ಪ್ಯಾರಿಸ್ ಮಾಸ್ಟರ್ಸ್‌: ಮರ್ರೆ, ಜೊಕೊವಿಕ್ ಅಂತಿಮ-16ಕ್ಕೆ ಲಗ್ಗೆ

Update: 2016-11-03 18:04 GMT

ಪ್ಯಾರಿಸ್, ನ.3: ಆ್ಯಂಡಿ ಮರ್ರೆ ಹಾಗೂ ನೊವಾಕ್ ಜೊಕೊವಿಕ್ ಇಲ್ಲಿ ನಡೆಯುತ್ತಿರುವ ಪ್ಯಾರಿಸ್ ಮಾಸ್ಟರ್ಸ್‌ ಟೆನಿಸ್ ಟೂರ್ನಿಯಲ್ಲಿ ಅಂತಿಮ 16ರ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಬುಧವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಬ್ರಿಟನ್‌ನ ಮರ್ರೆ ಫೆರ್ನಾಂಡೊ ವೆರ್ಡಾಸ್ಕೊರನ್ನು 6-3,6-7(5/7), 7-5 ಸೆಟ್‌ಗಳ ಅಂತರದಿಂದ ಮಣಿಸಿದರು.

ಬೀಜಿಂಗ್, ಶಾಂೈ ಹಾಗೂ ವಿಯೆನ್ನಾ ಮಾಸ್ಟರ್ಸ್ ಪ್ರಶಸ್ತಿ ವಿಜೇತ ಮರ್ರೆ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಲುಕಾಸ್ ಪೌಲಿ ಅವರನ್ನು ಎದುರಿಸಲಿದ್ದಾರೆ.

ನಾಲ್ಕು ಬಾರಿಯ ಚಾಂಪಿಯನ್ ಜೊಕೊವಿಕ್ ಲಕ್ಸಂಬರ್ಗ್‌ನ ಗಿಲ್ಲೆಸ್ ಮುಲ್ಲರ್‌ರನ್ನು 6-3, 6-4 ನೇರ ಸೆಟ್‌ಗಳಿಂದ ಮಣಿಸಿ ಮೂರನೆ ಸುತ್ತು ಪ್ರವೇಶಿಸಿದರು.

ವಾವ್ರಿಂಕಗೆ ಸೋಲು: ಯುಎಸ್ ಓಪನ್ ಚಾಂಪಿಯನ್ ಸ್ಟಾನ್ ವಾವ್ರಿಂಕ ಜರ್ಮನಿಯ ಕ್ವಾಲಿಫೈಯರ್ ಜಾನ್-ಲೆನಾರ್ಡ್ ಸ್ಟ್ರಫ್ ವಿರುದ್ಧ 3-6, 7-6(8/6), 7-6(7/1) ಸೆಟ್‌ಗಳ ಅಂತರದಿಂದ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News