×
Ad

‘ಅಫ್ಘಾನ್ ಮೊನಲಿಸಾ’ಗೆ ಪಾಕಿಸ್ತಾನದಿಂದ ಗಡಿಪಾರು ಆದೇಶ

Update: 2016-11-05 11:09 IST

ಇಸ್ಲಾಮಾಬಾದ್, ನ. 5: ನಕಲಿ ಗುರುತು ಚೀಟಿ ಹೊಂದಿದ್ದಕ್ಕಾಗಿ ಬಂಧಿಸಲಾದ ಶರ್ಬತ್‌ಗುಲಾರನ್ನು(ಅಫ್ಘಾನಿಸ್ತಾನದ ಮೊನಲಿಸಾ) ಪಾಕಿಸ್ತಾನದಿಂದ ಗಡಿಪಾರು ಮಾಡಲು ಪೇಶಾವರ ಕೋರ್ಟು ಆದೇಶಿಸಿದೆ. ಅಕ್ಟೋಬರ್ 26ಕ್ಕೆ ಶರ್ಬತ್‌ಗುಲಾರನ್ನು ಪೇಶಾವರದ ಮನೆಯಿಂದ ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಟಿವ್ ಏಜೆನ್ಸಿ ಬಂಧಿಸಿತ್ತು. ಶರ್ಬತ್‌ಗುಲಾ ಕೋರ್ಟಿನಲ್ಲಿ ತಪ್ಪೊಪ್ಪಿಕೊಂಡಿದ್ದಾರೆ.

ವಿಧವೆಯಾದ ಶರ್ಬತ್ ಗುಲಾ ರೋಗಿಯಾಗಿದ್ದಾರೆ. ಕುಟುಂಬದ ಪೋಷಕಿಕೂಡಾ ಆಗಿದ್ದಾರೆ ಎಂದು ಗುಲಾರ ವಕೀಲರು ಕೋರ್ಟಿಗೆ ತಿಳಿಸಿದ್ದಾರೆ. ಹತ್ತುದಿವಸಗಳಿಂದ ಜೈಲಿನಲ್ಲಿರುವ ಮಹಿಳೆಗೆ ರಿಮಾಂಡ್ ಅವಧಿಮುಗಿಯಲು ಇನ್ನೂ ಐದು ದಿವಸಗಳು ಬಾಕಿಯಿವೆ. ಅದು ಪೂರ್ತಿಯಾದೊಡನೆ ಪಾಕಿಸ್ತಾನದಿಂದ ಗಡೀಪಾರು ಗೊಳಿಸಬೇಕೆಂದು ಕೋರ್ಟು ಆದೇಶ ನೀಡಿದೆ ಎಂದು ವರದಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News