×
Ad

ಎಟಿಎಂ ಬಳಸುವಾಗ ಎಚ್ಚರಿಕೆ : ಈ ತಂತ್ರಗಳಿಂದ ನಿಮ್ಮನ್ನು ವಂಚಿಸುತ್ತಾರೆ!

Update: 2016-11-04 17:00 IST

ಭಾರತ ಇತ್ತೀಚೆಗೆ ಬ್ಯಾಂಕಿಂಗ್ ಇತಿಹಾಸದಲ್ಲೇ ಅತೀ ದೊಡ್ಡ ಹಣಕಾಸು ಮಾಹಿತಿ ಸೋರಿಕೆಯನ್ನು ಎದುರಿಸಿದೆ. ದೇಶದಾದ್ಯಂತ 19 ಬ್ಯಾಂಕ್ ಗಳ ಸುಮಾರು 32 ಲಕ್ಷ ಡೆಬಿಟ್ ಕಾರ್ಡುಗಳು ಹ್ಯಾಕ್ ಆಗಿವೆ. ದೇಶದ ದೊಡ್ಡ ಬ್ಯಾಂಕ್ ಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೆಸ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಇತ್ತು ಇತರ ಬ್ಯಾಂಕುಗಳ ಗ್ರಾಹಕರಿಗೆ ತೊಂದರೆಯಾಗಿದೆ. ಇದು ಮಾಲ್ವರೆ ಮೂಲಕದ ಹ್ಯಾಕಿಂಗ್ ಆಗಿದ್ದರೆ, ಹಲವು ಇತರ ಟ್ರಾಪ್‌ಗಳು ಎಟಿಎಂ ಮೂಲಕವೂ ಬ್ಯಾಂಕ್ ಗ್ರಾಹಕರಿಗೆ ಮಾಡಿವೆ.

ಮಾಹಿತಿ ಕದಿಯಲು ಸಾಧನ

ಕಾರ್ಡ್ ರೀಡರ್ ಸ್ಲಾಟ್‌ನಲ್ಲಿ ಕಾರ್ಡಿನ ಮ್ಯಾಗ್ನೆಟಿಕ್ ಸ್ಟ್ರಿಪ್ ನಿಂದ ಮಾಹಿತಿ ಕದಿಯಲು ಅಥವಾ ಕಾರ್ಡನ್ನೇ ಕದಿಯಲು ಸಾಧನವೊಂದ್ನು ಇಡಲಾಗಿದೆ.

ಕಾರ್ಡ್ ಜಾಗ ಸ್ವಲ್ಪ ದಪ್ಪನಾಗಿದೆ ಅಥವಾ ಸರಿಯಾಗಿ ಅಲೈನ್ ಆಗಿಲ್ಲ ಎಂದು ನಿಮಗೆ ಅನಿಸಿದರೆ ಎಚ್ಚರವಾಗಿರಿ. ಅಲ್ಲಿ ಹೆಚ್ಚುವರಿ ಕಾರ್ಡ್ ರೀಡರ್ ಸ್ಲಾಟ್ ಇರುವ ಸಾಧ್ಯತೆಯಿದೆ.

ತಪ್ಪು ಕೀಬೋರ್ಡ್

ನಿಜವಾದ ಕೀಬೋರ್ಡ್ ಮೇಲೆ ಇದನ್ನು ಇಡಲಾಗುತ್ತದೆ. ಕೀಪ್ಯಾಡ್ ಸ್ಪಾಂಜ್ ತರವಿದ್ದು ಜಾರುತ್ತಿದ್ದಲ್ಲಿ ಪಿನ್ ಹಾಕಬೇಡಿ.

ಎಟಿಎಂ ಹ್ಯಾಕ್

ಸ್ಲಾಟ್ ಸ್ವಲ್ಪ ಸಡಿಲವಾದಲ್ಲಿ ಅಲ್ಲಿ ಲೆಬನೀಸ್ ಲೂಪ್ ಇರುವ ಸಾಧ್ಯತೆಯಿದೆ. ಅದು ಸಣ್ಣ ಪ್ಲಾಸ್ಟಿಕ್ ಸಾಧನವಾಗಿದ್ದು, ನಿಮ್ಮ ಕಾರ್ಡನ್ನು ಯಂತ್ರಕ್ಕೆ ಮರಳಿ ನಿಲ್ಲಿಸುತ್ತದೆ. ಯಂತ್ರ ನಿಮ್ಮ ಕಾರ್ಡನ್ನು ನುಂಗಿದೆ ಎಂದು ನೀವು ಅಂದುಕೊಂಡುಬಿಡುತ್ತೀರಿ.

ನಕಲಿ ಯಂತ್ರಗಳು

ನಕಲಿ ಯಂತ್ರಗಳನ್ನು ಪತ್ತೆ ಹಚ್ಚುವುದು ಕಷ್ಟ. ಮೂಲ ಯಂತ್ರದಂತಹುದೇ ನಕಲಿ ಮುಂಭಾಗ ಇರುತ್ತದೆ. ಏಕೆಂದರೆ ಅದನ್ನು ಮೂಲ ಯಂತ್ರದ ಮೇಲೆ ಇಟ್ಟಿರಲಾಗುತ್ತದೆ. ಇದು ವಂಚಕರು ನಿಮ್ಮ ಪಿನ್ ಮತ್ತು ಹಣ ಎರಡನ್ನೂ ನುಂಗಲು ನೆರವಾಗುತ್ತದೆ.

ಪಿನ್‌ಹೋಲ್ ಕ್ಯಾಮರಾಗಳು                      

ಸಣ್ಣ ಪಿನ್‌ಹೋಲ್ ಕ್ಯಾಮರಾಗಳನ್ನು ಯಂತ್ರದ ಮೇಲೆ ಅಥವಾ ಮಹಡಿಯಲ್ಲಿ ಇಡಲಾಗುತ್ತದೆ. ನಿಮ್ಮ ಪಿನ್ ವಶಕ್ಕೆ ತೆಗೆದುಕೊಳ್ಳಲು ಇದರಲ್ಲಿ ವ್ಯವಸ್ಥೆ ಮಾಡಲಾಗಿರುತ್ತದೆ.

ಕೃಪೆ: economictimes.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News