ಆಹಾರ ಸುರಕ್ಷತೆಯ ಬಗ್ಗೆ ಎಚ್ಚರವಿರಲಿ
ಮಾನ್ಯರೆ,
ಇತ್ತೀಚೆಗೆ ಮಾಧ್ಯಮವೊಂದು ವಿಷಪೂರಿತ ಸಿಹಿತಿಂಡಿಗಳ ಕುರಿತು ವರದಿ ಮಾಡಿತ್ತು. ಈ ಬೆನ್ನಲ್ಲೇ ಹಟ್ಟಿ ಚಿನ್ನದ ಗಣಿಯ ಅಂಗಡಿಯೊಂದರಲ್ಲಿ ನಂದಿನಿ ಪ್ರಾಡಕ್ಟ್‌ನ ಕ್ರ್ಯಾಕ್‌ಬೈಟ್ ಹೆಸರಿನ ಬಿಸ್ಕಟ್ ಕೊಂಡು ತಿನ್ನುವಾಗ ಬಿಸ್ಕತ್‌ನಲ್ಲಿ ಸುಟ್ಟು ಕರಕಲಾದ ಪ್ಲಾಸ್ಟಿಕ್ ಕಾಣಿಸಿಕೊಂಡಿದ್ದು ಬೆಚ್ಚಿಬೀಳಿಸುವಂತೆ ಮಾಡಿದೆ. ಈ ಕುರಿತು ನಂದಿನಿ ಪ್ರಾಡಕ್ಟ್‌ನ ಕಸ್ಟಮರ್ ಕೇರ್‌ಗೆ ಕರೆ ಮಾಡಿ ದೂರು ನೀಡಿದರೆ, ‘‘ನಾವೇನು ಬೇಕು ಅಂತ ಪ್ಲಾಸ್ಟಿಕ್ ಹಾಕಿಲ್ಲ’’ ಅಂತ ಉಡಾಫೆಯ ಉತ್ತರ ನೀಡಿ ಜಾರಿಕೊಳ್ಳಲು ಮುಂದಾಗಿದ್ದಾರೆ. ಈ ಕುರಿತು ಟಿವಿ ಮಾಧ್ಯಮ ಹಾಗೂ ಪತ್ರಿಕೆಗಳು ವರದಿ ಮಾಡಿದ್ದರೂ ಆಹಾರ ಸುರಕ್ಷಣಾ ಇಲಾಖೆ ಮಾತ್ರ ಬಿಸ್ಕೆಟ್ ತಯಾರಿಸಿದ ಕಂಪೆನಿ ಮೇಲೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.
ಇಂತಹ ಅನೇಕ ಕಂಪೆನಿಗಳ ಆಹಾರದ ಗುಣಮಟ್ಟ ಕಳಪೆ ಇರೋದು ಬೆಳಕಿಗೆ ಬಂದಿದ್ದರೂ ಅದರ ಕಡಿವಾಣಕ್ಕೆ ಆಹಾರ ಸುರಕ್ಷಣಾ ಇಲಾಖೆ ಮುಂದಾಗುತ್ತಿಲ್ಲ. ಈಗಲಾದರೂ ಸರಕಾರ ಈ ಕುರಿತು ಅಸಡ್ಡೆ ತೋರದೆ ಕೂಡಲೇ ಒಂದು ಕಟ್ಟುನಿಟ್ಟಿನ ಕಾನೂನನ್ನು ರೂಪಿಸಿ ಇಂತಹ ಬೇಜವಾಬ್ದಾರಿತನಕ್ಕೆ ಕಡಿವಾಣ ಹಾಕಿ ಗ್ರಾಹಕರ ಆರೋಗ್ಯ ಮತ್ತು ಪ್ರಾಣವನ್ನು ಉಳಿಸಬೇಕಿದೆ.