ವೆದ್ಯ, ಆಡಳಿತಗಾರ ಡಾ.ಎಚ್.ಎಸ್.ಬಲ್ಲಾಳ್

Update: 2016-10-31 18:12 GMT

ವೈದ್ಯಕೀಯ ಕ್ಷೇತ್ರಕ್ಕೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಡಾ.ಹೆಬ್ರಿಬೀಡು ಸುಭಾಷ್‌ಕೃಷ್ಣ ಬಲ್ಲಾಳ್ ಡಾ.ಎಚ್.ಎಸ್. ಬಲ್ಲಾಳ್ ಎಂದೇ ಎಲ್ಲರ ನಡುವೆ ಜನಪ್ರಿಯರಾದವರು.
ಕಳೆದ ಒಂದು ದಶಕದಿಂದ ಮಣಿಪಾಲ ವಿವಿಯ ಪ್ರೊಚಾನ್ಸಲರ್ ಆಗಿರುವ ಡಾ.ಬಲ್ಲಾಳ್‌ರಿಗೆ ಮಣಿಪಾಲ ಸಂಸ್ಥೆಯೊಂದಿಗಿನ ಸಂಬಂಧ ನಾಲ್ಕೂವರೆ ದಶಕಗಳಿಗೂ ಮೀರಿದ್ದಾಗಿದೆ. ಮೈಸೂರು ಮೆಡಿಕಲ್ ಕಾಲೇಜಿನಿಂದ ಎಂಬಿಬಿಎಸ್ ಹಾಗೂ ಬೆಂಗಳೂರು ಮೆಡಿಕಲ್ ಕಾಲೇಜಿನಿಂದ ರೇಡಿಯೊ ಡಯಾಗ್ನಿಸಿಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಾ.ಬಲ್ಲಾಳ್ ಮಂಗಳೂರು ಕೆಎಂಸಿಯಲ್ಲಿ ಸೇವೆಗೆ ಸೇರಿದ ಇವರು ಅಸೋಸಿಯೇಟ್ ಡೀನ್ ಹಾಗೂ 2001ರಲ್ಲಿ ಡೀನ್ ಆಗಿ ಸೇವೆ ಸಲ್ಲಿಸಿದರು.
2003ರಲ್ಲಿ ಮಣಿಪಾಲ ವಿವಿಯ ಕುಲಪತಿಗಳಾಗಿ ನೇಮಕಗೊಂಡ ಡಾ.ಬಲ್ಲಾಳ್, ಮೂರು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ಬಳಿಕ 2006ರಲ್ಲಿ ಪ್ರೊ ಚಾನ್ಸಲರ್ ಆಗಿ ಸೇವೆ ಸಲ್ಲಿಸುತಿದ್ದಾರೆ. ಒಳ್ಳೆಯ ಕ್ರೀಡಾಪಟುವೂ ಆಗಿರುವ ಡಾ.ಬಲ್ಲಾಳ್ ಕ್ರಿಕೆಟ್, ಟೆನಿಸ್ ಹಾಗೂ ಬ್ಯಾಡ್ಮಿಂಟನ್‌ನ ಒಳ್ಳೆಯ ಆಟಗಾರ. ಟೆನಿಸ್‌ನಲ್ಲಿ ಮೈಸೂರು ವಿವಿಯನ್ನು ಪ್ರತಿನಿಧಿಸಿದ್ದರು. ಬದುಕಿನ ಏಳು ದಶಕಗಳನ್ನು ದಾಟಿದರೂ ಅವಕಾಶ ಸಿಕ್ಕಿದಾಗಲೆಲ್ಲಾ ಈಗಲೂ ಆಡಲು ಮೈದಾನಕ್ಕಿಳಿಯುವ ಉತ್ಸಾಹಿ.
ಅಧ್ಯಾಪನವನ್ನು ಅತಿಯಾಗಿ ಪ್ರೀತಿಸುವ ಡಾ.ಬಲ್ಲಾಳ್, ಕಲಿಸುವಿಕೆಯು ಹೊಸ ಹೊಸ ವಿಷಯಗಳ ನಿರಂತರ ಕಲಿಯುವಿಕೆಯ ಭಾಗವಾಗಿದೆ ಎಂದು ನಂಬಿದವರು. 2008ರಲ್ಲಿ ಇವರಿಗೆ ಅಕಾಡಮಿ ಆಫ್ ಜನರಲ್ ಎಜ್ಯುಕೇಷನ್‌ನ ಹೊಸ ವರ್ಷದ ಪ್ರಶಸ್ತಿ, 2010ರಲ್ಲಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಗಳು ದೊರಕಿವೆ.

‘ಪೀಪಿಂಗ್ ಇನ್‌ಸೈಡ್ ದಿ ಹ್ಯುಮನ್ ಬಾಡಿ’ ಎಂಬುದು ಡಾ.ಎಚ್.ಎಸ್. ಬಲ್ಲಾಳ್ ರೇಡಿಯಾಲಜಿ ವಿದ್ಯಾರ್ಥಿಗಳಿಗಾಗಿ ಬರೆದಿರುವ ಪುಸ್ತಕ. ದೊಡ್ಡ ನಗುವಿನ ಹಸನ್ಮುಖಿ ಡಾ.ಬಲ್ಲಾಳ್‌ರ ಮುಖ ಮಣಿಪಾಲದ ಆಸುಪಾಸುಗಳ ಚಿರಪರಿಚಿತ.
 

Writer - ಬಿ.ಬಿ ಶೆಟ್ಟಿಗಾರ್

contributor

Editor - ಬಿ.ಬಿ ಶೆಟ್ಟಿಗಾರ್

contributor

Similar News