ಅಮೆರಿಕ : ಬಂದೂಕು ಮಾರಾಟ ಅಂಗಡಿ ಮಾಲೀಕನಿಂದ ವಿವಾದಾಸ್ಪದ ಜಾಹೀರಾತು

Update: 2016-10-31 15:05 GMT

ನ್ಯೂಯಾರ್ಕ್, ಅ. 31: ತಾವು ಬಂದೂಕುಗಳನ್ನು ಮುಸ್ಲಿಮರು ಮತ್ತು ಹಿಲರಿ ಕ್ಲಿಂಟನ್ ಬೆಂಬಲಿಗರಿಗೆ ಮಾರಾಟ ಮಾಡುವುದಿಲ್ಲ ಎಂಬುದಾಗಿ ಬಂದೂಕು ಮಾರಾಟ ಅಂಗಡಿಯೊಂದರ ಮಾಲೀಕ ಬೋರ್ಡ್ ಹಾಕಿರುವುದು ಹಾಗೂ ದೈನಿಕವೊಂದರಲ್ಲಿ ಜಾಹೀರಾತು ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

‘‘ಭಯೋತ್ಪಾದಕರಿಗೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವುದರಿಂದ ನಮಗೆ ಸುರಕ್ಷತೆಯ ಭಾವನೆ ಬರುವುದಿಲ್ಲ’’ ಎಂದು ಜಾಹೀರಾತಿನಲ್ಲಿ ಹೇಳಲಾಗಿದೆ.

ಈ ರೀತಿಯ ಸಂದೇಶದ ಬೋರ್ಡನ್ನು ಇಲ್ಲಿನ ಶಸ್ತ್ರಾಸ್ತ್ರ ಅಂಗಡಿಯೊಂದರ ಮಾಲೀಕರು ತನ್ನ ಅಂಗಡಿಯ ಬಾಗಿಲಿಗೆ ಅಂಟಿಸಿದ್ದಾರೆ. ಅದೂ ಅಲ್ಲದೆ, ಸ್ಥಳೀಯ ಪತ್ರಿಕೆಯೊಂದರಲ್ಲಿ ಈ ಸಂಬಂಧ ಜಾಹೀರಾತೊಂದನ್ನೂ ನೀಡಿದ್ದಾರೆ.

‘‘ಮುಸ್ಲಿಮರು ಅಥವಾ ಹಿಲರಿ ಬೆಂಬಲಿಗರಾ? ದಯವಿಟ್ಟು ಬೇಡ. ಭಯೋತ್ಪಾದಕರಿಗೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವುದಿರಿಂದ ನಮಗೆ ಸುರಕ್ಷತೆಯ ಭಾವನೆ ಬರುವುದಿಲ್ಲ!’’ ಎಂಬುದಾಗಿ ಜಾಹೀರಾತಿನಲ್ಲಿ ಹೇಳಲಾಗಿದೆ.

ಮುಸ್ಲಿಮರು ಅಥವಾ ಹಿಲರಿ ಬೆಂಬಲಿಗರನ್ನು ತಾವು ಬಾಗಿಲಿನಲ್ಲೇ ವಾಪಸ್ ಕಳುಹಿಸುತ್ತೇವೆ ಎಂದು ಅಂಗಡಿಯ ಮಾಲೀಕ ಪೌಲ್ ಶಾಂಡ್ಲರ್ ಹೇಳಿದರು.

ಡೆಮಾಕ್ರಟಿಕ್ ಪಕ್ಷದ ಬೆಂಬಲಿಗರು ಮತ್ತು ಮುಸ್ಲಿಮರಿಗೆ ಬಂದೂಕು ನಿರಾಕರಿಸಲು ಅಂಗಡಿಯ ಮಾಲೀಕನಾಗಿ ತನಗೆ ಸ್ವಾತಂತ್ರವಿದೆ ಎಂದು ಅವರು ‘ತಿಂಕ್‌ಪ್ರೊಗ್ರೆಸ್’ಗೆ ಹೇಳಿದರು.

 ‘‘ಅಮೆರಿಕನ್ನರಿಗೆ ಬಂದೂಕುಗಳ ಅಗತ್ಯವಿದೆ ಎಂದು ತನಗನಿಸುವುದಿಲ್ಲ ಎಂಬುದಾಗಿ ಹಿಲರಿ ಕ್ಲಿಂಟನ್ ಸ್ಪಷ್ಟವಾಗಿ ಹೇಳಿದ್ದಾರೆ’’ ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News