ಪ್ರಧಾನಿ ಮೋದಿಗೆ ಇಂಡಿಯನ್ ಎಕ್ಸ್‌ಪ್ರೆಸ್ ಸಂಪಾದಕ ನೀಡಿದ ಪತ್ರಿಕೋದ್ಯಮದ ಪಾಠ ಏನು?
ಇಂಡಿಯನ್ ಎಕ್ಸ್‌ಪ್ರೆಸ್ ದಿನಪತ್ರಿಕೆಯ ತಮ್ಮ ಸಂಸ್ಥಾಪಕರ ಗೌರವಾರ್ಥ ರಾಮನಾಥ್ ಗೋಯೆಂಕಾ ಎಕ್ಸಲೆನ್ಸ್ ಇನ್ ಜರ್ನಲಿಸಂ ಪ್ರಶಸ್ತಿಯನ್ನು ಪತ್ರಿಕೋದ್ಯಮದಲ್ಲಿ ಉತ್ತಮ ಪ್ರತಿಭೆ ತೋರಿಸಿದ ಪತ್ರಕರ್ತರಿಗೆ 28 ವಿಭಾಗಗಳಲ್ಲಿ ಕೊಡುತ್ತದೆ. ಇಂಗ್ಲಿಷ್, ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳಿಗೆ ಪ್ರತ್ಯೇಕವಾದ ಪ್ರಶಸ್ತಿಗಳಿವೆ. ಆದರೆ ಈ ವರ್ಷ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಮುಖ್ಯ ಅತಿಥಿಯಾಗಿ ಕರೆಯಲು ಮ್ಯಾನೇಜ್ಮೆಂಟ್ ನಿರ್ಧರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.
ಈ ಪ್ರಶಸ್ತಿ ಪಡೆದ ಟೈಮ್ಸ್ ಆಫ್ ಇಂಡಿಯಾದ ಹಿರಿಯ ಪತ್ರಕರ್ತ ಅಕ್ಷಯ ಮುಖುಲ್ ಮೋದಿ ಅವರಿಂದ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ್ದಾರೆ. "ಮೋದಿ ಮತ್ತು ನಾನು ಒಂದೇ ಫೋಟೋದ ಒಳಗೆ ಕ್ಯಾಮರಾಗೆ ನಗು ಬೀರುತ್ತಾ ಪ್ರಶಸ್ತಿ ಪಡೆಯುವುದನ್ನು ನಾನು ಊಹಿಸಲು ಸಾಧ್ಯವಿಲ್ಲ" ಎಂದು ಅಕ್ಷಯ್ ಮುಖುಲ್ ಹೇಳಿದ್ದಾರೆ. ಪ್ರಶಸ್ತಿ ಸಮಾರಂಭದಲ್ಲಿ ಮೋದಿ ಭಾರತೀಯ ಪತ್ರಿಕೋದ್ಯಮಕ್ಕೆ ಇಂಡಿಯನ್ ಎಕ್ಸ್‌ಪ್ರೆಸ್ ಕೊಡುಗೆಯನ್ನ ಮತ್ತು ಹೇಗೆ ರಾಮನಾಥ್ ಗೋಯೆಂಕಾ 1970ರಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭ ದಿಟ್ಟ ಧ್ವನಿಯಾಗಿದ್ದರು ಎಂದು ಪ್ರಶಂಸಿಸಿದ್ದಾರೆ.
ಆದರೆ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡುವ ಪ್ರಸಂಗ ಬಂದಾಗ ಪತ್ರಿಕೆಯ ಮುಖ್ಯ ಸಂಪಾದಕ ರಾಜ್ ಕಮಲ್ ಝಾ ಉತ್ತಮ ಪತ್ರಿಕೋದ್ಯಮದ ಬಗ್ಗೆ ಐದು ವಾಕ್ಯಗಳಲ್ಲಿ ಮೋದಿಗೆ ಪಾಠ ಹೇಳಿದರು.
1. "ನೀವು ಬಹಳಷ್ಟು ಉತ್ತಮ ವಿಷಯಗಳನ್ನು ಪತ್ರಕರ್ತರ ಬಗ್ಗೆ ಹೇಳುವಾಗ ನಮಗೆ ಆತಂಕವಾಗುತ್ತದೆ. ನಿಮ್ಮ ಪತ್ರಕರ್ತ ತುಂಬಾ ಒಳ್ಳೆಯವನು ಎಂದು ಮುಖ್ಯಮಂತ್ರಿಯಿಂದ ಹೊಗಳಿಸಿಕೊಂಡಿದ್ದ ಪತ್ರಕರ್ತರನ್ನು ರಾಮನಾಥ ಗೋಯೆಂಕಾ ಕೆಲಸದಿಂದ ತೆಗೆದು ಹಾಕಿದ್ದರು".
2." ಈಗಿನ ಸೆಲ್ಫೀ ಪತ್ರಿಕೋದ್ಯಮದಲ್ಲಿ ನಿಮ್ಮ ಬಳಿ ವಾಸ್ತವಾಂಶಗಳು ಇಲ್ಲದಿದ್ದಲ್ಲಿ, ಅಷ್ಟೇನೂ ಸಮಸ್ಯೆಯಿಲ್ಲ. ಫ್ರೇಮ್ ನಲ್ಲಿ ಒಂದು ರಾಷ್ಟ್ರ ಧ್ವಜ ಹಾಕಿಕೊಂಡು ಅದರ ಹಿಂದೆ ಅಡಗಿಕೊಂಡರೆ ಮುಗಿಯಿತು".
3. "ಉತ್ತಮ ಪತ್ರಿಕೋದ್ಯಮವೆನ್ನುವುದು ವರದಿ ಮಾಡುವ ವರದಿಗಾರ ಮತ್ತು ಸಂಪಾದಿಸುವ ಸಂಪಾದಕರ ಕೆಲಸದಿಂದ ನಿರ್ಧಾರವಾಗುತ್ತದೆಯೇ ವಿನಾ, ಸೆಲ್ಫೀ ಪತ್ರಕರ್ತರಿಂದಲ್ಲ".
4. "ಸರಕಾರದಿಂದ ಟೀಕೆ ಎದುರಿಸುವುದು ಪತ್ರಕರ್ತರಿಗೆ ಗೌರವದ ಬ್ಯಾಡ್ಜ್ (ಗುರುತು) ಆಗಿರುತ್ತದೆ".
5. "ಉತ್ತಮ ಪತ್ರಿಕೋದ್ಯಮ ಸಾಯುತ್ತಿದೆ ಎಂದೇನಲ್ಲ. ಕೆಟ್ಟ ಪತ್ರಿಕೋದ್ಯಮ ಬಹಳಷ್ಟು ಸದ್ದು ಮಾಡುತ್ತಿದೆ ಅಷ್ಟೇ.
ಸ್ಪಷ್ಟವಾಗಿ ಮೋದಿ ಈ ಯಥೇಚ್ಛವಾಗಿ ಪಾಠವನ್ನು ಮನನ ಮಾಡಿಕೊಂಡಿದ್ದಾರೆ ಎಂದೇನಲ್ಲ".
ಕೃಪೆ: scoopwhoop.com