ಪ್ರಜಾಪ್ರಭುತ್ವದ ಭವಿಷ್ಯ ಮತದಾರರ ಕೈಯಲ್ಲಿ: ಒಬಾಮ

Update: 2016-11-03 15:59 GMT

ವಾಶಿಂಗ್ಟನ್, ನ. 3: ಅಮೆರಿಕದ ಪ್ರಜಾಪ್ರಭುತ್ವದ ಭವಿಷ್ಯ ಮತದಾರರ ಕೈಯಲ್ಲಿದೆ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಬುಧವಾರ ಎಚ್ಚರಿಸಿದ್ದಾರೆ.
ತನ್ನ ಬೇಜವಾಬ್ದಾರಿಯುತ ಹಾಗೂ ಸಿನಿಕತನದ ಮಾತುಗಳಿಂದ ಜಗತ್ತಿನ ಗಮನ ಸೆಳೆದಿರುವ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅಮೆರಿಕದ ಶತ್ರು ದೇಶಗಳಿಗೆ ಖುಷಿ ತಂದರೆ, ಮಿತ್ರ ದೇಶಗಳ ಆತಂಕಕ್ಕೆ ಕಾರಣವಾಗಿದ್ದಾರೆ.

 ‘‘ಜಗತ್ತಿನ ಭವಿಷ್ಯ ತೂಗುಯ್ಯಿಲೆಯಲ್ಲಿದೆ. ನಾವು ಸರಿಯಾದ ದಾರಿಯಲ್ಲಿ ಸಾಗುವಂತೆ ನಾರ್ತ್ ಕ್ಯಾರಲೈನದ ಜನತೆಯಾದ ನೀವು ಖಾತರಿಪಡಿಸಬೇಕು’’ ಎಂದು ನಾರ್ತ್ ಕ್ಯಾರಲೈನದಲ್ಲಿ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಮಾತನಾಡಿದ ಒಬಾಮ ಹೇಳಿದರು.
ತನ್ನ ಉತ್ತರಾಧಿಕಾರಿಯಾಗಿ ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್‌ಗೆ ಮತ ಹಾಕಬೇಕು ಎಂದು ಅವರು ಜನರಿಗೆ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News