×
Ad

ಗೆಲ್ಲಲು ಎಷ್ಟು ಮತಗಳು ಬೇಕು?

Update: 2016-11-07 19:46 IST

ಅಭ್ಯರ್ಥಿಯೊಬ್ಬರು ಗೆಲ್ಲಲು, 538 ಮತಗಳ ಪೈಕಿ ಸರಳ ಬಹುಮತವಾದ 270 ಮತಗಳು ಬೇಕು.
ಎರಡು ರಾಜ್ಯಗಳನ್ನು ಹೊರತುಪಡಿಸಿ, ಇತರ ಎಲ್ಲ ರಾಜ್ಯಗಳಲ್ಲಿ ಬಹುಮತ ಪಡೆದ ಅಭ್ಯರ್ಥಿಯು ರಾಜ್ಯದ ಎಲ್ಲ ಇಲೆಕ್ಟರ್‌ಗಳ ಬೆಂಬಲವನ್ನು ಗಳಿಸುತ್ತಾರೆ. ನೆಬ್ರಾಸ್ಕ ಮತ್ತು ಮೇನ್ ರಾಜ್ಯಗಳಲ್ಲಿ ಇದಕ್ಕಿಂತ ಕೊಂಚ ಭಿನ್ನವಾದ ‘ವಿಭಜನೆ ವ್ಯವಸ್ಥೆ’ಯನ್ನು ಅನುಸರಿಸಲಾಗುತ್ತದೆ.

ಕೆಲವು ರಾಜ್ಯಗಳು ಐತಿಹಾಸಿಕವಾಗಿ ಪ್ರತಿ ಚುನಾವಣೆಯಲ್ಲೂ ಡೆಮಾಕ್ರಟಿಕ್ ಅಭ್ಯರ್ಥಿಗಳನ್ನೇ ಆರಿಸುತ್ತಾ ಬಂದಿದ್ದರೆ, ಇನ್ನು ಹಲವು ರಾಜ್ಯಗಳು ರಿಪಬ್ಲಿಕನ್ ಅಭ್ಯರ್ಥಿಗಳನ್ನು ಆರಿಸುತ್ತಿವೆ.

ಹಾಗಾಗಿ, ಬೇರೆ ಬೇರೆ ಚುನಾವಣೆಗಳಲ್ಲಿ ಬೇರೆ ಬೇರೆ ಫಲಿತಾಂಶಗಳನ್ನು ನೀಡುವ ಸುಮಾರು 12 ರಾಜ್ಯಗಳ ಮೇಲೆ ಅಭ್ಯರ್ಥಿಗಳು ಹೆಚ್ಚಿನ ಗಮನವನ್ನು ಕೇಂದ್ರೀಕರಿಸುತ್ತಾರೆ. ಅವುಗಳನ್ನು ‘ಬ್ಯಾಟಲ್‌ಗ್ರೌಂಡ್’ ಅಥವಾ ‘ಸ್ವಿಂಗ್’ ರಾಜ್ಯಗಳೆಂದು ಕರೆಯಲಾಗುತ್ತದೆ.

ಇವುಗಳ ಪೈಕಿ ಮುಖ್ಯವಾದವು ಅತಿ ಹೆಚ್ಚು ಸಂಖ್ಯೆಯ ಇಲೆಕ್ಟರ್‌ಗಳನ್ನು ಹೊಂದಿರುವ ಫ್ಲೋರಿಡ (29), ಪೆನ್ಸಿಲ್ವೇನಿಯ (20) ಮತ್ತು ಓಹಿಯೊ (18)ದಂಥ ರಾಜ್ಯಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News