ಸರದಾರ್ ಪಟೇಲ್ ಜಯಂತಿಯನ್ನು ಪುಣ್ಯತಿಥಿಎಂದು ಬ್ಯಾನರ್ ಹಾಕಿದ ಬಿಜೆಪಿ !
ಹೊಸದಿಲ್ಲಿ,ಅಕ್ಟೋಬರ್ 31: ಇಂದು ವಲ್ಲಭಭಾಯಿಪಟೇಲ್ ಜಯಂತಿ ಇಡೀದೇಶದಲ್ಲಿ ಆಚರಿಸಲಾಗುತ್ತಿದೆ. ಮುಂಬೈಯ ಬಿಜೆಪಿ ಹಾಕಿದ ಬ್ಯಾನರ್‌ನಲ್ಲಿ ವಲ್ಲಭಭಾಯಿ ಪಟೇಲ್ ಜಯಂತಿ ಬದಲು ಅವರಿಗೆ ಪುಣ್ಯತಿಥಿ ಎಂದು ಬರೆದು ವಿವಾದ ಮೈಮೇಲೆಳೆದು ಕೊಂಡಿದೆ ಎಂದು ವರದಿಯಾಗಿದೆ.
ಬ್ಯಾನರ್‌ನಲ್ಲಿ ಸ್ಮೃತಿ ಇರಾನಿಯ ಫೋಟೊ ಇದೆ;
ಮುಂಬೈ ಪಾಲ್‌ಘರ್‌ನಲ್ಲಿ ಬಿಜೆಪಿಯ ವತಿಯಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಕೇಂದ್ರಸಚಿವೆ ಸ್ಮೃತಿ ಇರಾನಿ ಬರುತ್ತಾರೆ ಎಂದು ಬ್ಯಾನರ್‌ನಲ್ಲಿ ಬರೆಯಲಾಗಿದೆ. ಜೊತೆಗೆ ಸ್ವಚ್ಛತಾ ಅಭಿಯಾನ ವಲ್ಲಭಭಾಯಿ ಪುಣ್ಯತಿಥಿ ನಿಮಿತ್ತ ಕೈಗೊಳ್ಳಲಾಗಿದೆ ಎಂದು ಬರೆಯಲಾಗಿದೆ. ಇದು ಜನರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ವಿಪಕ್ಷಗಳಿಂದ ಟೀಕೆ:
ಬ್ಯಾನರ್ ಕುರಿತ ವಿವಾದ ಕಾವೇರುತ್ತಿದ್ದಂತೆ ಇದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರಫಡ್ನವೀಸ್ ಮತ್ತು ಇತರ ನಾಯಕರ ಅಜ್ಞಾನವೆಂದು ವಿಪಕ್ಷಗಳು ಟೀಕಿಸಿವೆ. ಆದರೆ ಫಡ್ನವೀಸ್ ಯಾವ ಉತ್ತರ ನೀಡುತ್ತಾರೆಂಬ ಕುತೂಹಲ ಜನರಲ್ಲಿದೆ ಎಂದು ವರದಿ ತಿಳಿಸಿದೆ.