ಅಮೆಝಾನ್ ಭಾರತದ ‘ಅತ್ಯಂತ ಆಕರ್ಷಕ ಇಂಟರ್ನೆಟ್ ಬ್ರಾಂಡ್’

Update: 2016-11-05 13:09 GMT

ಹೊಸದಿಲ್ಲಿ,ನ.5: ಅಮೆರಿಕ ಮೂಲದ ಆನ್‌ಲೈನ್ ಮಾರಾಟ ಮಳಿಗೆ ಅಮೆಝಾನ್ ತನ್ನ ಪ್ರತಿಸ್ಪರ್ಧಿಗಳಾದ ಫ್ಲಿಪ್‌ಕಾರ್ಟ್ ಮತ್ತು ಸ್ನಾಪ್‌ಡೀಲ್ ಹಾಗೂ ಸರ್ಚ್ ಇಂಜಿನ್ ಗೂಗಲ್ ಅನ್ನು ಹಿಂದಿಕ್ಕಿ ಭಾರತದ ಅತ್ಯಂತ ಆಕರ್ಷಕ ಇಂಟರ್ನೆಟ್ ಬ್ರಾಂಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಮೆಝಾನ್ ಅನ್ನು ಭಾರತದ ಅತ್ಯಂತ ಆಕರ್ಷಕ ಇಂಟರ್ನೆಟ್ ಬ್ರಾಂಡ್ ಎಂದು ಘೋಷಿಸಲಾಗಿದೆ ಎಂದು ಟ್ರಸ್ಟ್ ರೀಸರ್ಚ್ ಅಡ್ವೈಸರಿಯು ತನ್ನ ಅಧ್ಯಯನವು ವರದಿಯಲ್ಲಿ ಹೇಳಿದೆ.

ಗೂಗಲ್ ಭಾರತದ ಎರಡನೇ ಅತ್ಯಂತ ಆಕರ್ಷಕ ಇಂಟರ್ನೆಟ್ ಬ್ರಾಂಡ್ ಆಗಿ ಹೊರಹೊಮ್ಮಿದ್ದರೆ ನಂತರದ ಸ್ಥಾನಗಳಲ್ಲಿ ಫ್ಲಿಪ್‌ಕಾರ್ಟ್,ಸ್ನಾಪ್‌ಡೀಲ್ ಮತ್ತು ಫೇಸ್‌ಬುಕ್ ಇವೆ. ದೇಶಾದ್ಯಂತ 16 ನಗರಗಳ ಸುಮಾರು 3,000 ಬಳಕೆದಾರರನ್ನು ಸಮೀಕ್ಷೆಗೊಳಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News