ಪಕ್ಷಾಧ್ಯಕ್ಷರಾಗುವಂತೆ ರಾಹುಲ್‌ಗೆ ಸಿಡಬ್ಲುಸಿ ಮನವಿ

Update: 2016-11-07 13:19 GMT

ಹೊಸದಿಲ್ಲಿ, ನ.7: ಪಕ್ಷದ ನಾಯಕತ್ವವನ್ನು ವಹಿಸಿಕೊಳ್ಳುವಂತೆ ರಾಹುಲ್ ಗಾಂಧಿಯವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು (ಸಿಡಬ್ಲುಸಿ) ಸೋಮವಾರ ಕೇಳಿಕೊಂಡಿದೆ. ಇದು ಅತ್ಯಂತ ಹಳೆಯ ಪಕ್ಷದಲ್ಲಿ ನಾಯಕತ್ವ ಬದಲಾವಣೆಯ ಪ್ರಕ್ರಿಯೆಗೆ ಬಹುಶಃ ಚಾಲನೆ ನೀಡಿದೆ

ಅಸ್ವಸ್ಥರಾಗಿದ್ದ ಸೋನಿಯಾ ಗಾಂಧಿಯವರ ಅನುಪಸ್ಥಿತಿಯಲ್ಲಿ ಸಿಡಬ್ಲುಸಿ ಸಭೆಯ ಅಧ್ಯಕ್ಷತೆಯನ್ನು ರಾಹುಲ್ ವಹಿಸಿದ್ದರು.
ಪಕ್ಷದ ಅಗ್ರ ನಾಯಕರಿದ್ದ ಸಭೆಯಲ್ಲಿ ಮಾಜಿ ರಕ್ಷಣಾ ಸಚಿವ ಎ.ಕೆ.ಆ್ಯಂಟನಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಪಕ್ಷದ ಹೊಣೆಯನ್ನು ವಹಿಸಿಕೊಳ್ಳುವಂತೆ ವಿನಂತಿಸಿದರು. ಆ ಬಳಿಕ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಈ ಬೇಡಿಕೆಯನ್ನು ಅನುಮೋದಿಸಿದರು. ಆ ಬಳಿಕ ಸಿಡಬ್ಲುಸಿಯ ಎಲ್ಲ ಸದಸ್ಯರು ಇದೇ ಬೇಡಿಕೆಯನ್ನು ಮುಂದಿಟ್ಟರು.

ಸದಸ್ಯರ ಭಾವನೆಯ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ತಿಳಿಸುವುದಾಗಿ ಅವರನ್ನು ಭೇಟಿಯಾಗಲು ಸಿಡಬ್ಲುಸಿ ನಿರ್ಧರಿಸಿದೆ.
ಕಾಂಗ್ರೆಸ್ ನಾಯಕರ ಈ ನಡೆಯು ಸುಯೋಜಿತವಾಗಿರುವಂತೆ ಹಾಗೂ ಸಿಡಬ್ಲುಸಿಯ ಬೇಡಿಕೆಯು ರಾಹುಲ್‌ಗೆ ಭಡ್ತಿ ನೀಡುವತ್ತ ಮೊದಲ ನಿರ್ಣಾಯಕ ಹೆಜ್ಜೆಯಾಗಿರುವಂತೆ ತೋರುತ್ತಿದೆ. ಆದಾಗ್ಯೂ ಅವರನ್ನು ಪಕ್ಷದ ಕಾರ್ಯಾಧ್ಯಕ್ಷನನ್ನಾಗಿ ಮಾಡಲಾಗುವುದೇ ಅಥವಾ ಸೋನಿಯಾರ ಸ್ಥಾನದಲ್ಲಿ ಅಧ್ಯಕ್ಷರಾಗಲಿರುವರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News