×
Ad

ದುಬೈನಲ್ಲಿ ಅತ್ಯುತ್ತಮ ನಲ್ಲಿ ನಿಹಾರಿ ಎಲ್ಲಿ ಸಿಗುತ್ತದೆ ನೋಡಿ

Update: 2016-11-05 23:30 IST

ದುಬೈನ ಆಹಾರ ಪ್ರಿಯರು ಬಹಳ ಅದೃಷ್ಟವಂತರು. ಅವರಿಗೆ ಜಗತ್ತಿನ ಮೂಲೆ ಮೂಲೆಗಳ ಎಲ್ಲಾ ರೀತಿಯ ರುಚಿಯನ್ನೂ ಸವಿಯುವ ಅವಕಾಶವಿದೆ. ದೇಶಿ ಆಹಾರ ಪ್ರಿಯರು ಪಾರಂಪರಿಕ ಆಹಾರವನ್ನು ಸೇವಿಸಬೇಕೆಂದಿದ್ದರೆ 18ನೇ ಶತಮಾನದ ಕ್ಲಾಸಿಕ್, ನಿಹಾರಿ ಹೀಗೆ ಬಹಳಷ್ಟು ಅವಕಾಶಗಳಿವೆ. ಹೊಸದಿಲ್ಲಿ ಮತ್ತು ಲಾಹೋರ್‌ನ ಮೂಲ ಆಹಾರಕ್ಕಿಂತ ರುಚಿಕರವಾದದ್ದು ನಿಮಗೆ ದುಬೈನಲ್ಲಿ ಸಿಗುತ್ತದೆ!

ನಿಹಾರಿ ಎಂದರೆ ಅರೆಬಿಕ್ ಶಬ್ದ ನಹಾರ್‌ನಿಂದ ಬಂದಿರುವುದು. ನಹಾರ್ ಎಂದರೆ ಬೆಳಗು ಎಂದರ್ಥ. ಬೀಫ್ ಅಥವಾ ಚಿಕನ್‌ನಿಂದ ತಯಾರಾಗುವ ನಿಹಾರಿ, ನಲ್ಲಿ ನಿಹಾರಿ ಮತ್ತು ಮಗಾಜ್ ನಿಹಾರಿಯೂ ಆಗಬಹುದು.ಭಾರತೀಯರು ಮತ್ತು ಪಾಕಿಸ್ತಾನಿಯರಿಗೆ ನಿಹಾರಿ ಆಹಾರ ಬಹಳ ಇಷ್ಟ. ನಿಹಾರಿ ತಯಾರಿಸುವ ಜಾಗಗಳು ಕೆಲವು ಅತ್ಯುತ್ತಮ ಬಿರಿಯಾನಿ, ಕಬಾಬ್ ಮತ್ತು ದಲೀಮ್‌ಗಳನ್ನೂ ತಯಾರಿಸುತ್ತವೆ. ನಿಮಗೆ ದುಬೈನಲ್ಲಿ ಅತ್ಯುತ್ತಮ ನಿಹಾರಿಯ ಹುಡುಕಾಟವಿದ್ದರೆ ಕೆಲವು ರುಚಿಕರ ತಾಣಗಳಿಗೆ ಹೋಗಬಹುದು.

ಕಳೆದ ಮೂರು ದಶಕಗಳಲ್ಲಿ ಡೈರಾದ ನೈಫ್ ರಸ್ತೆಯಲ್ಲಿರುವ ದಿಲ್ಲಿ ರೆಸ್ಟೊರೆಂಟ್ ನಗರದ ಅತ್ಯುತ್ತಮ ನಿಹಾರಿ ರುಚಿ ತೋರಿಸಿದೆ. ಈ ಸ್ಥಳದಲ್ಲಿ ಕೂರಲೂ ಜಾಗವಿಲ್ಲದಷ್ಟು ಉದ್ದದ ಸರತಿ ಸಾಲು ಇರುತ್ತದೆ. ಆದರೆ ಕಾಯುವಿಕೆಗೆ ತಕ್ಕ ಆಹಾರವಂತೂ ಸಿಕ್ಕೇ ಸಿಗುತ್ತದೆ.

ಇಲ್ಲಿ ಸರತಿ ಸಾಲು ದೊಡ್ಡದಿದೆ ಎಂದು ಅನಿಸಿದರೆ ಔದ್ ಮೆಹ್ತಾದ ಸುಲ್ತಾನ್ ಬ್ಯುಸಿನೆಸ್ ಕೇಂದ್ರದ ಬಿ ಆ್ಯಂಡ್ ಬಿ ಕ್ರಿಕೆಟ್ ಬಾರ್‌ಗೆ ಹೋಗಿ. ಇದು ಅಧಿಕೃತ ನಿಹಾರಿ ಭೋಜನ ಸಿಗುವ ಮತ್ತೊಂದು ಅತ್ಯುತ್ತಮ ಸ್ಥಳ. ಲಾಮ್ಸಿ ಪ್ಲಾಜಾದ ಬಳಿ ಇರುವ ಜನರು ಇಲ್ಲಿಗೆ ಸದಾ ಎಡತಾಕುತ್ತಾರೆ.

ಅಲ್ ಕರಮ ಮತ್ತು ಅಲ್ ಕ್ಯುಸಾಸಿಸ್‌ನ ಡೈಲಿ ರೆಸ್ಟೊರೆಂಟ್ ಕೂಡ ನಿಹಾರಿ ಮತ್ತು ಗ್ರಿಲ್‌ಗೆ ಪ್ರಸಿದ್ಧ. ಈ ಸ್ಥಳಗಳಿಗೆ ಜಾಹೀರಾತಿನ ಅಗತ್ಯವಿಲ್ಲ. ಪ್ರತೀ ಆಹಾರ ಪ್ರಿಯರೂ ಈ ವಜ್ರಗಳನ್ನು ಹುಡುಕುತ್ತಾ ಬರುತ್ತಾರೆ. ಡೈಲಿ ರೆಸ್ಟೊರೆಂಟ್‌ನಲ್ಲಿ ನಿಹಾರಿಯನ್ನು ಕ್ಯಾಂಡಿಮೆಂಟ್ಸ್ ಮತ್ತು ಖಾಮೀರ್ ರೋಟಿ ಜೊತೆಗೆ ಕೊಡುತ್ತಾರೆ. ದಿಲ್ಲಿ ನಿಹಾರಿ, ಬಾರ್ಬೆಕ್ ಡಿಲೈಟ್, ಲಾಲ್ ಖಿಲಾ, ನಯಾಬ್ ಹಂಡಿ ಮತ್ತು ರವಿ ರೆಸ್ಟೊರೆಂಟ್‌ಗಳು ದುಬೈಯ ನಿಹಾರಿ ಅಭಿಮಾನಿಗಳ ಆಕರ್ಷಕ ತಾಣಗಳು.

ಏನೇನು ಇರುತ್ತವೆ?

ಪರಿಪೂರ್ಣ ನಿಹಾರಿಯಲ್ಲಿ ಬೀಫ್‌ನ (ಅಥವಾ ಮಟನ್ ಅಥವಾ ಚಿಕನ್) ಅತ್ಯುತ್ತಮ ತುಂಡು ಇರಬೇಕು. ಇದನ್ನು ಲಿಂಬೆ, ಕೊತ್ತಂಬರಿ, ಸಣ್ಣದಾಗಿ ಕತ್ತರಿಸಿದ ಶುಂಠಿ ಮತ್ತು ಹಸಿಮೆಣಸಿನಕಾಯಿ ಜೊತೆಗೆ ಕೊಡಲಾಗುತ್ತದೆ. ನಿಹಾರಿಯನ್ನು ಖಾಮೀರ್ ರೋಟಿ ಜೊತೆಗೆ ಬಯಸುವವರೇ ಹೆಚ್ಚು. ನಲ್ಲಿ ನಿಹಾರಿ ಮತ್ತು ಮಗಜ್ ನಿಹಾರಿ ಹೆಚ್ಚು ಜನಪ್ರಿಯ. ನಿಹಾರಿಯ ದಿಲ್ಲಿ ರೆಸ್ಟೊರೆಂಟ್‌ನಲ್ಲಿ ನಿಹಾರಿ 17 ದಿನಾರ್, ಮಗಾಜ್ 24 ದಿನಾರ್, ಜಬಾನ್ ನಿಹಾರಿ 24 ದಿನಾರ್‌ಗೆ ಸಿಗುತ್ತದೆ. ನಿತ್ಯದ ರೆಸ್ಟೊರಂಟ್‌ಗಳಲ್ಲಿ ಸಾದಿ ನಿಹಾರಿ 18 ದಿನಾರ್, ಮಗಾಜ್ ನಿಹಾರಿ 23 ದಿನಾರ್ ಮತ್ತು ಜಬಾನ್ ನಿಹಾರಿ 24 ದಿನಾರ್‌ಗೆ ಸಿಗುತ್ತದೆ.

ಅಡುಗೆ ವಿವರ

ಮಾಂಸವನ್ನು ಶೈತ್ಯ ತೆಗೆಯುವ ಅತೀ ವೇಗದ ವಿಧಾನ ಅದನ್ನು ಟ್ಯಾಪ್ ಅಡಿಯಲ್ಲಿಡುವುದು. ಆದರೆ ನೀರು ನಷ್ಟ ಮಾಡುವ ಬದಲು ಮಾಂಸವನ್ನು ಅಲ್ಯುಮಿನಿಯಂ ಶೀಟಲ್ಲಿಡಿ. ಬಿಸಿಯನ್ನು ನಿವಾರಿಸುವ ಅಲ್ಯುಮಿನಿಯಂ ಸುತ್ತಲಿನ ಪರಿಸರದಿಂದ ಶಕ್ತಿಯನ್ನು ಸೆಳೆಯುತ್ತದೆ. ನಂತರ ಶೀಟನ್ನು ನವೀಕರಿಸಿ ಬಳಸಬಹುದು.

ಕೃಪೆ:khaleejtimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News