ತಿರುವನಂತಪುರಂ:ಭಾಷಾ ದಮನ ನೀತಿ ವಿರೋಧಿಸಿ ಕನ್ನಡ, ತಮಿಳು ಭಾಷಾ ಅಲ್ಪಸಂಖ್ಯಾತ ಸಂಘಟನೆಗಳಿಂದ ಧರಣಿ

Update: 2016-11-01 06:04 GMT

ಕಾಸರಗೋಡು, ನ.1: ಕೇರಳ ಸರಕಾರದ ಭಾಷಾ ಅಲ್ಪಸಂಖ್ಯಾ೦ತರ  ದಮನ ನೀತಿಯನ್ನು ಪ್ರತಿಭಟಿಸಿ ಕನ್ನಡ ಮತ್ತು ತಮಿಳು ಭಾಷಾ ಅಲ್ಪಸಂಖ್ಯಾತ ಸಂಘಟನೆಗಳು, ಭಾಷಾ  ಅಲ್ಪಸಂಖ್ಯಾತ ಶಿಕ್ಷಕ, ವಿದ್ಯಾರ್ಥಿ ಹಾಗೂ ಇತರ  ಸಂಘಟನೆಗಳು, ಕನ್ನಡಾಭಿಮಾನಿಗಳು  ರಾಜ್ಯೋತ್ಸವ ದಿನವಾದ  ಇಂದು ತಿರುವನಂತಪುರದ ಸಚಿವಾಲಯದ  ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ  ನಡೆಸುತ್ತಿದ್ದಾರೆ.

ಕೇರಳದಲ್ಲಿರುವ ಭಾಷಾ ಅಲ್ಪಸಂಖ್ಯಾತರಿಗೆ  ಸಂವಿಧಾನ ದತ್ತವಾದ ಹಕ್ಕು ಹಾಗೂ ಸವಲತ್ತುಗಳಿವೆ.  ಇದು ಉಲ್ಲಂಘನೆಯಾಗುತ್ತಿದ್ದು,  ಭಾಷಾ  ಅಲ್ಪಸಂಖ್ಯಾತರ  ಭಾಷೆ ಮತ್ತು ಸಂಸ್ಕೃತಿ ವಿನಾಶದ ಅಂಚಿನಲ್ಲಿದೆ. ಭಾಷಾ  ಅಲ್ಪಸಂಖ್ಯಾತರನ್ನು  ದ್ವಿತೀಯ ದರ್ಜೆಯವರನ್ನಾಗಿ  ಪರಿಗಣಿಸಲಾಗುತ್ತಿದೆ  ಎಂದು ಆರೋಪಿಸಿ ಪ್ರತಿಭಟನೆ ನಡೆಯಿತು.

ಮಲಯಾಳಂ ಭಾಷಾ ಮಸೂದೆಯಲ್ಲಿ  ಭಾಷಾ ಅಲ್ಪಸಂಖ್ಯಾತರ  ಹಿತರಕ್ಷಣೆ ಮಾಡಬೇಕು , ಶಿಕ್ಷಣ , ಕಾನೂನು, ಆಡಳಿತ, ಸಾರ್ವಜನಿಕ ವ್ಯವಹಾರ ಯಾವುದೇ ವಿಭಾಗಗಳಲ್ಲಿ  ಭಾಷಾ ಅಲ್ಪಸಂಖ್ಯಾತರ  ಮೇಲೆ, ಭಾಷಾ ಅಲ್ಪಸಂಖ್ಯಾತ  ಪ್ರದೇಶಗಳಲ್ಲಿ  ಮಲಯಾಳಂ ಕಡ್ಡಾಯ ಮಾಡಬಾರದು.

ಅಲ್ಪಸಂಖ್ಯಾತ ವಲಯಗಳಲ್ಲೂ ಮಲಯಾಳಂನಂತೆ ಕನ್ನಡ ಮತ್ತು ಮಲಯಾಳ  ಭಾಷೆಗಳನ್ನು ಬಳಸಬೇಕು. ಜೊತೆಗೆ  ಎಲ್ಲಾ ಸರಕಾರಿ  ಆದೇಶ ಮತ್ತು ಸುತ್ತೋಲೆಗಳನ್ನು ಕಡ್ಡಾಯವಾಗಿ  ಕನ್ನಡದಲ್ಲಿ ಪ್ರಕಟಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ 500 ಕ್ಕೂ ಅಧಿಕ ಮಾಡಿ ಪಾಲ್ಗೊಡಿದ್ದು, ಸರಕಾರಕ್ಕೆ  ನಿಯೋಗ  ಮನವಿ ಸಲ್ಲಿಸಿದರು.  

ಕಾಸರಗೋಡು ಸಮನ್ವಯ ಸಮಿತಿ ಅಧ್ಯಕ್ಷ ಪುರುಷೋತ್ತಮ ಮಾಸ್ಟರ್ , ಕೇರಳ ಭಾಷಾ ಅಲ್ಪಸಂಖ್ಯಾತ ಸಮಿತಿ ರಾಜ್ಯ ಅಧ್ಯಕ್ಷ ಮುರಳೀಧರ ಬಳ್ಳುಕ್ಕರಾಯ, ಪ್ರಶಾಂತ ಹೊಳ್ಳ, ರಕ್ಷಿತ್  ಪಾಟಾಳಿ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ  ಅಧ್ಯಾಪಕ ಸಂಘ, ಸ್ನೇಹರಂಗ ಹಾಗೂ ಕಾಸರಗೋಡಿನ ಕನ್ನಡ ಸಂಘ-ಸಂಸ್ಥೆ, ಸಂಘಟನೆ ಪ್ರತಿನಿಧಿಗಳು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News