ಪಕ್ಷಿ ನಿರೀಕ್ಷಕ ಆಂಡರ್ಸ್ ಹೆಂಡರ್ಸ್ಟೋ ಈ ಹಕ್ಕಿಯನ್ನು ಪತ್ತೆಹಚ್ಚಿದವರು. ಇದು ಟೊರ್ಪಿಡೊ ಹಕ್ಕಿಯಂತೆ ಮೊದಲನೋಟಕ್ಕೆ ಕಾಣಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಹೆಂಡರ್ಸ್ಟೋ ಹದಿಮೂರು ಹಕ್ಕಿಗಳ ಶರೀರದಲ್ಲಿ ಸೆನ್ಸರ್ ಜೋಡಿಸಿದ್ದರು. ಮತ್ತು ಎರಡು ವರ್ಷ ನಿರೀಕ್ಷಿಸಿದ್ದರು. ಅವರ ಈ ಅಧ್ಯಯನದಲ್ಲಿ ಹಕ್ಕಿಗಳು ಹತ್ತು ತಿಂಗಳು ಉತ್ತರ ಯುರೋಪಿನಿಂದ ಮಧ್ಯಾಫ್ರಿಕಕ್ಕೆ ಹತ್ತು ತಿಂಗಳು ಪ್ರಯಾಣಿಸಿ ಮರಳಿರುವುದು ಅವರು ಕಂಡುಕೊಂಡಿದ್ದಾರೆ. ಈ ಪ್ರಯಾಣದಲ್ಲಿ ಮೂರು ಹಕ್ಕಿಗಳು ಎಲ್ಲಿಯೂ ವಿಶ್ರಮಿಸದೆ ಪ್ರಯಾಣಿಸಿವೆ. ನಿದ್ದೆ ಆಹಾರ ಎಲ್ಲವನ್ನೂ ಹಾರುವ ವೇಳೆಯೇ ಅವುಗಳು ಹುಡುಕಿಕೊಂಡಿರುವುದು ವಿಜ್ಞಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಬ್ಲೇಡ್‌ಗಳಂತೆ ರೆಕ್ಕೆಗಳಿರುವ ಹಕ್ಕಿಗಳಿಗೆ ಹಠಾತ್ ತಿರುಗಲು ಕೆಳಮಟ್ಟದಲ್ಲಿ ಹಾರಲು ಕಷ್ಟವಿಲ್ಲದೆ ಸಾಧ್ಯವಾಗಿದೆ. ಕಡಿಮೆ ಭಾರದ ಈ ಪುಟ್ಟ ಹಕ್ಕಿಗಳು ಐದರಿಂದ 20ವರ್ಷ ಬದುಕುತ್ತವೆ. ಇದುವರೆಗೂ ಇದರ ಕುರಿತು ಬೇರೆ ಯಾರೂ ವಿವರವನ್ನು ಸಂಗ್ರಹಿಸಿಲ್ಲ ಎಂದು ಆಂರ್ಡೋಸ್ಟ್ ಹೇಳಿದ್ದಾರೆ. ಕರಂಟ್ ಬಯಾಲಜಿ ಎಂಬ ಪುಸ್ತಕದಲ್ಲಿ ಈ ಹಕ್ಕಿಗಳ ವಿವರಗಳು ಲಭ್ಯವಿದೆ ಎಂದು ವರದಿ ತಿಳಿಸಿದೆ.