ವಿಮಾನ ನಿಲ್ದಾಣದಲ್ಲಿ ಗಂಡನಿಗೆ ಕೈಕೊಟ್ಟು ಪರಾರಿಯಾದ ದುಬೈ ಮೂಲದ ಮಹಿಳೆ
Update: 2016-10-31 22:30 IST
ಹೈದರಾಬಾದ್,ಅ.31: ದುಬೈ ಮೂಲದ ಮಹಿಳಾ ಅಕೌಂಟಂಟ್ ಓರ್ವಳು ಶುಕ್ರವಾರ ಸಂಜೆ ಕೋಲ್ಕತಾಕ್ಕೆ ತೆರಳುವ ಮಾರ್ಗದಲ್ಲಿ ಇಲ್ಲಿಯ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಾಪತ್ತೆಯಾಗಿದ್ದಾಳೆ. ಆಕೆ ತನ್ನ ಸ್ವಂತ ಇಚ್ಛೆಯ ಮೇರೆಗೆ ವಿಮಾನ ನಿಲ್ದಾಣದ ಆವರಣದಿಂದ ಪರಾರಿಯಾಗಿದ್ದಾಳೆ ಎಂದು ಪೊಲೀಸರು ಬಳಿಕ ಖಚಿತಪಡಿಸಿದ್ದಾರೆ.
ಅಭಿನವ ಕುಮಾರ್ ಮತ್ತು ಅವರ ಪತ್ನಿ ಖುಷ್ಬೂ(30) ಶುಕ್ರವಾರ ಸಂಜೆ ನಾಲ್ಕು ಗಂಟೆಗೆ ದುಬೈನಿಂದ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಕೋಲ್ಕತಾದ ವಿಮಾನವನ್ನು ಹತ್ತಲು ಅವರು ಇಂಟರ್‌ನ್ಯಾಷನಲ್ ಟರ್ಮಿನಲ್‌ನಿಂದ ಡೊಮೆಸ್ಟಿಕ್ ಟರ್ಮಿನಲ್‌ಗೆ ತೆರಳಬೇಕಾಗಿತ್ತು. ಈ ಹಂತದಲ್ಲಿ ಖುಷ್ಬೂ ನಾಪತ್ತೆಯಾಗಿದ್ದಾಳೆ ಎಂದು ವಿಮಾನ ನಿಲ್ದಾಣ ಪೊಲೀಸರು ತಿಳಿಸಿದರು.