×
Ad

ನ್ಯಾಯ ಪಡೆಯುವಲ್ಲಿ ಹಣಕಾಸು ಮುಗ್ಗಟ್ಟು ಅಡ್ಡಿಯಾಗಬಾರದು: ಮುಖ್ಯ ನ್ಯಾಯಮೂರ್ತಿ

Update: 2016-10-31 22:31 IST

ಹೊಸದಿಲ್ಲಿ,ಅ.31: ಮೂಲಸೌಕರ್ಯ ಮತ್ತು ನ್ಯಾಯಾಧೀಶರ ಕೊರತೆಗೆ ಕಾರಣವಾಗಬಹುದಾದರೂ ಜನತೆ ನ್ಯಾಯಕ್ಕಾಗಿ ನ್ಯಾಯಾಲಯಗಳ ಮೆಟ್ಟಿಲು ಹತ್ತಲು ಹಣಕಾಸಿನ ಮುಗ್ಗಟ್ಟು ಅಡ್ಡಿಯಾಗಬಾರದು ಎಂದು ಮುಖ್ಯ ನ್ಯಾಯಾಧೀಶ ಟಿ.ಎಸ್.ಠಾಕೂರ್ ಅವರು ಸೋಮವಾರ ಇಲ್ಲಿ ಹೇಳಿದರು.

ಇದು ಜನರು ನ್ಯಾಯಾಲಯಗಳ ಮೂಲಕ ನ್ಯಾಯ ಪಡೆದುಕೊಳ್ಳಲು ಸಾಧ್ಯವಾಗಬೇಕು ಎಂಬ ಸಂವಿಧಾನದ ಆಶಯಕ್ಕೆ ಅನುಗುಣವಾಗಿದೆ. ಜನರು ತಮ್ಮ ಪ್ರಕರಣಗಳು ಇತ್ಯರ್ಥಗೊಳ್ಳಲು ವರ್ಷಗಳ ಕಾಲ ಕಾಯುವಂತಾದರೆ ಸಂವಿಧಾನದ ಆಶಯ ನನಸಾಗುವುದಿಲ್ಲ ಎಂದು ವಿಜ್ಞಾನ ಭವನದಲ್ಲಿ ಆಯೋಜಿಸಲಾಗಿದ್ದ ದಿಲ್ಲಿ ಉಚ್ಚ ನ್ಯಾಯಾಲಯದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

 ಇದಕ್ಕೂ ಮುನ್ನ ಮಾತನಾಡಿದ್ದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ಉಚ್ಚ ನ್ಯಾಯಾಲಯದಲ್ಲಿ ಮೂಲಸೌಕರ್ಯ ಸುಧಾರಣೆ ಮತ್ತು ಹೆಚ್ಚಿನ ನ್ಯಾಯಾಧೀಶರ ನೇಮಕಾತಿಗೆ ತನ್ನ ಸರಕಾರದ ಬೆಂಬಲದ ಭರವಸೆ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರೂ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇಡೀ ನ್ಯಾಯಾಂಗ ವ್ಯವಸ್ಥೆಗೆ ಅಗೌರವವನ್ನು ತರುವ ಘಟನೆಗಳು ಒಂದಲ್ಲ ಒಂದು ಹಂತದಲ್ಲಿ ನಡೆಯುತ್ತಿರುವುದು ನೋವಿನ ಸಂಗತಿಯಾಗಿದೆ ಎಂದ ನ್ಯಾ.ಠಾಕೂರ್ ಅವರು, ತಮ್ಮ ಪ್ರಾಮಾಣಿಕತೆಯ ಬಗ್ಗೆ ಜನರ ದೃಷ್ಟಿಕೋನ ಕುರಿತು ನ್ಯಾಯಾಧೀಶರು ಆತ್ಮಶೋಧನೆ ಮಾಡಿಕೊಳ್ಳಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News