ಆಸ್ಪತ್ರೆಯ ಶೌಚಾಲಯದಲ್ಲಿ ಮಗುವಿಗೆ ಜನ್ಮವಿತ್ತು ಗೆಳೆಯನ ಬೈಕನ್ನೇರಿ ಪರಾರಿಯಾದ ಯುವತಿ !

Update: 2016-11-05 11:46 GMT

ಭಿತರ್‌ವಾರ್, ನ.5: ಮಧ್ಯಪ್ರದೇಶದಲ್ಲಿ ಮಾನವೀಯತೆಯನ್ನು ಚಕಿತಗೊಳಿಸುವಂತಹ ಘಟನೆಯೊಂದು ನಡೆದಿದ್ದು, ಅಲ್ಲಿನ ಸಮುದಾಯ ಆರೋಗ್ಯ ಕೇಂದ್ರವೊಂದಕ್ಕೆ ಬಂದ ಗರ್ಭಿಣಿಯೊಬ್ಬಳು ಶೌಚಾಲಯದಲ್ಲಿ ಮಗುವನ್ನು ಹೆತ್ತಿದ್ದಾಳೆ. ನಂತರ ಮಗುವನ್ನು ಅಲ್ಲೇ ಬಿಟ್ಟು ತನ್ನ ಗೆಳೆಯನ ಬೈಕನ್ನು ಹತ್ತಿ ಪರಾರಿಯಾದ ಘಟನೆ ನಿನ್ನೆ ನಡೆದಿದೆ ಎಂದು ವರದಿಯಾಗಿದೆ. ಈಘಟನೆ ಬೆಳಗ್ಗೆ ಎಂಟು ಗಂಟೆ ನಲ್ವತ್ತು ನಿಮಿಷಕ್ಕೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಹೇಗೆ ನಾಟಕೀಯ ಘಟನೆ ನಡೆಯಿತು?

ಪ್ರತ್ಯಕ್ಷದರ್ಶಿಗಳು ವಿವರಿಸುವ ಪ್ರಕಾರ ಶುಕ್ರವಾರದಂದು ಭಿತರವಾರ್‌ನ ಸಾಮುದಾಯಿಕ ಆಸ್ಪತ್ರೆಗೆ ಬೆಳಗ್ಗೆ 8:15ರ ವೇಳೆಗೆ ಹೊರರೋಗಿ ವಿಭಾಗ ಆರಂಭವಾಗುವ ಮೊದಲು ಒಬ್ಬಳು ನೀಲಿ ಬಣ್ಣದ ಸಲವಾರ್ ಶೂಟ್ ಧರಿಸಿದ ಗರ್ಭಿಣಿ ಬಂದಿದ್ದಾಳೆ. ಸ್ವಲ್ಪಸಮಯದಲ್ಲಿ ಅವಳಿಗೆ ಹೆರಿಗೆಯಾಗಿದೆ. ಆ ನಂತರ ಅವಳು ಮಗುವನ್ನು ಬಿಟ್ಟು ಆಕೆ ತನ್ನ ಗೆಳೆಯನ ಜೊತೆ ಹೊರಟು ಹೋಗಿದ್ದಾಳೆ. ನಂತರ ದಾದಿಯರು ವೈದ್ಯರಿಗೆ ಈ ವಿಷಯವನ್ನು ತಿಳಿಸಿ ದ್ದು, ಶಿಶುರೋಗ ತಜ್ಞ ಡಾ. ಗಿರಿರಾಜ್ ಗುಪ್ತ ಮಗುವಿನ ತಪಾಸಣೆ ನಡೆಸಿದ್ದಾರೆ. ಮೂರು ಕಿಲೊ ನೂರಮೂವತ್ತು ಗ್ರಾಂ ಮಗು ಭಾರವಿದ್ದು ಆರೋಗ್ಯಪೂರ್ಣವಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಯುವತಿಯ ವರ್ತನೆಯಿಂದ ಆಕೆಅವಿವಾಹಿತಳಂತೆ ಕಂಡು ಬಂದಿದ್ದಾಳೆ. ಆದ್ದರಿಂದ ಅವಳು ಮಗುವನ್ನು ಅಲ್ಲೇ ಬಿಟ್ಟು ಪರಾರಿಯಾಗಿರಬೇಕೆಂದು ಶಂಕಿಸಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಆದರೆ ಈವರೆಗೂ ಯುವತಿಯನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News