×
Ad

ಕಣ್ಣೂರು:ಸಿಪಿಎಂ ಕಾರ್ಯಕರ್ತನ ಹತ್ಯೆ ಇನ್ನಿಬ್ಬರು ಆರೆಸ್ಸೆಸ್ ಕಾರ್ಯಕರ್ತರ ಸೆರೆ

Update: 2016-11-02 19:47 IST


ಕಣ್ಣೂರು,ನ.2: ಜಿಲ್ಲೆಯ ಕೂತುಪರಂಭ ಸಮೀಪದ ವಳಂಕಿಚ್ಚಲ್‌ನಲ್ಲಿ ನಡೆದಿದ್ದ ಸಿಪಿಎಂ ಕಾರ್ಯಕರ್ತ ಮೋಹನನ್ ಕೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರು ಆರೆಸ್ಸೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತ ಆರೆಸ್ಸೆಸ್ ಕಾರ್ಯಕರ್ತರ ಸಂಖ್ಯೆ ಐದಕ್ಕೇರಿದೆ.


ಕಣ್ಣೂರು ಜಿಲ್ಲೆಯ ಪದಿರಿಯಾಡ್ ನಿವಾಸಿಗಳಾದ ಸಯೂಜ್(23) ಮತ್ತು ರಾಹುಲ್(22) ಅವರು ಮಂಗಳವಾರ ವೆಂದುತ್ತಾಯಿ ಎಂಬಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದು, ಇವರಿಬ್ಬರೂ ಕೊಲೆಯಲ್ಲಿ ನೇರವಾಗಿ ಭಾಗಿಯಾಗಿದ್ದರೆನ್ನಲಾಗಿದೆ. ಅವರು ನೀಡಿದ ತಪ್ಪೊಪ್ಪಿಗೆ ಹೇಳಿಕೆಗಳ ಆಧಾರದಲ್ಲಿ ಕೊಲೆಗೆ ಬಳಸಲಾಗಿದ್ದ ತಲವಾರುಗಳು ಮತ್ತು ಕೆಲವು ಕಚ್ಚಾಬಾಂಬ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.


ಇದಕ್ಕೂ ಮುನ್ನ ಅ.14ರಂದು ಮೂವರು ಆರೆಸ್ಸೆಸ್ ಕಾರ್ಯಕರ್ತರನ್ನು ಬಂಧಿಸಲಾಗಿತ್ತು.
ಶೇಂದಿ ಅಂಗಡಿಯ ನೌಕರ ಹಾಗೂ ವಳಂಕಿಚ್ಚಲ್ ಸಿಪಿಎಂ ಶಾಖಾ ಕಾರ್ಯದರ್ಶಿ ಯಾಗಿದ್ದ ಮೋಹನನ್(50) ಅವರನ್ನು ದುಷ್ಕರ್ಮಿಗಳ ಗುಂಪು ಅ.10ರಂದು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News