ಅಗ್ರ-10ರಲ್ಲಿ ಸ್ಥಾನ ಪಡೆಯಲು ಫೆಡರರ್ ವಿಫಲ

Update: 2016-11-07 18:04 GMT

ಲಂಡನ್, ನ.7: ವಿಸ್ ಸೂಪರ್‌ಸ್ಟಾರ್ ರೋಜರ್ ಫೆಡರರ್ 2002ರ ಬಳಿಕ ಮೊದಲ ಬಾರಿ ಎಟಿಪಿ ವರ್ಲ್ಡ್ ಅಗ್ರ-10 ರ್ಯಾಂಕಿಂಗ್‌ನಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

ಸೋಮವಾರ ಇಲ್ಲಿ ಬಿಡುಗಡೆಯಾದ ಎಟಿಪಿ ರ್ಯಾಂಕಿಂಗ್‌ನಲ್ಲಿ ಬ್ರಿಟನ್‌ನ ಆ್ಯಂಡಿ ಮರ್ರೆ ಇದೇ ಮೊದಲ ಬಾರಿ ನಂ.1 ಆಟಗಾರನಾಗಿ ಹೊರ ಹೊಮ್ಮಿದ್ದಾರೆ. 17 ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿ ವಿಜೇತ ಫೆಡರರ್16ನೆ ರ್ಯಾಂಕಿಗೆ ಕುಸಿದಿದ್ದಾರೆ.

ಫೆಡರರ್ ಮಂಡಿನೋವಿನಿಂದ ಬೇಗನೆ ಚೇತರಿಸಿಕೊಳ್ಳುವ ಉದ್ದೇಶದಿಂದ ಜುಲೈನಿಂದ ಯಾವುದೇ ಟೂರ್ನಿಗಳಲ್ಲಿ ಭಾಗವಹಿಸಿಲ್ಲ. ಜನವರಿಯಲ್ಲಿ ಮೆಲ್ಬೋರ್ನ್‌ನಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯನ್ ಓಪನ್‌ನಲ್ಲಿ ಫಿಟ್ ಆಗುವ ವಿಶ್ವಾಸದಲ್ಲಿದ್ದಾರೆ.

ಫೆಡರರ್ 2012ರಲ್ಲಿ ವಿಂಬಲ್ಡನ್ ಟೂರ್ನಿಯಲ್ಲಿ ಕೊನೆಯ ಬಾರಿ ಪ್ರಮುಖ ಪ್ರಶಸ್ತಿ ಜಯಿಸಿದ್ದರು.

‘‘ಫೆಡರರ್ ಕಳೆದ ವರ್ಷ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸುವುದರಿಂದ ವಂಚಿತರಾಗಿದ್ದರು. ಅವರಿಗೆ ವಯಸ್ಸಾಗಿದ್ದರೂ ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದ್ದಾರೆ. ಮುಂದಿನ ವಾರ ಟೆನಿಸ್‌ಗೆ ವಾಪಸಾಗುವುದು ಫೆಡರರ್‌ಗೆ ಇರುವ ಭಾವನಾತ್ಮಕ ಸವಾಲಾಗಿದೆ’’ ಎಂದು ಫೆಡರರ್ ಕೋಚ್, ಮಾಜಿ ನಂ.1 ಆಟಗಾರ ಎಡ್ಗರ್ಬ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News