×
Ad

ಈಗ ಕೋತಿಗಳನ್ನು ಹಿಡಿದವರಿಗೂ 1000 ರೂ. ಬಹುಮಾನ !

Update: 2016-10-30 15:47 IST

ಸಿಮ್ಲಾ, ಅಕ್ಟೋಬರ್ 30: ಕೇರಳದಲ್ಲಿ ನಾಯಿಗಳ ಉಪಟಳವಾದರೆ ಹಿಮಾಚಲ ಪ್ರದೇಶದಲ್ಲಿ ಕೋತಿಗಳ ಹಾವಳಿ ವಿಪರೀತವಾಗಿದೆ. ಅವುಗಳ ಉಪಟಳದಿಂದಪಾರಾಗಲಿಕ್ಕಾಗಿ ಕೋತಿಗಳನ್ನು ಕೊಲ್ಲುವವರಿಗೆ ಅಥವಾ ಜೀವಂತ ಹಿಡಿಯುವವರಿಗೆ 1000ರೂಪಾಯಿ ಬಹುಮಾನವನ್ನು ಹಿಮಾಚಲ್ ಸರಕಾರ ಘೋಷಿಸಿದೆ ಎಂದು ವರದಿಯಾಗಿದೆ.

ಕೃಷಿಸ್ಥಳದಲ್ಲಿ ಬೀದಿಯಲ್ಲಿ ಅಲೆದಾಡುವ ಕೋತಿಗಳು ನೀಡುವ ಉಪಟಳ ಅಷ್ಟಿಷ್ಟಲ್ಲ. ಆದ್ದರಿಂದ ಕೋತಿಗಳನ್ನು ಹಿಡಿದು ಗರ್ಭನಿರೋಧ ಚಿಕಿತ್ಸೆಗುರಿಪಡಿಸುವುದಕ್ಕೆ ಸರಕಾರ ತೀರ್ಮಾನಿಸಿದೆ. ಕೋತಿ ಹಿಡಿಯುವರಿಗೆ 1000ರೂಪಾಯಿವರೆಗೂ ಬಹುಮಾನ ನೀಡಲಿದೆ.

37 ಸ್ಥಳಗಳಲ್ಲಿ ಕೋತಿಗಳ ವಿಪರೀತ ಕಾಟವಿದೆಯೆಂದು ಸರಕಾರ ಗುರುತಿಸಿದೆ. ಆದರೆ ಅವುಗಳ ಉಪಟಳ ವ್ಯಾಪಕವಾದ್ದರಿಂದ 57 ಸ್ಥಳಗಳಲ್ಲಿ ಕೋತಿಕಾಟ ಇದೆ ಎಂದು ಸರಕಾರ ಘೋಷಿಸಿದೆ. ಕೋತಿಗಳನ್ನು ಕೊಲ್ಲುವವವರಿಗೆ ಬಹುಮಾನ ನೀಡಲಾಗುವುದು ಮತ್ತು ಜೀವಂತ ಹಿಡಿದು ತರುವವರಿಗೆ ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಹಿಮಾಚಲ ಪ್ರದೇಶ ಅರಣ್ಯಸಚಿವ ಠಾಕೂರ್ ಸಿಂಗ್ ಘೋಷಿಸಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News