ಮಂಗಳೂರಿನಲ್ಲಿ ಪ್ರಚೋದನಕಾರಿ ಭಾಷಣ ಮಾಡದ ಸುರೇಶ್ ಗೋಪಿ
ಕಣ್ಣೂರ್, ನ. 2: ಸುರೇಶ್‌ಗೋಪಿಯ ಮಂಗಳೂರು ಭಾಷಣದ ವಿರುದ್ಧ ಸಂಘಪರಿವಾರ ತೀವ್ರಅಸಮಾಧಾನಗೊಂಡಿದೆ ಎಂದು ಮೂಲಗಳು ತಿಳಿಸಿವೆ ಎಂದು ವೆಬ್‌ಪೋರ್ಟಲೊಂದು ವರದಿ ಮಾಡಿದೆ. ಕೇರಳದಲ್ಲಿ ಆರೆಸ್ಸೆಸ್ ಬಿಜೆಪಿ ಕಾರ್ಯಕರ್ತರ ವಿರುದ್ಧ ಸಿಪಿಐ(ಎಂ) ನಡೆಸುತ್ತಿರುವ ದಾಳಿಗಳ ವಿರುದ್ಧ ಮಂಗಳೂರು ಸಿಟಿಝನ್ಸ್ ಕೌನ್ಸಿಲ್( ಮಂಗಳೂರು ಪ್ರಜಾವೇದಿಕೆ) ನಡೆಸಿದ ಸಭೆಯನ್ನು ಉದ್ಘಾಟಿಸಿ ಸುರೇಶ್‌ಗೋಪಿ ಮಾಡಿದ ಭಾಷಣ ಅಸಮಾಧಾನಕ್ಕೆ ಕಾರಣವಾಗಿದೆ.
ಪಕ್ಷದ ಆಧಾರವನ್ನು ಹಿಡಿದುಕೊಂಡು ತೀವ್ರಸ್ವಭಾವ ಹೊಂದಿರುವ ಜನರು ಎರಡು ಪಕ್ಷಗಳಲಿದ್ದು, ಅಕ್ರಮ ನಡೆಸುತ್ತಿದ್ದಾರೆ. ಇವರನ್ನು ಗುರುತಿಸಿ ದೂರವಿಡಲು ಸಿಪಿಐಎಂ ಮತ್ತು ಆರೆಸ್ಸೆಸ್ ಮುಂದಾಗಬೇಕು ಎಂದು ಸುರೇಶ್ ಗೋಪಿ ಮಾತಾಡಿದ್ದರು.
ಮಾತ್ರವಲ್ಲ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರನ್ನು ಎತ್ತಿಹಿಡಿದು, ಕಾಂಗ್ರೆಸ್‌ನ್ನು ಶ್ಲಾಘಿಸಿದ ಸುರೇಶ್ ಗೊಪಿಯ ಮಾತುಗಳನ್ನು ಅಸಹನೆಯಿಂದಲೇ ಸಂಘಪರಿವಾರದ ಜನರು ಆಲಿಸಿದ್ದರು. ತನ್ನ ಪಕ್ಷದ ನೀತಿಯನ್ನೋ ಕಾರ್ಯಕ್ರಮದ ಹೆಚ್ಚುಗಾರಿಕೆಯನ್ನೋ ಸುರೇಶ್ ಗೋಪಿ ಪರಮರ್ಶಿಸಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್‌ನೊಂದಿಗೆ ಪೈಪೋಟಿ ನಡೆಸುತ್ತಿರುವ ಬಿಜೆಪಿಗೆ ಅನುಕೂಲಕರವಾಗಿ ಒಂದು ವಾರದ ಹಿಂದೆ ಬಿಜೆಪಿ ಸೇರಿದ ಸುರೇಶ್‌ಗೋಪಿ ಏನೂ ಹೇಳಲಿಲ್ಲ ಎಂಬ ಅಸಮಾಧಾನವೂ ನೆಲೆಸಿದೆ.
ಆಕ್ರಮಣಕಾರಿ ಮನೋಭಾವ ಇಲ್ಲದ ಪಾರ್ಟಿ ಕಾಂಗ್ರೆಸ್, ಎಡಪಕ್ಷಗಳಲ್ಲಿ ಅಕ್ರಮ ಸ್ವಭಾವ ಇಲ್ಲದ ಪಕ್ಷ ಸಿಪಿಐ ಆಗಿದೆ ಎಂದು ಸುರೇಶ್ ಗೋಪಿ ಹೇಳಿದ್ದರೆನ್ನಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೌರವಾನ್ವಿತ ವ್ಯಕ್ತಿ. ತಾನು ಸಂಪರ್ಕಿಸಿದಾಗಲೆಲ್ಲ ಗೌರವಪೂರ್ಣ ವ್ಯಕ್ತಿಯಾಗಿಯೇ ಕಂಡು ಬಂದಿದ್ದಾರೆ. ಕಣ್ಣೂರಿನ ಅಕ್ರಮಗಳಿಗೆ ಕೊನೆಹಾಡಲು ಅವರು ಕ್ರಿಯಾತ್ಮಕ ಕ್ರಮಕೈಗೊಳ್ಳುವರೆಂಬ ನಿರೀಕ್ಷೆ ತನಗಿದೆ ಎಂದು ಸುರೇಶ್ ಗೋಪಿ ಹೇಳಿದ್ದರು. ವಿರೋಧಿ ಪಕ್ಷಗಳ ವಿರುದ್ಧ ಶರಪ್ರಯೋಗವಾಗಿಲ್ಲ ಎಂದು ಬಿಜೆಪಿಗೂ ಹೇಳಲು ಸಾಧ್ಯವಿಲ್ಲ. ಎಲ್ಲರೂ ಇದನ್ನು ನಿಲ್ಲಿಸಬೇಕೆಂದು ಸುರೇಶ್ ಗೋಪಿ ಸಲಹೆನೀಡಿದ್ದರು.
ಸಿಪಿಐಎಂ ಆಕ್ರಮಣಗಳನ್ನು ರಾಷ್ಟ್ರಮಟ್ಟದಲ್ಲಿ ಎತ್ತಿತೋರಿಸಲು ಸಂಘಪರಿವಾರ ನೇತೃತ್ವದಲ್ಲಿ ಮಂಗಳೂರಿನ ಸಿಟಿಝನ್ಸ್ ಕೌನ್ಸಿಲ್ ಸಭೆ ಏರ್ಪಡಿಸಿತ್ತು. ಆದರೆ ಸಿಪಿಐಎಂ ಮತ್ತು ಅದರ ನಾಯಕರಾದ ಪಿಣರಾಯಿ, ಕೊಡಿಯೇರಿಗೆ ಬಿಳಿಬಣ್ಣ ಹಚ್ಚುವ ಕೆಲಸ ಸುರೇಶ್ ಗೊಪಿ ಮಾಡಿದ್ದಾರೆ. ಇದರಿಂದ ರಾಷ್ಟ್ರಮಟ್ಟದಲ್ಲಿ ಸಿಪಿಐಎಂ ದಾಳಿಯನ್ನು ಎತ್ತಿತೋರಿಸುವ ಸಂಘಪರಿವಾರದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಆಳುವವರೆಲ್ಲ ಕ್ರೂರಿಗಳು. ಘರ್ಷಣೆಗೆ ಕಾರ್ಯಕರ್ತರೇ ಜವಾಬ್ದಾರರು ಎಂದು ಸುರೇಶ್ ಗೋಪಿ ಹೇಳಿದ್ದಾರೆನ್ನಲಾಗಿದೆ.ಸುರೇಶ್ ಗೋಪಿ ಬಿಜೆಪಿ ಸೇರಿ ಕೆಲವೇ ದಿನಗಳಾಗಿವೆ ಅಷ್ಟೇ. ರಾಜಕೀಯ ದಾಳಿಗಳಿಗೆ ಸಿಪಿಐಎಂ ಮಾತ್ರ ಜವಾಬ್ದಾರಿಯಾಗಿದೆ. ಇದಕ್ಕೆ ತದ್ವಿರುದ್ಧವಾಗಿ ಯಾರಾದರೂ ಏನಾದರೂ ಹೇಳಿದರೆ ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಕಣ್ಣೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಪಿ. ಸತ್ಯಪ್ರಕಾಶ್ ಪ್ರತಿಕ್ರಿಯಿಸಿದ್ದಾರೆಂದು ವರದಿ ತಿಳಿಸಿದೆ.