ನ್ಯಾಯವಾದಿ ಮೋಹನನ್‌ಗೆ ಹೈಕೋರ್ಟು ಶಿಕ್ಷೆ
ಕೊಚ್ಚಿ,ನ. 2: ಮುಸ್ಲಿಮ್ ಯುವಕರ ವಿರುದ್ಧ ನಿರಂತರವಾಗಿ ಐಸಿಸ್‌ನೊಂದಿಗೆ ಸಂಬಂಧ, ಲವ್ ಜಿಹಾದ್ ಸುಳ್ಳು ಆರೋಪ ಹೊರಿಸಿ ದೂರು ನೀಡುತ್ತಿದ್ದ ವಕೀಲರೊಬ್ಬರನ್ನು ಹೈಕೋರ್ಟು ಶಿಕ್ಷಿಸಿದೆ ಎಂದು ವರದಿಯಾಗಿದೆ. ನಿರಂತರ ದೂರು ನೀಡುತ್ತಿರುವುದನ್ನು ಪ್ರಶ್ನಿಸಿದ ಜಡ್ಜ್‌ಗಳ ಮೇಲೆಯೇ ಕೋಪಗೊಳ್ಳುತ್ತಿದ್ದ ವಕೀಲ ಸಿಕೆ ಮೋಹನನ್ ಎಂಬವರಿಗೆ ಈ ವರ್ತನೆಗೆ ನ್ಯಾಯಾಧೀಶ ಪಿಎನ್ ರವೀಂದ್ರನ್ ಅಧ್ಯಕ್ಷತೆಯ ಹೈಕೋರ್ಟು ಪೀಠ ಮೂರು ತಿಂಗಳ ಜೈಲು ಶಿಕ್ಷೆಮತ್ತು 1000ರೂಪಾಯಿ ದಂಡವಿಧಿಸಿದೆ.
ಕೆಲವು ದಿನಗಳಿಂದ ಮುಸ್ಲಿಂ ಯುವಕರ ವಿರುದ್ಧ ಲೌಜಿಹಾದ್, ಐಸಿಸ್ ಸಂಬಂಧಗಳನ್ನು ಆರೋಪಿಸಿ ಹೈಕೋರ್ಟಿನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕುವುದನ್ನು ರವೀಂದ್ರನ್ ರೂಢಿಮಾಡಿಕೊಂಡಿದ್ದಾರೆ. ಇದನ್ನು ಗಮನಿಸಿದ ಕೋರ್ಟು ಮುಸ್ಲಿಮ್ ಯುವಕರ ವಿರುದ್ಧ ಪದೇಪದೇ ಸುಳ್ಳು ದೂರು ಹಾಕುವುದನ್ನು ನಿಲ್ಲಿಸಬೇಕೆಂದು ಹೇಳಿತ್ತು.
ಕೋರ್ಟುನಿಂದೆ ಕ್ರಮಜರಗಿಸದಿರಲು ಯಾವುದಾದರೂ ಕಾರಣವಿದ್ದರೆ ನೆರವಾಗಿ ತಿಳಿಸಬೇಕೆಂದು ಕೋರ್ಟು ರವೀಂದ್ರನ್‌ಗೆ ನೋಟಿಸು ಜಾರಿಗೊಳಿಸಿತ್ತು. ಆದರೆ ಅದನ್ನು ಅವರು ಪಡೆದುಕೊಂಡಿರಲಿಲ್ಲ. ಇದು ಹೈಕೋರ್ಟು ಅವರ ವಿರುದ್ಧ ಶಿಕ್ಷೆ ವಿಧಿಸಲು ಕಾರಣವಾಗಿದೆ. ಒಂದು ತಿಂಗಳೊಳಗೆ ಶಿಕ್ಷೆ ಜಾರಿಗೊಳಿಸಬೇಕೆಂದು ಸೂಚಿಸಿದ ಬಳಿಕ ಕೋರ್ಟು ಇವರಿಗೆ ಜಾಮೀನು ನೀಡಿದೆ ಎಂದು ವರದಿ ತಿಳಿಸಿದೆ.