×
Ad

ಮೃತ ಯೋಧನ ಪಾರ್ಥಿವ ಶರೀರವನ್ನು ಸ್ವದೇಶಕ್ಕೆ ತರಲು ನೆರವಾಗುವಂತೆ ಸುಶ್ಮಾ ಸ್ವರಾಜ್‌ಗೆ ಆಗ್ರಹ

Update: 2016-11-07 15:25 IST

ದಾರ್ಜಿಲಿಂಗ್(ಪ.ಬಂ.),ನ.7: ಕಾಂಗೋದಲ್ಲಿ ಮೃತಪಟ್ಟಿರುವ ಗೂರ್ಖಾ ಯೋಧನ ಶವವನ್ನು ಭಾರತಕ್ಕೆ ಶೀಘ್ರ ವಾಪಸ್ ತರಲು ನೆರವಾಗುವಂತೆ ದಾಜಿಲಿಂಗ್ ಸಂಸದ ಹಾಗೂ ಸಂಸದೀಯ ವ್ಯವಹಾರಗಳ ಸಹಾಯಕ ಸಚಿವ ಎಸ್.ಎಸ್.ಅಹ್ಲುವಾಲಿಯಾ ಅವರು ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಭಾಗವಾಗಿ 4/5 ಗೂರ್ಖಾ ರೈಫಲ್ಸ್‌ನ ಯೋಧ ಬ್ರಿಜೇಶ್ ಥಾಪಾ ಅವರನ್ನು ಕಾಂಗೋದಲ್ಲಿ ನಿಯೋಜಿಸಲಾಗಿದ್ದು, ಅಲ್ಲಿ ಅವರು ಕಳೆದ ವಾರ ನಿಧನರಾಗಿದ್ದಾರೆ. ಥಾಪಾ ಕಾಲಿಂಪಾಂಗ್ ಜಿಲ್ಲೆಯ ಸಿಂಜೀಯ ತಯಾಂಗ್ ದಾಂಗ್ ಬಸ್ತಿಯ ನಿವಾಸಿಯಾಗಿದ್ದು, ಶೋಕತಪ್ತವಾಗಿರುವ ಅವರ ಕುಟುಂಬ ಮತ್ತು ಇಡೀ ಗ್ರಾಮವೇ ಅವರ ಪಾರ್ಥಿವ ಶರೀರದ ಆಗಮನವನ್ನು ಕಾಯುತ್ತಿವೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಅಹ್ಲುವಾಲಿಯಾ ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News