×
Ad

ಶೀಘ್ರವೇ ಸಂಸದರ ವೇತನದಲ್ಲಿ ಭಾರೀ ಏರಿಕೆ!

Update: 2016-11-02 12:35 IST

ಹೊಸದಿಲ್ಲಿ, ನ.2: ಕೇಂದ್ರ ಸರಕಾರ ಸಂಸತ್ ಸದಸ್ಯರ ವೇತನದಲ್ಲಿ ಶೇ.100ರಷ್ಟು ಏರಿಕೆ ಮಾಡಲು ಯೋಜನೆ ರೂಪಿಸಿದ್ದು, ಸಂಸದರು ಇನ್ನು ಮುಂದೆ ತಿಂಗಳಿಗೆ 50,000 ರೂ ಬದಲಿಗೆ ಭರ್ತಿ 1 ಲಕ್ಷ ರೂ. ಮೂಲ ವೇತನ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಸತ್ ಸದಸ್ಯರ ವೇತನ ಹಾಗೂ ಭತ್ಯೆಗಳ ಬಗ್ಗೆ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯ ಜಂಟಿ ಸಮಿತಿ ಮಾಡಿರುವ ಶಿಫಾರಸುಗಳಿಗೆ ಪ್ರಧಾನಮಂತ್ರಿ ಕಚೇರಿ(ಪಿಎಂಒ) ಸಮ್ಮತಿ ನೀಡಿದೆ ಎಂದು ವರದಿಯಾಗಿದೆ.

 ಕೇಂದ್ರ ಸರಕಾರ ರಾಷ್ಟ್ರಪತಿ ವೇತನವನ್ನು ತಿಂಗಳಿಗೆ 1.5 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹಾಗೂ ರಾಜ್ಯಪಾಲರ ವೇತನವನ್ನು 1.10 ಲಕ್ಷ ರೂ.ನಿಂದ 2.5 ಲಕ್ಷ ರೂ.ಗೆ ಏರಿಕೆ ಮಾಡಲು ಯೋಜನೆ ಹಾಕಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News