ಮೆಲಾನಿಯ ಟ್ರಂಪ್‌ರ ವಿರುದ್ಧ ಭುಗಿಲೆದ್ದ ಹೊಸ ವಿವಾದ

Update: 2016-11-06 07:35 GMT

ನ್ಯೂಯಾರ್ಕ್,ನವೆಂಬರ್ 6: ಡೊನಾಲ್ಡ್ ಟ್ರಂಪ್ ಪತ್ನಿ ಹಾಗೂ ರೂಪದರ್ಶಿಯಾದ ಮೆಲಾನಿಯ ಅಮೆರಿಕದಲ್ಲಿ ವಾಸಿಸಲು ಕಾನೂನಾತ್ಮಕ ಅನುಮತಿಯನ್ನು ಪಡೆಯುವ ಮೊದಲೇ ಮಾಡೆಲಿಂಗ್ ಮಾಡಿ ಕೋಟ್ಯಂತರ ರೂಪಾಯಿ ಸಂಪಾದಿಸಿದ್ದಾರೆಂದು ಆರೋಪ ಎದ್ದಿದೆ. ಅನಧಿಕೃತ ವಲಸೆ ವೀಸಾ ಕಾನೂನು ಉಲ್ಲಂಘಿಸಿ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವವರ ವಿರುದ್ಧ ತಿರುಗಿ ಬಿದ್ದಿರುವ ಟ್ರಂಪ್‌ಗೆ ಇದೊಂದು ತಿರುಗೇಟು ಆಗಲಿದೆ ಎಂದು ವರದಿಯಾಗಿದೆ.

ಅಸೋಸಿಯೇಟ್ ಪ್ರಸ್ ನ್ಯೂಸ್ ಏಜೆನ್ಸಿ ದಾಖಲೆಗಳ ಮೂಲಕ ಈ ವಿಷಯವನ್ನು ಬಹಿರಂಗಕ್ಕೆ ತಂದಿದೆ. 1996 ಆಗಸ್ಟ್ 27ಕ್ಕೆ ಸ್ಲೋವೇನಿಯದಿಂದ ಸಂದರ್ಶಕ ವೀಸಾದಲ್ಲಿ ಮೆಲಾನಿಯ ಅಮೆರಿಕಕ್ಕೆ ಬಂದಿದ್ದರು. ನಂತರ ಅದೇ ವರ್ಷ ಉದ್ಯೋಗ ವೀಸಾ ಪಡೆದುಕೊಂಡಿದ್ದರು. ಆದರೆ ಸಂಬಳ ಇರುವ ಕೆಲಸವನ್ನು ಮಾಡುವಂತಿರಲಿಲ್ಲ. ಮೆಲಾನಿಯ ಈ ನಿಯಮವನ್ನು ಉಲ್ಲಂಘಿಸಿದ್ದಾರೆ. ಅಂದರೆ ಅನುಮತಿ ಸಿಗುವುದಕ್ಕಿಂತ ಏಳು ತಿಂಗಳು ಮೊದಲೇ ಮೆಲಾನಿಯ ಉದ್ಯೋಗ ಮಾಡಿ ಹಣ ಸಂಪಾದಿಸಿದ್ದಾರೆ ಎಂದು ಅಸೋಸಿಯೇಟ್ ಪ್ರೆಸ್ ದಾಖಲೆಗಳು ಬಹಿರಂಗಪಡಿಸಿದೆ. 2001ರಲ್ಲಿ ಗ್ರೀನ್ ಕಾರ್ಡ್ ಮೆಲಾನಿಯಗೆ ಸಿಕ್ಕಿತ್ತು .ಆದರೆ ಅಮೆರಿಕದ ಪೌರತ್ವ 2006ರಲ್ಲಿ ಲಭಿಸಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News