ಗಡಿಯಲ್ಲಿ ಗುಂಡಿನ ಚಕಮಕಿ ; ಭಾರತದ ಓರ್ವ ಯೋಧ ಹುತಾತ್ಮ
Update: 2016-10-31 17:00 IST
ಜಮ್ಮು, ಅ.31: ಜಮ್ಮು ಮತ್ತು ಕಾಶ್ಮೀರದ ರಾಜ್‌ಸೆಕ್ಟರ್‌ನಲ್ಲಿ ಪಾಕ್ ಮತ್ತು ಭಾರತದ ಸೇನೆಯ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಭಾರತದ ಓರ್ವ ಯೋಧ ಬಲಿಯಾಗಿದ್ದಾರೆ.
ಗಡಿ ನಿಯಂತ್ರಣಾ ರೇಖೆಗೆ ಪಕ್ಕದ ಜಮ್ಮು ಮತ್ತು ಕಾಶ್ಮೀರದ ಅವಳಿ ಜಿಲ್ಲೆಗಳಾದ ಪೂಂಚ್ ಮತ್ತು ರಾಜೋರಿಯ ಗ್ರಾಮಗಳನ್ನು ಗುರಿಯಾಗಿರಿಸಿ ಪಾಕ್ ಸೇನೆಯ ಅಪ್ರಚೋದಿತ ದಾಳಿ ಮುಂದುವರಿದಿದ್ದು, ಪೂಂಚ್‌ನಲ್ಲಿ ಮೋಟಾರ್ ಶೆಲ್ ಬಿದ್ದು ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ. ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.