30 ಕೋಟಿ ಮಕ್ಕಳು ವಿಷ ಗಾಳಿಯನ್ನು ಸೇವಿಸುತ್ತಿದ್ದಾರೆ: ಯುನಿಸೆಫ್ ವರದಿ

Update: 2016-10-31 15:20 GMT

ನ್ಯೂಯಾರ್ಕ್, ಅ. 31: ಅಂತಾರಾಷ್ಟ್ರೀಯ ಮಾನದಂಡದಿಂದ ಕನಿಷ್ಠ ಆರು ಪಟ್ಟು ಅಧಿಕ ವಾಯು ಮಾಲಿನ್ಯ ಮಟ್ಟ ಹೊಂದಿರುವ ದಕ್ಷಿಣ ಏಶ್ಯದ ಪ್ರದೇಶಗಳಲ್ಲಿ 22 ಕೋಟಿ ಮಕ್ಕಳು ವಾಸಿಸುತ್ತಿದ್ದಾರೆ ಎಂದು ಯುನಿಸೆಫ್ ಇಂದು ಬಿಡುಗಡೆ ಮಾಡಿದ ನೂತನ ವರದಿಯೊಂದು ತಿಳಿಸಿದೆ.

ಈ ಮಟ್ಟದ ವಾಯು ಮಾಲಿನ್ಯವಿರುವ ಪ್ರದೇಶಗಳ್ಲಲಿ ಜಾಗತಿಕವಾಗಿ 30 ಕೋಟಿ ಮಕ್ಕಳು ವಾಸಿಸುತ್ತಿದ್ದಾರೆ.

ಉಪಗ್ರಹಗಳು ಕಳುಹಿಸಿದ ಚಿತ್ರಗಳನ್ನು ಆಧರಿಸಿ ‘ಕ್ಲಿಯರ್ ದಿ ಏರ್ ಫಾರ್ ಚಿಲ್ಡ್ರನ್’ ಎಂಬ ವರದಿಯನ್ನು ತಯಾರಿಸಲಾಗಿದೆ.

‘‘ಅಂತಾರಾಷ್ಟ್ರೀಯ ಮಿತಿಗಿಂತ ಕನಿಷ್ಠ ಆರು ಪಟ್ಟು ಹೆಚ್ಚು ಮಾಲಿನ್ಯವಿರುವ ಗಾಳಿ ಹೊಂದಿದ ಸ್ಥಳಗಳಲ್ಲಿ ಪ್ರಸಕ್ತ ಸುಮಾರು 30 ಕೋಟಿ ಮಕ್ಕಳು ವಾಸಿಸುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ವಾರ್ಷಿಕ ಮಿತಿಯನ್ನು ಮೀರಿದ ಪ್ರದೇಶಗಳಲ್ಲಿ ಸುಮಾರು 200 ಕೋಟಿ ಮಕ್ಕಳು ವಾಸಿಸುತ್ತಿದ್ದಾರೆ’’ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News