×
Ad

ಅಮೆರಿಕ: ಇಬ್ಬರು ಪೊಲೀಸರ ಹತ್ಯೆ

Update: 2016-11-02 21:12 IST

ಡೆಸ್ ಮೊಯಿನ್ಸ್ (ಅಮೆರಿಕ), ನ. 2: ಅಮೆರಿಕದ ಅಯೋವ ರಾಜ್ಯದ ಡೆಸ್ ಮೊಯಿನ್ಸ್ ನಗರದಲ್ಲಿ ದುಷ್ಕರ್ಮಿಗಳು ಹೊಂಚು ದಾಳಿ ನಡೆಸಿ ಇಬ್ಬರು ಪೊಲೀಸರನ್ನು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದರು.


ಬುಧವಾರ ಮುಂಜಾನೆ ಘಟನೆ ಸಂಭವಿಸಿದೆ ಎಂದು ಪತ್ರಿಕಾ ಹೇಳಿಕೆಯೊಂದರಲ್ಲಿ ಡೆಸ್ ಮೊಯಿನ್ಸ್ ಪೊಲೀಸ್ ಇಲಾಖೆ ತಿಳಿಸಿದೆ.
 ಮುಂಜಾನೆ 1:06ರ ವೇಳೆ ಗುಂಡಿನ ದಾಳಿ ನಡೆದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿದಾಗ ಅರ್ಬನ್‌ಡೇಲ್ ಪೊಲೀಸ್ ಇಲಾಖೆಯ ಇಬ್ಬರು ಅಧಿಕಾರಿಗಳು ಸತ್ತು ಬಿದ್ದಿರುವುದನ್ನು ಕಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News