×
Ad

6ನೆ ವಾರ್ಷಿಕ ಭಾರತೀಯ ಭಾಷಾ ಉತ್ಸವ ಆರಂಭ

Update: 2016-11-05 19:45 IST

ಹೊಸದಿಲ್ಲಿ, ನ.5: ‘ಸಾರ್ವಜನಿಕ ಕ್ರಮವಾಗಿ ಭಾಷೆ’ ಎಂಬ ಸಿದ್ಧಾಂತದ ಮೇಲೆ ಬೆಳಕು ಚೆಲ್ಲುವ 6ನೆಯ ಭಾರತೀಯ ಭಾಷೆಗಳ ಉತ್ಸವ (ಐಎಲ್‌ಎಫ್) ‘ಸಮನ್ವಯ’ ಇಂದಿಲ್ಲಿ ಆರಂಭಗೊಂಡಿದೆ. ಖ್ಯಾತ ಗಾಂಧಿವಾದಿ ಇಳಾ ಭಟ್ ಉದ್ಘಾಟನಾ ಭಾಷಣದೊಂದಿಗೆ ಉತ್ಸವಕ್ಕೆ ಚಾಲನೆ ನೀಡಿದ್ದಾರೆ.

ಇಂಡಿಯಾ ಹೆರಿಟೇಜ್ ಸೆಂಟರ್‌ನಲ್ಲಿ ಮೂರು ದಿನಗಳ ಕಾಲ ನಡೆಯುವ ಈ ವಾರ್ಷಿಕ ಕಾರ್ಯಕ್ರಮವು ‘ಸಂಭಾಷಣೆಯ ಮಾಧ್ಯಮ ನೆಲೆಯನ್ನು ಸೃಷ್ಟಿಸಲು ಬಯಸಿದೆ’ ಹಾಗೂ ಉರ್ದು, ತೆಲುಗು, ಗುಜರಾತಿ, ಸಂತಾಲಿ ಹಾಗೂ ಖಾಸಿಗಳಂತಹ ವಿವಿಧ ಭಾಷೆಗಳ ಮೇಲೆ ಬೆಳಕು ಚೆಲ್ಲಲಿದೆ.

ಐಎಲ್‌ಎಫ್ ಸಮನ್ವಯವು, ಮಾತು ಹಾಗೂ ಅಕ್ಷರಗಳಿಂದಾಚೆಗೆ ಭಾಷೆಗಳ ಶೋಧನೆಯನ್ನು ಚಿತ್ರಿಸುತ್ತದೆ. ಅದು ಸೃಜನಶೀಲತೆಗಳ ರೋಮಾಂಚಕಾರಿ ಛೇದನವಾಗಿರುವ ಸಂಭಾಷಣೆಯ ಮಧ್ಯಮ ನೆಲೆಯೊಂದನ್ನು ಸೃಷ್ಟಿಸಬಯಸಿದೆ.

‘‘ಹೌದು! ಈ ಉತ್ಸವವು ಭಾಷೆಗಳ ಪ್ರಜಾಪ್ರಭುತ್ವಕ್ಕೆ ಒಂದು ಕರೆಯಾಗಿದೆ. ಆದರೆ, ಅದಕ್ಕೂ ಹೆಚ್ಚಾಗಿ ಅದು, ಕಲಾವಿದ ಹಾಗೂ ವಿಜ್ಞಾನಿಯಲ್ಲಿ ಹರಿಯುತ್ತಿರುವ ಸೃಜನಶೀಲತೆಯೆಂಬ ಒಂದೇ ನದಿಯ ನೆನಪಿಸುವಿಕೆಯೂ ಆಗಿದೆಯೆಂದು ಉತ್ಸವದ ಸೃಜನಶೀಲ ನಿರ್ದೇಶಕ ರಿಝಿಯೊ ಯೋಹಾನನ್ ರಾಜ್ ಹೇಳಿದ್ದಾರೆ.

40ಕ್ಕೂ ಹೆಚ್ಚು ಕಲಾವಿದರು, ಚಿಂತಕರು ಹಾಗೂ ನಟರು ಭಾಗವಹಿಸುತ್ತಿರುವ ಈ ಉತ್ಸವದಲ್ಲಿ ಭಾಷೆಯ ವಿವಿಧ ವಸ್ತುಗಳು ಹಾಗೂ ಭಾಗಗಳ ಕುರಿತು ಚರ್ಚೆಗಳು ನಡೆಯಲಿವೆ.

ಭಾಷೆಗಳ ಕುರಿತು ಉಪನ್ಯಾಸಗಳು ಅವಶ್ಯವಾಗಿವೆ ಹಾಗೂ ನಡೆಯಲೇಬೇಕಾಗಿದೆ. ಇಲ್ಲದಿದ್ದಲ್ಲಿ ‘ಮಾತೃಭಾಷೆ’ ಎಂಬ ಪದವು ಶೀಘ್ರವೇ ‘ಅಜ್ಜಿ ಭಾಷೆ’ ಎಂದು ಬದಲಾಗಬಹುದು. ಈ ಇಂಗ್ಲಿಷನ್ನು ವಟಗುಟ್ಟುವ ಮಧ್ಯಮ ವರ್ಗವು ತಮ್ಮ ಮಾತೃಭಾಷೆಯನ್ನು ಹೆಚ್ಚು ಬಳಸುವುದಿಲ್ಲ. ಈಗ, ಅತ್ಯಲ್ಪ ಸಂಖ್ಯೆಯ ತಾಯಂದಿರು ಅವರ ಭಾಷೆಯನ್ನು ಉಪಯೋಗಿಸುತ್ತಿರುವುದನ್ನು ಕಾಣುವಾಗ ತನಗೆ ಚಿಂತೆಯಾಗುತ್ತದೆ.

ಅಮೆರಿಕನ್ ಕನಸು ಕಾಣುವುದರಲ್ಲಿ ಮಗ್ನರಾಗಿರುವ ಅವರು, ಈ ಬಗ್ಗೆ ಚಿಂತಿಸುವುದೇ ಇಲ್ಲ. ಈ ಉತ್ಸವವು ಭಾಷೆಯೊಂದಿಗೆ ಬರುವ ಶಕ್ತಿ, ಅಧಿಕಾರ ಹಾಗೂ ಸೃಜನಶೀಲತೆಗಳನ್ನು ಜನರಿಗೆ ಜ್ಞಾಪಿಸುವುದರಿಂದ ಮಹತ್ವದ್ದಾಗಿದೆಯೆಂದು ಆರಂಭದಿಂದಲೇ ಉತ್ಸವವನ್ನು ಬೆಂಬಲಿಸುತ್ತಿರುವ, ರಝಾ ಫೌಂಡೇಶನ್‌ನ ಅಶೋಕ್ ವಾಜಪೇಯಿ ಹೇಳಿದ್ದಾರೆ.

ಎಲ್ಲರಿಗೂ ಮುಕ್ತವಾಗಿರುವ ಈ ಉತ್ಸವ ನ.7ರಂದು ಸಮಾರೋಪಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News