×
Ad

ಲಂಕಾ ಸಂಗೀತ ದಂತಕತೆ ಪಂಡಿತ್ ಅಮರದೇವ ನಿಧನ

Update: 2016-11-04 00:01 IST

ಕೊಲಂಬೊ, ನ. 3: ಶ್ರೀಲಂಕಾದ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಪಂಡಿತ್ ಅಮರದೇವ ಇಂದು ಹೃದಯಾಘಾತದಿಂದ ನಿಧನರಾದರು. ಭಾರತದ ಪದ್ಮಶ್ರೀ ಸೇರಿದಂತೆ ಅವರು ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದರು.
ಅಸ್ವಸ್ಥಗೊಂಡ 88 ವರ್ಷದ ಅಮರದೇವರನ್ನು ಇಲ್ಲಿನ ಶ್ರೀ ಜಯವರ್ದನಪುರ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ‘ಕೊಲಂಬೊಪೇಜ್’ ವರದಿ ಮಾಡಿದೆ.
ಅವರು ಭಾರತೀಯ ಶಾಸ್ತ್ರೀಯ ರಾಗಗಳು ಹಾಗೂ ಶ್ರೀಲಂಕಾದ ಶ್ರೀಮಂತ ಜನಪದ ಸಂಗೀತ ಪರಂಪರೆಗಳಿಂದ ಸ್ಫೂರ್ತಿ ಪಡೆದಿದ್ದರು.
ಸಿಂಹಳ ಸಂಗೀತಕ್ಕೆ ಅವರು ನೀಡಿರುವ ದೇಣಿಗೆ ಅಪ್ರತಿಮ ಎಂಬುದಾಗಿ ಪರಿಗಣಿಸಲಾಗಿದೆ.
ಫಿಲಿಪ್ಪೀನ್ಸ್‌ನ ರಾಮೊನ್ ಮ್ಯಾಗ್ಸೇಸೆ ಪ್ರಶಸ್ತಿ (2001), ಪದ್ಮಶ್ರೀ ಪ್ರಶಸ್ತಿ (2002), ಶ್ರೀಲಂಕಾದ ಅಧ್ಯಕ್ಷರ ಕಲಾ ಕೀರ್ತಿ ಪ್ರಶಸ್ತಿ (1986) ಮತ್ತು ದೇಶಮಾನ್ಯ ಪ್ರಶಸ್ತಿ (1998)ಗಳು ಅವರನ್ನು ಹುಡುಕಿಕೊಂಡು ಬಂದಿದ್ದವು.
1111111111

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News